ಬೆಂಗಳೂರು : ಸರ್ಫೇಸಿ ಕಾಯಿದೆಗೆ ತಿದ್ದುಪಡಿ ಮಾಡಲು ಒತ್ತಾಯಿಸಿ ಸಚಿವೆ ಕುಮಾರಿ ಶೋಭಾ ಕರಂದ್ಲಾಜೆ ಅವರನ್ನು ದೆಹಲಿಯ ನಿವಾಸದಲ್ಲಿಂದು ಭೇಟಿ ಮಾಡಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮನವಿ ಸಲ್ಲಿಸಿದರು
ಕೇಂದ್ರ ಸಚಿವ ಸಂಪುಟದಲ್ಲಿ ಸಚಿವರಾಗಿ ಅಧಿಕಾರ ವಹಿಸಿ ಕೊಂಡ ಉಡುಪಿ-ಚಿಕ್ಕಮಗಳೂರು ಜಿಲ್ಲೆ ಲೋಕಸಭಾ ಸದಸ್ಯೆ ಕೇಂದ್ರ ಸರ್ಕಾರದ ಕೃಷಿ ಖಾತೆಯ ರಾಜ್ಯ ಸಚಿವೆ ಕುಮಾರಿ ಶೋಭಾ ಕರಂದ್ಲಾಜೆ ಅವರನ್ನು ದೆಹಲಿ ನಿವಾಸದಲ್ಲಿ ಇಂದು ಭೇಟಿಯಾಗಿ ಅಭಿನಂದನೆ ಸಲ್ಲಿಸಿದ ಮೂಡಿಗೆರೆ ಕ್ಷೇತ್ರದ ಶಾಸಕ ಕುಮಾರಸ್ವಾಮಿ ನಿಯೋಗ. ಸರ್ಫೇಸಿ ಕಾಯಿದೆಯ ವ್ಯಾಪ್ತಿಯಿಂದ ಕಾಫಿ, ಕಾಳು ಮೆಣಸು, ಏಲಕ್ಕಿ ಬೆಳೆಗಳನ್ನು ತೆಗೆಯಬೇಕು, ಈ ಕಾಯಿದೆಯಿಂದ ಸಾಲ ತೀರಿಸಲಾಗದ ಕಾಫಿ ಬೆಳೆಗಾರರ ಜಮೀನು ಹರಾಜು ಮಾಡುವ ಅವಕಾಶವಿದ್ದು, ಇದರಿಂದ ಕತ್ತು ಹಿಸುಕಿದಂತಾಗುತ್ತದೆ. ಕೇಂದ್ರ ಮಧ್ಯ ಪ್ರವೇಶಿಸಿ ಈ ಕಾಯಿದೆಯ ವ್ಯಾಪ್ತಿಯಿಂದ ಈ ಬೆಳೆಗಳನ್ನು ಹೊರತು ಪಡಿಸಿ ತಿದ್ದುಪಡಿ ತರಬೇಕು ಎಂದು ಮನವಿ ಮಾಡಿದರು.
ಒಂದು ಎಕರೆ, 10ಗುಂಟೆ ಕಾಫಿ ಬೆಳೆಗಾರರನ್ನು ವಾಣಿಜ್ಯ ಬೆಳೆಗಾರರಂದು ಪರಿಗಣಿಸಬಾರದು, ಅವರನ್ನು ಅತೀ ಸಣ್ಣ ರೈತರೆಂದು ಪರಿಗಣಿಸಬೇಕು ಇದರಿಂದ ಅವರಿಗೆ ಸಾಲ, ಇತರೆ ಸಾಲ ಸೌಲಭ್ಯ ಪಡಯಲು ಅನುಕೂಲವಾಗುತ್ತದೆ ಎಂದು ಸಚಿವರಲ್ಲಿ ಮನವಿ ಮಾಡಿದರು.
ನಿಯೋಗದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಶಿವೇಗೌಡ್ರು, ಹಾಲಿ ಮೂಡಿಗೆರೆ ನಗರ ಸಭೆ ಸದಸ್ಯ ಧರ್ಮಪಾಲ್, ಮುಖಂಡರಾದ ಗಿರೀಶ್ ಹೆಮಕ್ಕಿ, ಸಂದರ್ಶ, ಪೂರ್ಣೇಶ್ ಮೈಲಿಮನೆ,ಅನಿಲ್ , ಕಾರ್ತೀಕೆಯನ್ ಶಾಸ್ತ್ರೀ, ಸಂದೀಪ್ ಹಾಜರಿದ್ದರು.

0 Comments