ಮೈಸೂರು: ಶಾಸಕ ಬಸನಗೌಡ ಪಾಟೀಲ ಯತ್ನಾಳ, ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಭೇಟಿಯಾಗಿ ಚರ್ಚೆ ನಡೆಸಿದ್ದು, ಈ ಇಬ್ಬರ ಭೇಟಿ ಕುತೂಹಲ ಕೆರಳಿಸಿದೆ.
ಚಾಮುಂಡಿ ಬೆಟ್ಟ, ನಂಜನಗೂಡು, ದೇವನೂರು ಮಠ, ಹೊಸ ಮಠಕ್ಕೆ ಭೇಟಿ ನೀಡಿದ್ದ ಯತ್ನಾಳ ವಿಶ್ವನಾಥ್ ಜೊತೆ ಉಭಯ ಕುಶಲೋಪರಿ ಹಂಚಿಕೊಂಡರು. ನಂತರ ಇಬ್ಬರೂ ಕೊಠಡಿಯೊಂದರಲ್ಲಿ ಗೋಪ್ಯ ಮಾತುಕತೆ ನಡೆಸಿದರು.
ಈ ಇಬ್ಬರೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಮಾಡುತ್ತಿರುವವರು. ಮುಖ್ಯಮಂತ್ರಿ ಬದಲಾವಣೆಗಾಗಿ ಒತ್ತಾಯಿಸುತ್ತಿರುವವರು.
0 Comments