Ticker

6/recent/ticker-posts

Ad Code

Responsive Advertisement

ಡಿ.ಎಲ್.ಇಡಿ ಮತ್ತು ಡಿ.ಪಿ.ಎಸ್.ಇ ಪರೀಕ್ಷೆಗೆ ಅರ್ಜಿ ಆಹ್ವಾನ

ಬೆಂಗಳೂರು, ಜುಲೈ 05 (ಕರ್ನಾಟಕ ವಾರ್ತೆ): ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ, ಇತರೆ ಪರೀಕ್ಷೆಗಳು ವತಿಯಿಂದ ಆಗಸ್ಟ್-2021ರ ಮಾಹೆಯಲ್ಲಿ ನಡೆಯಲಿರುವ ಡಿ.ಎಲ್.ಇಡಿ ಮತ್ತು ಡಿ.ಪಿ.ಎಸ್.ಇ ಪ್ರಥಮ ದ್ವಿತೀಯ ಮುಖ್ಯ ಪರೀಕ್ಷೆಗಳನ್ನು ದಿನಾಂಕ: 05-08-2021 ರಿಂದ ದಿನಾಂಕ: 11-08-2021ರವರೆಗೆ ಅಭ್ಯರ್ಥಿಗಳಿಗೆ ನಡೆಸಲು ಅಧಿಸೂಚನೆ ಹೊರಡಿಸಿದೆ.

 ಪರೀಕಾ ಅರ್ಜಿಗಳನ್ನು ಸಂಬಂಧಿಸಿದ ಡಿ.ಇಡಿ ಕಾಲೇಜುಗಳ ಮುಖಾಂತರ ಆನ್‍ಲೈನ್‍ನಲ್ಲಿ ಡಿ.ಎಲ್.ಇಡಿ ಪರೀಕ್ಷೆಗೆ ದಿನಾಂಕ: 05-07-2021 ರಿಂದ ದಿನಾಂಕ: 12-07-2021ರವರೆಗೆ ಹಾಗೂ ಡಿ.ಪಿ.ಎಸ್.ಇ ಪರೀಕ್ಷೆಗೆ ದಿನಾಂಕ: 12-07-2021 ರಿಂದ ದಿನಾಂಕ: 17-07-2021ರವರೆಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ವೆಬ್‍ಸೈಟ್ ವಿಳಾಸ:  https://sslc.karnataka.gov.in  ನಿಂದ ಪಡೆಯಬಹುದಾಗಿದೆ. ಕಚೇರಿ ವಿಳಾಸ: ನಿರ್ದೇಶಕರು (ಇತರೆ ಪರೀಕ್ಷೆಗಳು), ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ, ಮಲ್ಲೇಶ್ವರಂ, ಬೆಂಗಳೂರು ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Post a Comment

0 Comments

Ad Code

Responsive Advertisement