Ticker

6/recent/ticker-posts

Ad Code

Responsive Advertisement

ವೈದ್ಯ ದಿನಾಚರಣೆ ಹಾಗೂ ಪತ್ರಿಕಾ ದಿನಾಚರಣೆ: ಜಗತ್ತಿನ ಶ್ರೇಷ್ಠ ವೃತ್ತಿಗಳಲ್ಲಿ ವೈದ್ಯ ವೃತ್ತಿಯೂ ಒಂದು

ಯಶವಂತಪುರ : ಜಗತ್ತಿನ ಶ್ರೇಷ್ಠ ವೃತ್ತಿಗಳಲ್ಲಿ ವೈದ್ಯ ವೃತ್ತಿಯೂ ಒಂದಾಗಿದ್ದು ಮಾನವೀಯ ಅಂತಃಕರಣದಿಂದ ಜನತೆಯ ಸೇವೆಗೆ ಅರ್ಪಿಸಿಕೊಂಡಿರುವ ವೈದ್ಯರ ಕಾರ್ಯ ಶ್ಲಾಘನೀಯವಾಗಿದೆ ಎಂದು  ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ  ಕಾರ್ಯ ಕಾರಿಣಿ  ಸದಸ್ಯ ಎನ್. ಕದರಪ್ಪ ತಿಳಿಸಿದರು.

ಯಶವಂತಪುರ ವಿಧಾನಸಭಾ ಕ್ಷೇತ್ರ ಬಿಬಿಎಂಪಿ ಉಲ್ಲಾಳು ವಾರ್ಡ್  ರೋಟರಿ ಬೆಂಗಳೂರು ವಿದ್ಯಾಲಯ ಶಾಲೆಯ ಆವರಣದಲ್ಲಿ ವೈದ್ಯ ದಿನಾಚರಣೆ ಹಾಗೂ ಪತ್ರಿಕಾ ದಿನಾಚರಣೆ ಅಂಗವಾಗಿ  ಆಯೋಜಿಸಿದ್ದ ಕಾರ್ಯಕ್ರಮದಲ್ಲಿ  ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು. ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ಅವರ ಮಾರ್ಗದರ್ಶನದಲ್ಲಿ ಕೋವಿಡ್ ಸೋಂಕಿನಿಂದ ರಕ್ಷಣೆ ಪಡೆಯಲು ವಿಶೇಷ ಶಿಬಿರಗಳ ಮೂಲಕ  ಅಗತ್ಯ ಲಸಿಕೆ ದೊರಕಿಸಿಕೊಡಲಾಗುತ್ತಿದೆ ಎಂದರು. 

ಕೋರೋನಾ ವ್ಯಾಪಕವಾಗಿ ಹರಡುತ್ತಿದ್ದ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು  ರೋಗಿಗಳ  ಸೇವೆಗೆ ಅರ್ಪಿಸಿಕೊಂಡು ಕಾರ್ಯನಿರ್ವಹಿಸಿದ ವೈದ್ಯರ ಕಾರ್ಯ ಎಷ್ಟು  ಬಣ್ಣಿಸಿದರೂ ಸಾಲದು ಎಂದರು. ಕೋರೋನಾ ಮಹಾಮಾರಿ ಸೋಂಕು ಉಲ್ಬಣಗೊಂಡ ಸಂದರ್ಭದಲ್ಲಿಯೂ ಪ್ರಚಲಿತ ವಿದ್ಯಮಾನಗಳನ್ನು ಹಾಗೂ ಸಮಾಜದ ಆಗುಹೋಗುಗಳ ಬಗ್ಗೆ ಅತ್ಯಂತ  ನಿಖರ,ವಸ್ತುನಿಷ್ಠ ವರದಿಗಳನ್ನು ನೀಡಿ ಜನತೆಯನ್ನು ಜಾಗೃತಿ ಗೊಳಿಸಿದ ಪತ್ರಕರ್ತರ ಸೇವೆಯೂ ಅಮೋಘವಾದದ್ದು ಎಂದರು.  

