Ticker

6/recent/ticker-posts

Ad Code

Responsive Advertisement

ತ.ನಾಡು ರಾಜ್ಯಾಧ್ಯಕ್ಷರಾಗಿ ಅಣ್ಣಾಮಲೈ: ನಳಿನ್‍ಕುಮಾರ್ ಕಟೀಲ್ ಸ್ವಾಗತ

ಬೆಂಗಳೂರು: ಬಿಜೆಪಿಯ ತಮಿಳುನಾಡು ರಾಜ್ಯಾಧ್ಯಕ್ಷರನ್ನಾಗಿ ಮಾಜಿ ಐಪಿಎಸ್ ಅಧಿಕಾರಿ ಶ್ರೀ ಕೆ. ಅಣ್ಣಾಮಲೈ ಅವರ ನೇಮಕವನ್ನು ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ಶ್ರೀ ನಳಿನ್‍ಕುಮಾರ್ ಕಟೀಲ್ ಅವರು ಸ್ವಾಗತಿಸಿದ್ದಾರೆ.


ಶ್ರೀ ಅಣ್ಣಾಮಲೈ ಅವರು ಸರಳ ವ್ಯಕ್ತಿತ್ವ ಹೊಂದಿದ್ದು, ಪ್ರಾಮಾಣಿಕ- ದಕ್ಷ ಅಧಿಕಾರಿಯಾಗಿ ಚಿರಪರಿಚಿತರು. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಜೆ.ಪಿ.ನಡ್ಡಾ ಅವರು ಈ ನೇಮಕ ಮಾಡಿದ್ದು, ಶ್ರೀ ಅಣ್ಣಾಮಲೈ ಅವರ ನೇತೃತ್ವದಲ್ಲಿ ಪಕ್ಷವು ತಮಿಳುನಾಡಿನಲ್ಲಿ ಸದೃಢವಾಗಿ ಬೆಳೆಯಲಿದೆ; ಸಂಘಟನೆಯನ್ನು ರಾಜ್ಯದೆಲ್ಲೆಡೆ ದೃಢಗೊಳಿಸಲು ಅವರು ಶಕ್ತರಾಗಲಿದ್ದಾರೆ ಎಂಬ ವಿಶ್ವಾಸವನ್ನು ಶ್ರೀ ನಳಿನ್‍ಕುಮಾರ್ ಕಟೀಲ್ ಅವರು ವ್ಯಕ್ತಪಡಿಸಿದ್ದಾರೆ.


Post a Comment

0 Comments

Ad Code

Responsive Advertisement