ಬಳ್ಳಾರಿ ಜುಲೈ 27: ಅಧಿಕಾರದಲ್ಲಿ ಇರಲಿ, ಇರದಿರಲಿ ಸದಾ ಕಲಾವಿದರ ಜತೆಯಲ್ಲೇ ಇರುವೆನು ಎಂದು ಪದ್ಮಶ್ರೀ ಪುರಸ್ಕೃತೆ ಮಾತೆ ಮಂಜಮ್ಮಜೋಗ್ತಿ ಹೇಳಿದರು.ನಗರದ ಕನ್ನಡ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕಲ್ಯಾಣ ಕರ್ನಾಟಕ ಭಾಗದ ಹಲವು ಪ್ರಕಾರದ ಕಲಾವಿದರ ಅಭಿವೃದ್ಧಿಗಾಗಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟವನ್ನು ರಚನೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ಕಲಾವಿದರ ಹಲವು ಬೇಡಿಕೆಗಳುಳ್ಳ ಪತ್ರವನನ್ನು ಒಕ್ಕೂಟವು ನನಗೆ ನೀಡಿರುವ ಪತ್ರವನ್ನು ಸರ್ಕಾರದ ಪ್ರತಿನಿಧಿಯಾಗಿ ತಲುಪಿಸುವ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದರು.
ಒಕ್ಕೂಟದ ರಾಜ್ಯಾಧ್ಯಕ್ಷ ವಿಜಯಕುಮಾರ್ ಸೊನಾರೆ ಮಾತನಾಡಿ, 58 ವರ್ಷದ ಕಲಾವಿದರಿಗೆ ಮಾಸಾಶನ ನೀಡಲಾಗುತ್ತಿದ್ದು, ಇದನ್ನು 50 ವರ್ಷಕ್ಕೆ ಇಳಿಸಬೇಕು. ಪ್ರತಿ ತಿಂಗಳ ನೀಡುವ 2000 ರೂ. ಮಾಸಾಶನವನ್ನು 5 ಸಾವಿರಕ್ಕೆ ಹೆಚ್ಚಿಸಬೇಕು. ರಾಜ್ಯೋತ್ಸವ, ಪದ್ಮಶ್ರೀಗಳಂತಹ ಪ್ರಶಸ್ತಿ ಪುರಸ್ಕೃತ ಕಲಾವಿದರಿಗೆ ತಿಂಗಳಿಗೆ 2 ಸಾವಿರ ರೂ.ಗಳ ಬದಲಿಗೆ 10 ಸಾವಿರ ರೂ.ಗಳ ಮಾಸಾಶನ ನೀಡಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದರು.
ಕಲ್ಯಾಣ ಕರ್ನಾಟಕ ಭಾಗ ಕೇವಲ ಒಂದು ಪ್ರಕಾರದ ಕಲೆಗೆ ಸೀಮಿತವಲ್ಲ. ಇಲ್ಲಿನ ಜಾನಪದ, ರಂಗಭೂಮಿ, ಬಯಲಾಟ ಸೇರಿ ಹಲಗೆ ಬಾರಿಸುವುದರಿಂದ ಹಿಡಿದು ಸಂಗೀತದ ವರೆಗೆ ಹಲವು ಪ್ರಕಾರದ ಕಲಾವಿದರು ಇದ್ದು, ಅವರೆಲ್ಲರಿಗೂ ರಾಜ್ಯ, ಅಂತರಾಜ್ಯ ಮಟ್ಟದಲ್ಲಿ ಕಲಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಬೇಕು ಎಂದ ಅವರು, ಈ ನಿಟ್ಟಿನಲ್ಲಿ ಕೆಕೆ ಭಾಗದಲ್ಲಿ ಈಗಾಗಲೇ ಒಕ್ಕೂಟದಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಪ್ರತಿ ಜಿಲ್ಲೆಗೆ ಹೋಗಿ ಸಂಘದ ಬಗ್ಗೆ ಮನವರಿಕೆ ಮಾಡಿ ಕಲಾವಿದರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.
ADVT:
ಬಳಿಕ ಇದೇ ವೇಳೆ ಜಿಲ್ಲೆಯ ವಿವಿಧ ತಾಲೂಕುಗಳಿಗೆ ಸಂಚಾಲಕರನ್ನು ನೇಮಕ ಮಾಡಲಾಯಿತು. ಬಳ್ಳಾರಿ ತಾಲೂಕು ಗಂಗಣ್ಣ, ಕೂಡ್ಲಿಗಿ ಪ್ರಸಾದ್, ಕುರುಗೋಡು ಪಾರ್ವತೀಶ್, ವಿಜಯನಗರ ಅಂಜಲಿ ಬೆಳಗಲ್ಲು, ಸಂಡೂರು ಅಶ್ವರಾಮು, ಸಿರುಗುಪ್ಪ ಬಯಲಾಟ ಮಾಸ್ಟರ್ ತಿಪ್ಪೇಸ್ವಾಮಿ, ಕಂಪ್ಲಿ ತಾಲೂಕು ವೀರಣ್ಣ ಅವರನ್ನು ಸಂಚಾಲಕರನ್ನಾಗಿ ನೇಮಕ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್ ಕೆ.ರಂಗಣ್ಣವರ್, ಒಕ್ಕೂಟದ ಕಾರ್ಯದರ್ಶಿ ಪ್ರಕಾಶ್ ಅಂಗಡಿ, ಉಪಾಧ್ಯಕ್ಷ ಪುರುಷೋತ್ತಮ ಹಂದ್ಯಾಳ್, ರಾಜ್ಯ ಪ್ರಶಸ್ತಿ ವಿಜೇತರಾದ ವರಲಕ್ಷಿö್ಮ, ವೀಣಾ ಆದೋನಿ, ಜಿಲಾನಿಬಾಷಾ, ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ರಮೇಶ್ ಗೌಡ ಪಾಟೀಲ್ ಸೇರಿದಂತೆ ಹಲವರುಉಪಸ್ಥಿತರಿದ್ದರು.


0 Comments