ಮನೆಯ ಮುಂಭಾಗ ತಮ್ಮ ಹೋಂಡಾ ಡಿಯೋ ದ್ವಿಚಕ್ರವಾಹನವನ್ನು ನಿಲ್ಲಿಸಿ, ಮರುದಿನ ಬೆಳಿಗ್ಗೆ ನೋಡಲಾಗಿ ಯಾರೋ ಕಳ್ಳರು ತನ್ನ ದ್ವಿಚಕ್ರವಾಹನವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಇದನ್ನು ಪತ್ತೆ ಮಾಡಿಕೊಡಬೇಕೆಂದು ಕೊಟ್ಟ ದೂರಿನ ಮೇರೆಗೆ ನಂದಿನಿಲೇಔಟ್ ಪೊಲೀಸ್ ಠಾಣೆಯಲ್ಲಿ ದ್ವಿಚಕ್ರ ವಾಹನ ಕಳವು ಪ್ರಕರಣ ದಾಖಲಾಗಿರುತ್ತದೆ.
ನಂದಿನಿಲೇಔಟ್ ಪೊಲೀಸ್ ಠಾಣೆ ಸಿಬ್ಬಂದಿ ಲಗ್ಗೆರೆ, ಕೃಷ್ಣಭವನ ಹೋಟೆಲ್ ಬಳಿ ಗಸ್ತಿನಲ್ಲಿದ್ದಾಗ ಮೂರು ಆಸಾಮಿಗಳು ದ್ವಿಚಕ್ರವಾಹನದಲ್ಲಿ ಬಂದಾಗ ದಾಖಲಾತಿ ಪರಿಶೀಲಿಸಲಾಗಿ ವಾಹನವು ಕಳವು ಮಾಡಿರುವುದಾಗಿ ತಿಳಿಸಿರುತ್ತಾರೆ. ಸದರಿಯವರುಗಳನ್ನು ದ್ವಿಚಕ್ರ ವಾಹನದ ಸಮೇತ ಠಾಣೆಗೆ ಕರೆ ತಂದು ಹೆಚ್ಚಿನ ವಿಚಾರಣೆ ಮಾಡಲಾಗಿ, ಪ್ರಕರಣದಲ್ಲಿ ಮೂರು ಜನ ಆಸಾಮಿಗಳನ್ನು ದಸ್ತಗಿರಿ ಮಾಡಿ, ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಸುಮಾರು 6.88 ಲಕ್ಷ ರೂ. ಬೆಲೆ ಬಾಳುವ ವಿವಿಧ ಕಂಪನಿಯ 10-ದ್ವಿಚಕ್ರವಾಹನಗಳು ಮತ್ತು 1-ತ್ರಿಚಕ್ರವಾಹನ ವಶಪಡಿಸಿಕೊಳ್ಳುವಲ್ಲಿ ನಂದಿನಿಲೇಔಟ್ ಪೊಲೀಸರು ಯಶಸ್ವಿಯಾಗಿರುತ್ತಾರೆ.
ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಎ1- ಆರೋಪಿಯು ದ್ವಿಚಕ್ರವಾಹನ ಕಳವು ಪ್ರಕರಣದಲ್ಲಿ ದಿನಾಂಕ 26-10-2020 ರಂದು ಮಹಾಲಕ್ಷಿö್ಮÃಲೇಔಟ್ ಪೊಲೀಸರು ದಸ್ತಗಿರಿ ಮಾಡಿ ಜೈಲಿಗೆ ಕಳುಹಿಸಿದ್ದು, ಮಾಚ್ 2021 ನೇ ಸಾಲಿನಲ್ಲಿ ಬಿಡುಗಡೆಯಾಗಿರುತ್ತಾನೆ. ಎ2- ಆರೋಪಿಯು ಈ ಹಿಂದೆ ದ್ವಿಚಕ್ರವಾಹನ ಕಳವು ಪ್ರಕರಣದಲ್ಲಿ ಮಾಗಡಿ ರಸ್ತೆ ಪೊಲೀಸರು ಬಂಧಿಸಿರುತ್ತಾರೆ. ಸದರಿ ಆರೋಪಿಯ ಬೆರಳು ಮುದ್ರೆಯನ್ನು ಪರಿಶೀಲನೆಗೆ ಕಳುಹಿಸಿದಾಗ 2020 ನೇ ಸಾಲಿನಲ್ಲಿ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಮೊಬೈಲ್ ಅಂಗಡಿಯ ರೋಲಿಂಗ್ ಮುರಿದು ರಾತ್ರಿ ಕನ್ನಾ ಕಳವು ಮಾಡಿರುವ ಪ್ರಕರಣ ಪತ್ತೆಯಾಗಿರುತ್ತದೆ.
ಆರೋಪಿಗಳ ಬಂಧನದಿAದ ನಂದಿನಿಲೇಔಟ್-2, ರಾಜಗೋಪಾಲನಗರ-1, ಪೀಣ್ಯ-3, ಜಾಲಹಳ್ಳಿ-1, ಅನ್ನಪೂರ್ಣೇಶ್ವರಿನಗರ-1, ಆರ್.ಎಂ.ಸಿ.ಯಾರ್ಡ್-1, ಮಹಾಲಕ್ಷಿö್ಮÃಲೇಔಟ್-1 ಒಟ್ಟು 10 ದ್ವಿಚಕ್ರವಾಹನಗಳು ಹಾಗೂ ನಂದಿನಿಲೇಔಟ್-1 ತ್ರಿಚಕ್ರವಾಹನ ಮತ್ತು ರಾಜಾಜಿನಗರ -1 ರಾತ್ರಿ ಕನ್ನಾ ಕಳವು ಸೇರಿ ಒಟ್ಟು 12 ಪ್ರಕರಣಗಳು ಪತ್ತೆಯಾಗಿರುತ್ತದೆ.
ಪ್ರಕರಣದಲ್ಲಿ ಕೆ.ಎಸ್. ವೆಂಕಟೇಶ್ ನಾಯ್ಡು, ಎಸಿಪಿ, ಮಲ್ಲೇಶ್ವರಂ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ನಂದಿನಿ ಲೇಔಟ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್, ವೆಂಕಟೇಗೌಡ, ರವರ ನೇತೃತ್ವದಲ್ಲಿ ಪಿಎಸ್‌ಐಗಳಾದ ಸಿ.ಲಕ್ಷö್ಮಣ್, ನಿತ್ಯಾನಂದಚಾರಿ, ಭೀಮಾಶಂಕರ್ ಹಾಗೂ ಸಿಬ್ಬಂದಿ ಚೋಳಯ್ಯ. ಅಭಿಷೇಕ್. ಪ್ರಸಾದ್. ಸುಭಾಷ್. ಬಸವರಾಜ ಕಂಕಣವಾಡಿ, ಉಮೇಶ್, ಬಸವಣ್ಣರವರುಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

0 Comments