Ticker

6/recent/ticker-posts

Ad Code

Responsive Advertisement

ಗಾಣಧಾಳ ಗ್ರಾಮದ `ಪಂಚಮುಖಿ' ಕ್ಷೇತ್ರದ ಮಹಿಮೆಗಳು

ಚಿಟ್ನಹಳ್ಳಿಯಲ್ಲಿ ಸ್ವಾಮಿಯವರ ಪ್ರಾತಿನಿಧ್ಯ ಮಂತ್ರಾಲಯಕ್ಕೆ 4 ಕಿ.ಮೀ. ದೂರದಲ್ಲಿರುವ ಚೆಟ್ಟಿ ಹಳ್ಳಿ ಗ್ರಾಮದ ನಿವಾಸಿಗಳಾದ ದೊಡ್ಡ ದುಳ್ಳಯ್ಯ ಸಣ್ಣ ದುಳಯ್ಯರೆಂಭ ವಾಲ್ಮೀಕಿ ಜನಾಂಗದ ಸೋದರರಿದ್ದರು. 

ಅವರು ಗಾಣಧಾಳ ಭೀಮರಾಯ ಸ್ವಾಮಿ ಭಕ್ತರು ಅವರು ಮಂಚಾಲಿ ಗ್ರಾಮಕ್ಕೆ ಬಂದು ಹರಿಗೋಲನ್ನು ಹಾಕಿಸಿ ಕೊಂಡು ತುಂಗಭದ್ರಾ ನದಿಯನ್ನು ದಾಟಿ ಹೋಗಿ ಸ್ವಾಮಿಯವರ ದರ್ಶನ ಮಾಡಿ ಕೊಂಡು ಬರುತ್ತಿದ್ದರು. ಅವರು ಯಾವಾಗೆಂದರೆ ಆಗ (ಹಗಲು-ರಾತ್ರಿ ಎನ್ನದೆ) ಸಮಯ ಸಿಕ್ಕಾಗೆಲ್ಲ ಬರುತ್ತಿದ್ದರು. 

ಮಂಚಾಲಿಯ ಗ್ರಾಮಸ್ಥನಾದ ಭಂಗಿ ದುಳಯ್ಯ ಎಂಬುವನನ್ನು ತಮ್ಮೊಂದಿಗೆ ಕರೆಲಾಯುತ್ತಿದ್ದರು. ಒಂದು ದಿನ ದೊಡ್ಡ ದುಳ್ಳಯ್ಯನು ಮಂಚಾಲಿಗೆ ಬಂದು ಅಂಬಿಗನನ್ನೆಬ್ಬಿಸಿ ನದಿಗೆ ಪಟ್ಟಿ (ಹರಿಗೋಲ) ಹಾಕಲು ಕೇಳುತ್ತಾನೆ. ಅದು ಮಳೆಗಾಲವಾದ್ದರಿಂದ ನದಿ ತುಂಬಿತ್ತು. ಅದಕ್ಕೆ ಅಂಬಿಗನು ಹರಿಗೋಲು ಹಾಕಲು ಒಪ್ಪಲಿಲ್ಲ. ಕಾರಣ ದುಳಯ್ಯನು ತಾನೇ ಹರಿಗೋಲನ್ನು ತೆಗೆದುಕೊಂಡು ನದಿಗೆ ಇಳಿಯುತ್ತಾನೆ. 


ನದಿ ಮಧ್ಯದಲ್ಲಿ ನೀರಿನ ಸೆಳೆತಕ್ಕೆ ಹರಿಗೋಲು ಮುಳುಗಿ ಹೋಯಿತೆಂದು ದಂಡೆಯ ಮೇಲೆ ನಿಂತು ನೋಡು ತ್ತಿದ್ದವರು ಅವನು ನೀರಿನಲ್ಲಿ ಸತ್ತನೆಂದು ಮಾತಾಡಿಕೊಳ್ಳುತ್ತಿದ್ದರಂತೆ ಅಷ್ಟರಲ್ಲಿ ದೇವರ ದಯೆಯಿಂದ ಅತ್ತಕಡೆ ದಂಡೆಗೆ ಸೇರಿದ ದುಬ್ಬಯ್ಯನು ಜೋರಾಗಿ ಕೇಕೆಯಿಂದ ಇತ್ತ ಕಡೆ ಇದ್ದವರಿಗೆ ತಾನು ಬದುಕಿದ್ದೇನೆಂದು ತಿಳಿಸಿದಂತೆ ಮತ್ತೊಂದು ದಿನ ಈ ಸೋದರರಿಬ್ಬರು ಬಿಲಮಾರ್ಗವಾಗಿ ಹೋಗಿ ನೋಡುವ ಸಾಹಸ ಮಾಡುತ್ತಾರೆ. 

