Ticker

6/recent/ticker-posts

Ad Code

Responsive Advertisement

'ಎಲ್ಲಿದ್ದೀಯಾ ಸುಮಲತಾ?' ಎಂದ ಇಂದ್ರಜಿತ್ ಲಂಕೇಶ್ ಎದುರು ಇದ್ದಿದ್ದು ಕುಮಾರಸ್ವಾಮಿ!

ಇಂದ್ರಜಿತ್ ಲಂಕೇಶ್ ಎಚ್.ಡಿ.ಕೆ. ಭೇಟಿಯ ಫೋಟೋ ವೈರಲ್
ಬೆಂಗಳೂರು: ಇಂದ್ರಜಿತ್ ಲಂಕೇಶ್ ಅವರು ಈ ಹಿಂದೆ ಮಂಡ್ಯ ಸಂಸದೆ ಸುಮಲತಾ ಅವರನ್ನು ಟೀಕೆ ಮಾಡಿದ್ದರು. ಎಲ್ಲಿದ್ದೀಯಾ ಸುಮಲತಾ ಕರೊನಾ ಸಮಯದಲ್ಲಿ ಜನರ ಜತೆ ಇರೋದು ಬಿಟ್ಟು ಎಲ್ಲಿ ಹೋಗಿದ್ದೀಯಾ ಕರೊನಾ ಸಮಯದಲ್ಲಿ ಮಂಡ್ಯ ಸ್ವಾಭಿಮಾನಿ ಜನ ಮರೆತುಹೋದ್ರಾ ಎಂದು ಇಂದ್ರಜಿತ್ ಟೀಕೆ ಮಾಡಿದ್ದರು.

ಇದೀಗ ದರ್ಶನ್ ಹೆಸರಲ್ಲಿ ವಂಚನೆ ಯತ್ನ ಪ್ರಕರಣವು ಯಾವುದೇ ತಾರ್ಕಿಕ ಅಂತ್ಯ ಕಾಣದೇ ರಾಜಿ-ಸಂಧಾನ ಮಾಡಿಕೊಂಡ ಬೆನ್ನಲ್ಲೇ ಪ್ರತ್ಯಕ್ಷರಾದ ಇಂದ್ರಜಿತ್ ಲಂಕೇಶ್, ನಟ ದರ್ಶನ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ವಂಚನೆ ಯತ್ನ ಪ್ರಕರಣದಲ್ಲಿ ಕೇಳಿಬಂದಿರುವ ಅರುಣಾ ಕುಮಾರಿಗೆ ದರ್ಶನ್ ಕಿರುಕುಳ ನೀಡಿದ್ದಾರೆಂದು ಆರೋಪಿಸಿದ್ದಾರೆ. ಅಲ್ಲದೆ, ಸಂದೇಶ್ ನಾಗರಾಜ್ ಒಡೆತನದ ಹೋಟೆಲ್‌ನಲ್ಲಿ ಸಪ್ಲೈಯರ್ ಮೇಲೆ ಹಲ್ಲೆ ಮಾಡಿದ್ದಾರೆಂಬ ಆರೋಪ ಮಾಡಿದ್ದಾರೆ.

ನಟ ದರ್ಶನ್ ವಿರುದ್ಧ ಗಂಭೀರ ಆರೋಪಗಳ ಕೇಳಿಬರುತ್ತಿರುವ ಬೆನ್ನಲ್ಲೇ ಇಂದ್ರಜಿತ್ ಲಂಕೇಶ್ ಮತ್ತು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಭೇಟಿ ಆಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಅಭಿಮಾನಿಗಳು ಹರಿಬಿಟ್ಟಿದ್ದು, ದರ್ಶನ್ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಳ್ಳುವ ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆ.

ಇದರೊಂದಿಗೆ ಮೈಸೂರಿನಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಮೈಸೂರು ಪೊಲೀಸ್ ಠಾಣೆಗಳು ಸೆಟಲ್‌ಮೆಂಟ್ ಅಡ್ಡೆಗಳಾಗುತ್ತಿವೆ. ಓರ್ವ ಸೆಲೆಬ್ರಿಟಿಯಾಗಿ ಠಾಣೆಯ ಮುಂದೆಯೇ ತಲೆ ಕಡಿಯುತ್ತೇನೆ ಅನ್ನುವುದು ಸರಿಯಲ್ಲ. ತನಿಖೆ ನಡೆದರೆ ಸತ್ಯಾಸತ್ಯತೆ ಹೊರಬೀಳಲಿದೆ ಎಂದು ಲಂಕೇಶ್ ಹಲವು ಗಂಭೀರ ವಿಚಾರಗಳನ್ನು ಕೆದಕಿ ದರ್ಶನ್‌ರನ್ನು ಇದೀಗ ಆರೋಪಿ ಸ್ಥಾನದಲ್ಲಿ ಇರಿಸಿದ್ದಾರೆ.