ಸಾಮಾಜಿಕ ಬದ್ಧತೆಯಿಂದ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಸಮಾಜದ ಒಳಿತಿಗಾಗಿ ಕಾರ್ಯನಿರ್ವಹಿಸುವ ಪತ್ರಕರ್ತರ ಸೇವೆ ಅನುಕರಣೀಯ  ಎಂದರು.ಉಲ್ಲಾಳು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ಅನುಪಮಾ ಮಾತನಾಡಿ ಕೋವಿಡ್ ಸೋಂಕು ನಿರ್ಮೂಲನೆಗೆ ನಾಗರಿಕರ ಸಹಕಾರ ಅಗತ್ಯವಾಗಿದ್ದು ಆರೋಗ್ಯ ಸಿಬ್ಬಂದಿ ಕೋವಿಡ್ ಸೋಂಕಿನ ಕುರಿತು ಸ್ವ್ಯಾಬ್  ಟೆಸ್ಟ್ ಗೆ ಮನೆ ಬಳಿ ಬಂದಾಗ ಸಹಕಾರ ನೀಡಿ ಮುಂದೆ ಎದುರಾಗಬಹುದಾದ ಆರೋಗ್ಯ ಸಮಸ್ಯೆಯಿಂದ ಪಾರಾಗಬೇಕೆಂದು ಮನವಿ ಮಾಡಿದರು.  



 

ಸರ್ಕಾರ ಎಲ್ಲರಿಗೂ ಲಸಿಕೆ ನೀಡಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದು ಲಭ್ಯತೆಗನುಗುಣವಾಗಿ ನಾಗರಿಕರು ಲಸಿಕೆ ಪಡೆದುಕೊಳ್ಳಬೇಕೆಂದು ತಿಳಿಸಿದರು. ಉಲ್ಲಾಳು ವಾರ್ಡ್ ಬಿಬಿಎಂಪಿ ಹಿರಿಯ ಆರೋಗ್ಯ ನಿರೀಕ್ಷಕ ಎಲ್ ನಾಗರಾಜ್ಯ. ಜರ್ನಲಿಸ್ಟ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ಕಾರ್ಯಧ್ಯಕ್ಷ ನ. ಸುಧೀಂದ್ರ ರಾವ್,  ಯಶವಂತಪುರ ವಿಧಾನಸಭಾ ಕ್ಷೇತ್ರ  ನಗರ ಮಂಡಲ ಭಾಜಪ ಪ್ರಧಾನ ಕಾರ್ಯದರ್ಶಿ ದೀಪಕ್ ಶೆಟ್ಟಿ, ಉಲ್ಲಾಳು ವಾರ್ಡ ಭಾಜಪ ಅಧ್ಯಕ್ಷ ಜಯರಾಮ್ ಪ್ರಧಾನ ಕಾರ್ಯದರ್ಶಿ ಗಿರೀಶ್,ಬಿಜೆಪಿ ರಾಜ್ಯಒಬಿಸಿ ಕಾರ್ಯಕಾರಿಣಿ ಸದಸ್ಯೆ ಪ್ರೇಮಾ ನಾಗಯ್ಯ, ಬಿಜೆಪಿ ಮುಖಂಡರಾದ ಅಮಾನುಲ್ಲಾ, ನಾಗದೇವನಹಳ್ಳಿ ರಾಮಣ್ಣ ,ಕೃಷಿಕ ಸಮಾಜ ಕಾರ್ಯಕಾರಿ ಸದಸ್ಯೆ ಸಬೀಹ ಅಂಜುಮ್, ದುಬಾಸಿಪಾಳ್ಯ ಕೃಷ್ಣ, ವೆಂಕಟೇಶ್ ಮತ್ತಿತರರು  ಉಪಸ್ಥಿತರಿದ್ದರು. ಇದೇ ವೇಳೆ  ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ವಿಶೇಷ ಶಿಬಿರದಲ್ಲಿ 250 ಜನರಿಗೆ ಬಿಬಿಎಂಪಿ ವತಿಯಿಂದ ಲಸಿಕೆನೀಡಲಾಯಿತು.

Post a Comment

0 Comments

Ad Code

Responsive Advertisement