Ticker

6/recent/ticker-posts

Ad Code

Responsive Advertisement

ದ್ವಿಚಕ್ರ ವಾಹನ ಸವಾರರಿಗೆ ಕಿರುಕುಳ: ಮಂಗಳಮುಖಿಯರಿಂದಹಲ್ಲೆ

ಮಧುಗಿರಿ ಪಟ್ಟಣದ ಬೈಪಾಸ್ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಕಿರುಕುಳ ನೀಡಿ ಹಣ ವಸೂಲಿ ಮಾಡುತ್ತಿದ್ದ ಮಂಗಳಮುಖಿಯರುಗಳು ಹಣ ನೀಡದಿದ್ದರೆ ಅವರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿರುವ ಘಟನೆ ಗುರುವಾರ ಸಂಜೆ ನಡೆದಿದೆ.        

ಕೆಶಿಪ್ ರಸ್ತೆ ಗೌರಿಬಿದನೂರು-ಹಿಂದೂಪುರ ರಸ್ತೆಯ 220 ಕೆವಿ ಸಾಮರ್ಥ್ಯದ ವಿದ್ಯುತ್ ಸ್ಥಾವರದ ಬಳಿ ಹಂಪು ಗಳಿದ್ದು ಅಲ್ಲಿ ದ್ವಿಚಕ್ರವಾಹನ ಸವಾರರು ನಿಲ್ಲಿಸಿದಾಗ ತಕ್ಷಣವೇ ಮಂಗಳಮುಖಿಯರು ಆಗಮಿಸಿ ಬೈಕಿನಲ್ಲಿ ರುವಂತಹ ಕೀಗಳನ್ನು ಕಸಿದುಕೊಳ್ಳುತ್ತಾ ನಂತರ ಹಣ ನೀಡದಿದ್ದರೆ ನನ್ನನ್ನು ಮುಟ್ಟಲು ಬಂದಿದ್ದೀಯಾ ಇಂದು ಗುಂಪು ಕಟ್ಟಿಕೊಂಡು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. 

ಗುರುವಾರ ಸಂಜೆ ಕೊಡ್ಲಾಪುರ ಗ್ರಾಮ ಪಂಚಾಯಿತಿ ಸದಸ್ಯ ರಂಗನಾಥ್ ದ್ವಿಚಕ್ರವಾಹನದಲ್ಲಿ ಮಧುಗಿರಿಯಿಂದ ಗ್ರಾಮದತ್ತ ತೆರಳುತ್ತಿರುವಾಗ ಮಂಗಳಮುಖಿಯರು ಅಡ್ಡಗಟ್ಟಿ ಹಣಕ್ಕೆ ಪಿಡಿಸಿದ್ದಾರೆ.

ಹಣ ನೀಡದಿದ್ದಾಗ ಅವರ ಮೇಲೆ ಹಲ್ಲೆ ನಡೆಸಿ ಕಲ್ಲುಗಳನ್ನು ಎತ್ತಿ ಹಾಕಿ ರಕ್ತ ಬರುವ ರೀತಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ದೂರಿದ್ದಾರೆ.    ತಕ್ಷಣವೇ ಬೈಪಾಸ್ ರಸ್ತೆಯ ವಾಹನಗಳನ್ನು ಅಡ್ಡಗಟ್ಟಿ ಪ್ರತಿಭಟಿಸಿದ್ದ ಹಿನ್ನೆಲೆಯಲ್ಲಿ ಅಲ್ಲಿಂದ ಮಂಗಳಮುಖಿಯರು ಕಾಲ್ಕಿತ್ತಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ಘಟನೆಯನ್ನು ತಿಳಿಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

Post a Comment

0 Comments

Ad Code

Responsive Advertisement