ಲಂಕೇಶ್ ಆರೋಪಗಳಿಂದ ಕೆಂಡಾಮಂಡಲರಾಗಿರುವ ದರ್ಶನ್ ಅಭಿಮಾನಿಗಳು ಲಂಕೇಶ್ ವಿರುದ್ಧ ಗರಂ ಆಗಿದ್ದಾರೆ. ಇದೀಗ ಲಂಕೇಶ್ ಮತ್ತು ಮಾಜಿ ಸಿಎಂ ಎಚ್‌ಡಿಕೆ ಭೇಟಿ ಆಗಿರುವ ಫೋಟೋಗಳನ್ನು ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದಾರೆ. ವೇಟರ್ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಪ ಮಾಡಿ, ಇಂದ್ರಜಿತ್ ಎಚ್‌ಡಿಕೆ ಭೇಟಿಯಾಗಿದ್ದಾರೆ ಎಂದು ದೂರಿದ್ದಾರೆ. ಪರೋಕ್ಷವಾಗಿ ಇದರ ಹಿಂದೆ ಎಚ್‌ಡಿಕೆ ಇದ್ದಾರೆ ಎಂದು ಆರೋಪಿಸಿದ್ದಾರೆ. ಅದಕ್ಕೆ ಕಾರಣ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ದರ್ಶನ್ ಅವರು ಸುಮಲತಾ ಅಂಬರೀಷ್ ಪರವಾಗಿ ನಿಂತಿದ್ದರು.

ದರ್ಶನ ವಿರುದ್ಧ ಇಂದು ಇಂದ್ರಜಿತ್ ಲಂಕೇಶ್ ಇನ್ನಷ್ಟು ದಾಖಲೆಗಳನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಬೆಳಗ್ಗೆ ೧೧.೩೦ಕ್ಕೆ ಲಂಕೇಶ್ ಅವರು ಸುದ್ದಿಗೋಷ್ಠಿ ಕರೆದಿದ್ದಾರೆ. ಹೀಗಾಗಿ ಇಂದಿನ ಸುದ್ದಿಗೋಷ್ಠಿಯ ಮೇಲೆ ಸಾಕಷ್ಟು ದೃಷ್ಟಿ ನೆಟ್ಟಿದೆ. ಪ್ರಕರಣ ಮತ್ತೊಂದು ಹಂತಕ್ಕೆ ಹೋಗುತ್ತಾ ಎಂಬ ಚರ್ಚೆಗಳು ಆರಂಭವಾಗಿದೆ.

ಬೆಂಗಳೂರಿನಲ್ಲಿ ಲಂಕೇಶ್ ಸುದ್ದಿಗೋಷ್ಠಿ ನಡೆಸಿದರೆ, ಆಷಾಡ ಶುಕ್ರವಾರ ಹಿನ್ನೆಲೆಯಲ್ಲಿ ಮೈಸೂರಿನಲ್ಲಿರುವ ದರ್ಶನ್ ಸಹ ಇಂದು ಸುದ್ದಿಗೋಷ್ಠಿಯನ್ನು ನಡೆಸಲಿದ್ದಾರೆ. ಹೋಟೆಲ್ ಸಂದೇಶ್ ಪ್ರಿನ್ಸ್‌ನಲ್ಲಿ ಸುದ್ದಿಗೋಷ್ಠಿ ನಡೆಯಲಿದ್ದು, ತಮ್ಮ ವಿರುದ್ಧ ಕೇಳಿಬಂದಿರುವ ಗಂಭೀರ ಆರೋಪಗಳಿಗೆ ನಟ ದರ್ಶನ್ ಯಾವ ರೀತಿಯಲ್ಲಿ ಉತ್ತರ ಕೊಡುತ್ತಾರೆಂಬ ಕುತೂಹಲ ಎಲ್ಲರಲ್ಲೂ ಇದ್ದೇ ಇದೆ. ಹೀಗಾಗಿ ಇಂದು ದರ್ಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ಆಗುವ ಸಾಧ್ಯತೆ ದಟ್ಟವಾಗಿದೆ.

Post a Comment

0 Comments

Ad Code

Responsive Advertisement