ಬಳ್ಳಾರಿ, ಜು.14: ಬಳ್ಳಾರಿ ಗ್ರಾಮೀಣ ಬಿ.ನಾಗೇಂದ್ರ ಅವರು ಬೊಬ್ಬುಕುಂಟೆ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ನೂತನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಬುಧವಾರ ಪರಿಶೀಲನೆ ನಡೆಸಿದರು.
ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಅವರು ಸೂಚನೆ ನೀಡಿದರು.
ಇದಾದ ನಂತರ ಶಾಸಕ ನಾಗೇಂದ್ರ ಅವರು ಕಮ್ಮರಚೇಡು ಗ್ರಾಮದ ಮಾಳಗಡ್ಡ ಕ್ಯಾಂಪ್ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದರು.
ಈ ಮಾಳಗಡ್ಡ ಕ್ಯಾಂಪಿಗೆ ಮೂರು ಶಾಲಾ ಕೊಠಡಿ ಹಾಗೂ ಕಾಂಪೌAಡ್ ನಿರ್ಮಾಣ ಮಾಡುವ ಕುರಿತು ಪರಿಶೀಲನೆ ನಡೆಸಿದರು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಡಿ ಅನುದಾನ ಒದಗಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಇದ್ದರು.
VARTHAJALA SUDDIMANE
: #396, OOLIGA COMPLEX, SAMPIGE ROAD, MALLESWARAM, BENGALURU560 003. PH. : 08023319247, 9448119247.

0 Comments