Ticker

6/recent/ticker-posts

Ad Code

Responsive Advertisement

ಮಹನೀಯರ ಜೀವನ ಚರಿತ್ರೆ ಯುವ ಸಮುದಾಯಕ್ಕೆ ತಿಳಿಸಿಕೊಡುವ ಕಾರ್ಯ ಆಗಬೇಕಿದೆ

 ಮಧುಗಿರಿ : ಮಹನೀಯರ ಜೀವನ ಚರಿತ್ರೆಯನ್ನು ಯುವ ಸಮುದಾಯಕ್ಕೆ ತಿಳಿಸಿ ಕೊಡುವ ಕಾರ್ಯ ಆಗಬೇಕೆಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಕೊರಟಗೆರೆ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು.

ತಾಲ್ಲೂಕಿನ ಪುರವರ ಗ್ರಾಮದಲ್ಲಿ ಕೆಂಪೇಗೌಡ ಯುವ ವೇದಿಕೆಯ ವತಿಯಿಂದ ಆಯೋಜಿಸಿದ್ದ ನಾಡಪ್ರಭು ಕೇಂಪೇಗೌಡ ಹಾಗೂ ಡಿ.ಬನಮಯ್ಯನವರ ಜಯಂತಿ ಅಂಗವಾಗಿ ಆಶಾ ಅಂಗನವಾಡಿ ಹಾಗೂ ಎಸ್‍ಎಸ್‍ಎಲ್‍ಸಿ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕೆಂಪೇಗೌಡರ ದೂರ ದೃಷ್ಟಿಯ ಫಲವಾಗಿ ಅಂದಿನ ಬೆಂದಕಾಳೂರು ಇಂದೂ ಬೆಂಗಳೂರು ನಗರವಾಗಿ ವಿಶ್ವ ವಿಖ್ಯಾತವಾಗಿದೆ. 1537ರಲ್ಲಿಯೇ ವ್ಯವಸ್ಥಿತವಾದ ಮಾರುಕಟ್ಟೆ ನಿರ್ಮಿಸಲಾಗಿತ್ತು. ಸಮುದಾಯಗಳ ಅಗತ್ಯತೆ ತಕ್ಕಂತೆ ವ್ಯಾಪಾರ ವಹಿವಾಟು ನಡೆಸಲು ಪತ್ರೇಕ ಪೇಟೆಗಳನ್ನು ನಿರ್ಮಿಸಿದ್ದರು. 

ನಮ್ಮ ತಾಲ್ಲೂಕಿನ ಪುರವರ ಹೋಬಳಿಗೆ ಸೇರಿದ ಕೊಂಡವಾಡಿ ಮೂಲದವರಾಗಿರುವ ಬನಮಯ್ಯ ರವರು ಮೈಸೂರಿನಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಕರೊನಾ ಸಂದರ್ಭದಲ್ಲಿ ಜೀವದ ಹಂಗು ತೊರೆದು ಮನೆ ಮನೆಗೂ ತೆರಳಿ ಗ್ರಾಮಸ್ಥರಿಗೆ ಅರಿವು ಮೂಡಿಸಿರುವ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಸೇವೆ ಶ್ಲಾಘನೀಯ ವಾಗಿದೆ. ಮೂರನೇ ಅಲೆ ಬಗ್ಗೆ ಆತಂಕವಿದ್ದು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಂಡು ಎಲ್ಲರೂ ಮಾಸ್ಕ್ ಧರಿಸಿ ಸರ್ಕಾರದ ನಿಯಮಗಳನ್ನು ಪಾಲಿಸಿ ಕರೋನಾ ನಿಯಂತ್ರಣಕ್ಕೆ ಕೈ ಜೋಡಿಸಿ ಎಂದರು. 

ತುಮುಲ್ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ಮಾತನಾಡಿ ಡಿ.ಬನಮಯ್ಯನವರ ಪೂರ್ವಜರು ಕೊಂಡವಾಡಿ ಗ್ರಾಮದವರಾಗಿದ್ದು ಅವರ ಜಯಂತಿ ಆಚರಿಸುವುದು ಹೆಮ್ಮೆಯ ವಿಚಾರವಾಗಿದೆ. ಡಾ.ಜಿ.ಪರಮೇಶ್ವರ ರವರು ಸರ್ಕಾರದ ದಿಂದ ಅನುದಾನ ತಂದು ಈ ಭಾಗದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಅವರಿಗೆ ನಾವೆಲ್ಲರೂ ಸೇರಿ ರಾಜಕೀಯ ಶಕ್ತಿ ನೀಡೋಣಾ ಎಂದರು.

ಕಾಂಗ್ರೆಸ್ ವಕ್ತಾರ ಮುರುಳೀಧರ ಹಾಲಪ್ಪ ಮಾತನಾಡಿ ಡಿ.ಬನಮಯ್ಯನವರು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದು ಇವರ ಸಂಸ್ಥೆಯಲ್ಲಿ ಶಿಕ್ಷಣ ಪಡೆದವರು ದೇಶ ವಿದೇಶಗಳಲ್ಲಿ ಪ್ರಖ್ಯಾತರಾಗಿದ್ದಾರೆ. ನಾಡ ಪ್ರಭು ಕೆಂಪೇಗೌಡರು ದಕ್ಷ ಆಡಳಿತಗಾರರಾಗಿದ್ದು ಇಂದಿಗೂ ಅವರ ಆಡಳಿತ ರಾಜ್ಯಕ್ಕೆ ಮಾದರಿಯಾಗಿದೆ ಎಂದರು.

ಪಿಕಾರ್ಡ್ ಬ್ಯಾಂಕ್ ಉಪಾಧ್ಯಕ್ಷ ಹೆಚ್.ಸಿ.ಭೈರಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋಡ್ಲಹಳ್ಳಿ ಆಶ್ವಥನಾರಾಯಣ್, ಗ್ರಾಪಂ ಅಧ್ಯಕ್ಷೆ ಅಂಬಿಕಾ, ಸದಸ್ಯ ಸಂಕಾಪುರ ದಿಲೀಪ್, ವಿಎಸ್ ಎಸ್ ಎನ್ ಅಧ್ಯಕ್ಷ ಶಿವಶಂಕರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಮ್ಮ, ಕೆಪಿಸಿಸಿ ಕಾರ್ಯದರ್ಶಿ ಬಿ.ಎಸ್.ದಿನೇಶ್, ಮಾಜಿ ಜಿಪಂ ಸದಸ್ಯ ಕೆಂಚಮಾರಯ್ಯ, ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಜಿ.ಶ್ರೀನಿವಾಸ ಮೂರ್ತಿ, ಗ್ರಾಪಂ ಮಾಜಿ ಅಧ್ಯಕ್ಷ ಸಂಕಾಪುರ ಜಯರಾಂ, ಯುವ ಮುಖಂಡ ಸುಮುಖ್ ಕೊಂಡವಾಡಿ, ಡಾ.ಪ್ರಿಯದರ್ಶಿನಿ, ಅಜಯ್ ಗೌಡ, ಕೆಂಪೇಗೌಡ ಯುವ ವೇದಿಕೆಯ ಪದಾಧಿಕಾರಿಗಳು ಇದ್ದರು.    


Post a Comment

0 Comments

Ad Code

Responsive Advertisement