Ticker

6/recent/ticker-posts

Ad Code

Responsive Advertisement

ಬಳ್ಳಾರಿ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಅವರಿಗೆ ಸಚಿವ ಸ್ಥಾನ...?

ಬಳ್ಳಾರಿ,ಜು.29-ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಆಡಳಿತ ಚುಕ್ಕಾಣಿ ಹಿಡಿದಿರುವ ಬೆನ್ನಲ್ಲೇ ಇದೀಗ ಸಂಭಾವ್ಯ ಸಚಿವರ ಪಟ್ಟಿ ಸಿದ್ಧವಾಗುತ್ತಿದ್ದು, ಆಗಸ್ಟ್ 5ರೊಳಗೆ ಬಿಡುಗಡೆಯಾಗಲಿರುವ ಮೊದಲ ಪಟ್ಟಿಯಲ್ಲಿ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ ಅವರ ಹೆಸರೂ ಕೂಡಾ ಕೇಳಿ ಬರುತ್ತಿದೆ. 

ಈ ಕುರಿತು ಬಿಜೆಪಿ ರಾಜ್ಯ ಘಟಕದ ಮೂಲಗಳಿಂದ ಮಾಹಿತಿ ಲಭಿಸಿದ್ದು, ಬೆಂಗಳೂರಿನ "ಕೇಶವ ಕೃಪಾ" ಮತ್ತು ಮುಖ್ಯಮಂತ್ರಿ "ಬಸವ ಕೃಪಾ" ಕಟಾಕ್ಷದಿಂದ ಸೋಮಶೇಖರ್ ರೆಡ್ಡಿ ಲೋಕೋಪಯೋಗಿ ಇಲಾಖೆ ಅಥವಾ ಆರೋಗ್ಯ ಇಲಾಖೆಯ ಸಚಿವರಾಗಲಿದ್ದಾರೆ. ಇದರೊಂದಿಗೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಜಿ.ಸೋಮಶೇಖರ್ ರೆಡ್ಡಿ ಅವರು ಬಿಜೆಪಿಯ ಹಿರಿಯ ನಾಯಕ, ಸಚಿವ ಬಿ.ಶ್ರೀರಾಮುಲು ಅವರ ರಾಜಕೀಯ ಗರಡಿಯಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ಪಕ್ಷ ನಿμÀ್ಠರಾಗಿ, ಜನಪರ ಕೆಲಸ ಮಾಡಿರುವ ಹಿನ್ನೆಲೆಯಲ್ಲಿ ಈ ಬಾರಿ ಸಚಿವ ಸ್ಥಾನ ಲಭಿಸಲಿದೆ ಎಂದು ಹೇಳಲಾಗುತ್ತಿದೆ.

 ಸಹೋದರ ಜಿ.ಜನಾಧ೵ನರೆಡ್ಡಿ ಮತ್ತು ಬಿ.ಶ್ರೀರಾಮುಲು ಅವರು ಕೈಗೊಳ್ಳುವ ಸಾಮಾಜಿಕ ಸೇವೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಬಡವರ, ದೀನ-ದಲಿತರ, ವೃದ್ಧರ ಮತ್ತು ಅಸಹಾಯಕರಿಗಾಗಿ ತುಡಿಯುವ ಅವರ ವಿನೀತ ಕಾಯ೵ಕ್ರಮಗಳನ್ನು ಪಕ್ಷದ ವರಿμÀ್ಠರು ಗಮನಿಸಿದ್ದಾರೆ. ಆರ್‍ಎಸ್‍ಎಸ್ ನ ನಾಯಕರೂ ಸಹ ಸೋಮಶೇಖರ್ ರೆಡ್ಡಿ ಅವರ ಸಮಾಜ ಸೇವೆ, ಪಕ್ಷ ನಿμÉ್ಠ ಗುರುತಿಸಿದ್ದಾರೆ. ಈಗಾಗಲೇ ಎರಡು ಬಾರಿ ಶಾಸಕರಾಗಿ ಬಳ್ಳಾರಿ ನಗರದಲ್ಲಿ ನಿರೀಕ್ಷೆಗೂ ಮಿರಿ ಕೆಲಸ ಮಾಡಿದ್ದಾರೆ. ಕುಡಿಯುವ ನೀರು, ರಸ್ತೆ, ಶೌಚಾಲಯ, ಚರಂಡಿ, ಉದ್ಯಾನವನ ಸೇರಿದಂತೆ ಹಲವಾರು ಅಭಿವೃದ್ಧಿ ಕಾಯ೵ಗಳನ್ನು ಮಾಡಿದ್ದಾರೆ. ಒಂದು ಬಾರಿ ಅನ್ಯ ಕಾರಣಗಳಿಂದ ಚುನಾವಣೆಗೆ ಸ್ಪಧಿ೵ಸದೇ ದೂರ ಉಳಿದಿದ್ದರು. ಹೀಗಾಗಿ ಅನಿಲ್ ಲಾಡ್ ಅವರು ಬಳ್ಳಾರಿ ನಗರ ಶಾಸಕರಾಗಬೇಕಾಯಿತು. ಜಿ.ಸೋಮಶೇಖರ್ ರೆಡ್ಡಿ ಎಲ್ಲ ಸಮುದಾಯಗಳೊಂದಿಗೆ ಬೆರೆತು ಪಕ್ಷವನ್ನು ಬಲಪಡಿಸುವ ಮತ್ತು ನಾಯಕತ್ವದ ಎಲ್ಲ ಗುಣಗಳನ್ನು ಮೈಗೂಡಿಸಿಕೊಂಡಿದ್ದಾರೆ. 

3ನೇ ಬಾರಿಗೆ ಶಾಸಕರಾಗಿಯೂ ಕ್ಷೇತ್ರದ ಸವ೵ತೋಮುಖ ಬೆಳವಣಿಗೆಗೆ ತಮ್ಮನ್ನು ತೊಡಗಿಸಿಕೊಂಡಿರುವ ಕಾರಣಕ್ಕೆ ಈ ಬಾರಿ ಸಚಿವ ಸ್ಥಾನ ಮತ್ತು ಬಳ್ಳಾರಿ ಉಸ್ತುವಾರಿ ಜವಾಬ್ದಾರಿ ಲಭಿಸಲಿದೆ. ಬಿ.ಶ್ರೀರಾಮುಲು ಅವರಿಗೆ ಡಿಸಿಎಂ ಪಟ್ಟ ಲಭಿಸುವ ಸಾಧ್ಯತೆ ಕೈ ತಪ್ಪಿದಲ್ಲಿ ಸಚಿವ ಸ್ಥಾನ ಮತ್ತು ಉಸ್ತುವಾರಿ ಮಂತ್ರಿ ಸ್ಥಾನ ಸಿಗುವುದು ಗ್ಯಾರಂಟಿ. ಒಟ್ಟಿನಲ್ಲಿ ಬಳ್ಳಾರಿಯ ಇಬ್ಬರು ನಾಯಕರಿಗೆ ಈ ಬಾರಿ "ಬಸವ ದಳ" ದಲ್ಲಿ ಸಚಿವ ಸ್ಥಾನ ಪಕ್ಕಾ ಎಂದು ಬಲ್ಲ ಮೂಲಗಳಿಂದ ಹೇಳಲಾಗುತ್ತಿದೆ.


Post a Comment

0 Comments

Ad Code

Responsive Advertisement