ಬಿಲಮಾರ್ಗದ ಅಂತ್ಯದವರಿಗೆ ಹೋಗಿ ಮೈದಾನ ಪ್ರದೇಶವನ್ನು ಪಾಳುಬಿದ್ದ ಊರನ್ನು ಕೆರೆಯ ಅವಶೇಷಗಳನ್ನು ನೋಡುತ್ತಿರಲು ಹಠಾತ್ತಾಗಿ ಭೀಕರವಾನರ ಒಂದು ಕಾಣಿಸಿಕೊಂಡು, ಮಾನವ ಭಾಷೆಯ ಅವರನ್ನು ಹಿಂದಿರುಗಿ ಊರಿಗೆ ಹೋಗಿ ಅಲ್ಲಿಯೇ ತನ್ನ ಪ್ರತಿನಿಧಿಯಾಗಿರಲು ತಿಳಿಸಿತಂತೆ ಅವರು ಕೆಲವು ವರ್ಷಗಳವರೆಗೆ ಸ್ವಾಮಿಯನ್ನು ಕುಂಭರೂಪದಲ್ಲಿ ಪ್ರತಿಷ್ಠಿಸಿ ಕೊಂಡು ಪೂಜಿಸುವತ್ತಿದ್ದರಂತೆ ನಂತರ ಅವರು ಸಮಾಧಿಯಾಗುತ್ತಾರೆ. 

ಆ ಸಮಾಧಿಗಳಿಗೆ ಅವರ ವಂಶಸ್ಥನಾದ ಹನುಮಂತಪ್ಪನು ಸುಮಾರು 200 ವರ್ಷಗಳ ಸಮಾಧಿಗಳನ್ನು ಅದೇಕೋ ತೂಡಿಸಿ ನೋಡುತ್ತಾನೆ. ಅವರ ಶವಗಳು ಕೊಳೆಯದೆ ಬಿಗಿದು ಕೊಂಡಿದ್ದನ್ನು ನೋಡಿ ಜನರಾಶ್ಚರ್ಯ ಪಡುತ್ತಾರೆ. ಆ ಇಬ್ಬರು ಶ್ರೀ ಭೀಮರಾಯನ ಭಕ್ತರಾದ್ದರಿಂದ ಆ ರೀತಿ ಇರಲು ಸಾಧ್ಯವಾಯಿತೆಂದು ಭಾವಿಸಿ ಅವರ ಸಮಾಧಿಗಳಿಗೆ ಗುಡಿಕಟ್ಟಿ – ಪೂಜಿಸಲು ಪ್ರಾರಂಭಿಸುತ್ತಾರೆ. 

ಭೀಮರಾಯಸ್ವಾಮಿ ಗುಡಿ

ಪ್ರತಿ ವರ್ಷ ಶ್ರೀರಾಮನವಮಿಯಂದು ಉತ್ಸವವನ್ನು ಮಾಡುತ್ತಾರೆ. ಹನುಮಂತಪ್ಪನನ್ನು ಪಂಚಮುಖಿಯ ದೂತನೆಂದು ಜನರು ಭಾವಿಸುತ್ತಾ “ಹನುಮಂತನ ಧೂತ” ನೆಂದೇ ಕರೆಯುತ್ತಿದ್ದಾರೆ. ಅವನು ಸ್ವಾಮಿಯ ಪ್ರತಿನಿಧಿಯಂತೆ ಅವರ ಸಲುವಾಗಿ ಪ್ರಾರ್ಥಿಸಿ ಅವರ ಅಭೀಷ್ಟಗಳನ್ನು ಪೂರೈಸಲು ಸಹಾಯಕನಾಗಿದ್ದು - ಸ್ವಾಮಿ ಯವರಿಗೆ, ಜನರಿಗೆ ಮಧ್ಯೆ ದೂತನಂತೆ ವರ್ತಿಸಿ `ತಾತ' ಎಂದು ಕರೆಯುತ್ತಿದ್ದರು. ಅವನು ಸ್ವರ್ಗಸ್ಥನಾಗಲು - ಅವನ ಸಮಾಧಿಯನ್ನು ಹಿರಿಯರ ಸಮಾಧಿ ಪಕ್ಕದಲ್ಲಿಯೇ ಸೋದರರ ಸಮಾಧಿಯನ್ನದೇ ಜನರು ಭೀಮರಾಯಸ್ವಾಮಿ ಗುಡಿ ಎಂದೇ ಹೇಳುತ್ತಾರೆ. 

ಇದರಂತೆ ಪಂಚಮುಖಿ ಸ್ವಾಮಿಯ ಹೆಸರು ಸೂಚಿಸುವ ಹೆಸರುಗಳಿಂದ ಅನೇಕ ಹಳ್ಳಿಗಳನ್ನು ಕಟ್ಟಿ - ಪೂಜೆಗಳನ್ನು ಮಾಡುತ್ತಾರೆ. ಜಾಲವಾಡಿ ಗ್ರಾಮದಲ್ಲಿಯು ಭೀಮರಾಯಸ್ವಾಮಿಗುಡಿ ಒಂದಿದೆ.

-ರಾಯಚೂರು ವರದಿಗಾರ

Post a Comment

0 Comments

Ad Code

Responsive Advertisement