Ticker

6/recent/ticker-posts

Ad Code

Responsive Advertisement

ಶಾಸಕ ಸೋಮಲಿಂಗಪ್ಪನವರಿ0ದ ಶ್ರೀ ಶಾಮ್‌ಪ್ರಸಾದ್ ಮುಖರ್ಜಿ ಜನ್ಮದಿನಾಚರಣೆ

ಬಳ್ಳಾರಿ ಜುಲೈ 07.  ಭಾರತದ ಅಖಂಡತೆಗೆ ಶ್ರಮಿಸಿದ ಧೀಮಂತ ನಾಯಕ, ಪ್ರತಿಭೆ ಪ್ರಾವೀಣ್ಯ ಪ್ರಾಮಾಣಿಕತೆಯ ಬಂಡಾರವೇ  ಆಗಿರುವಂತ ದಿವಂಗತ ಶ್ರೀ ಶಾಮ್ ಪ್ರಸಾದ್ ಮುಖರ್ಜಿ ಯವರ ಜನ್ಮದಿನಾಚರಣೆಯನ್ನು, ಸಿರುಗುಪ್ಪ ಕ್ಷೇತ್ರದ ಶಾಸಕ ಎಂ. ಎಸ್. ಸೋಮಲಿಂಗಪ್ಪನವರ ಆದೇಶದಮೇರೆಗೆ   ನೂತನ ಜಿಲ್ಲಾಪಂಚಾಯತಿ ಕ್ಷೇತ್ರ ವಾಗಿರುವ ಅಗಸನೂರು ಗ್ರಾಮದಲ್ಲಿ ಬಿಜೆಪಿಯ ಮುಖಂಡರಾದ  ಪಂಪಾರೆಡ್ಡಿ ಯವರ ಮನೆಯಲ್ಲಿ ಕಾರ್ಯಕ್ರಮ ಜರುಗಿತು, 

ಜನ್ಮದಿನದ ಅಂಗವಾಗಿ ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿ ಚುನಾವಣೆಯ ಪ್ರಯುಕ್ತ ಪೂರ್ವಭಾವಿ ಸಭೆಯನ್ನ ಆಯೋಜಿಸಲಾಯಿತು, ಬೆಳಿಗ್ಗೆ 11ಗಂಟೆ ಗೆ ಅಗಸನೂರು ಜಿಲ್ಲಾ ಪಂಚಾಯತಿ ಪರ್ವಾಭಾವಿ ಸಭೆಯನ್ನು ಅಗಸನೂರು ಗ್ರಾಮದಲ್ಲಿ ನಡೆಯಿತು, ಮತ್ತು ದೇಸನೂರು ಜಿಲ್ಲಾಪಂಚಾಯತಿ ಪೂರ್ವಭಾವಿ ಸಭೆಯನ್ನು  ಸಾಯಂಕಾಲ 4 ಗಂಟೆ ಗೆ ನಂದೀಪುರ ಕ್ಯಾಂಪ್ ರಾಮದೇವರ ಗುಡಿಯಲ್ಲಿ ಕಾರ್ಯಕ್ರಮ ನಡೆಯಿತು.  

ಈ ಒಂದು ಕಾರ್ಯಕ್ರಮದಲ್ಲಿ ಮಂಡಲ ಬಿಜೆಪಿ ಅಧ್ಯಕ್ಷರು ಆರ್. ಸಿ. ಪಂಪನಗೌಡರು, ಜಿಲ್ಲಾ ಪಂಚಾಯತಿ ಸದಸ್ಯರು ಕೋಟೇಶ್ವರರೆಡ್ಡಿ, ಎ. ಪಿ. ಎಂ. ಸಿ. ಮಾಜಿ ಅಧ್ಯಕ್ಷರು ನಾಗೇಶಪ್ಪ, ಪ್ರಧಾನ ಕಾರ್ಯದರ್ಶಿ ಬಂಡ್ರಾಳ್ ಮಲ್ಲಿಕಾರ್ಜುನ,ನಗರಸಭೆ ಸದಸ್ಯರು ಮೇಕಲಿ ವೀರೇಶ, ಮೋಹನರೆಡ್ಡಿ,ತಾ. ಪಂ. ಉಪಾಧ್ಯಕ್ಷರು ಶರಣಬಸವ ಸಾಹುಕಾರ್, ಸಿಂಗ್ರಿ ಮುದುಕಪ್ಪ, ಮುಖಂಡರು, ಕೊಡ್ಲೆ ಮಲ್ಲಿಕಾರ್ಜುನ, ಭೀಮರೆಡ್ಡಿ, ಗಂಗಾರಾಮ್ ಸಿಂಗ್. ಇಬ್ರಾಂಪುರ ಗಂಗಪ್ಪ,ಶಿವಪ್ಪ ಆಚಾರ್, ಮಹಾದೇವ. ಬಾಗೇವಾಡಿ ಪಂಪನಗೌಡ, ಜಗನ್ನಾಥ ರೆಡ್ಡಿ, ಇನ್ನು ಇತರರು ಭಾಗವಹಿಸಿದ್ದರು.


Post a Comment

0 Comments

Ad Code

Responsive Advertisement