ಬಳ್ಳಾರಿ ಜುಲೈ 27."ಸ್ತ್ರೀವಾದವು ಮಹಿಳೆಯರನ್ನು ಬಲಶಾಲಿಗಳನ್ನಾಗಿ ಮಾಡುವುದರ ಬಗ್ಗೆ ಅಲ್ಲ. ಮಹಿಳೆಯರು ಈಗಾಗಲೇ ಪ್ರಬಲರಾಗಿದ್ದಾರೆ. ಅದು ಆ ಶಕ್ತಿಯನ್ನು ಜಗತ್ತು ಗ್ರಹಿಸುವ ವಿಧಾನವನ್ನು ಬದಲಾಯಿಸುವ ಬಗ್ಗೆ" ಅಭಯ ಫೌಂಡೇಶನ್ ಪ್ರಥಮ ವಾರ್ಷಿಕ ದಿನಾಚರಣೆಯ ಕಾರ್ಯಕ್ರಮದಲ್ಲಿ ಡಾ. ಅರುಣಾ ಕಾಮಿನೇನಿ ಅವರ ಮಾರ್ಗದರ್ಶನದಲ್ಲಿ ಮಹಿಳಾ ವಿಭಾಗವನ್ನು ಪ್ರಾರಂಭಿಸಿದ ನಂತರ ಅವರು ಮಾತನಾಡುತ್ತಾ ಸ್ತಿç ಶಕ್ತಿ ಒಂದು ದೊಡ್ಡ ಮೈಲಿಗಲ್ಲಾಗಿದೆ.ಮಹಿಳೆಯರು ಈಗ ಯಾವ ರಂಗದಲ್ಲೂ ಕೂಡಾ ಕಡಿಮೆ ಇಲ್ಲವೆಂದು, ಮಹಿಳೆಯರೆಂದು ಕಡಿಮೆಮಾಡಿ ಮಾತನಾಡುವುದು ಬೇಡ ಎಂದರು.
ಮಹಿಳೆಯರೆಲ್ಲರು ಸೇರಿ ಅಭಯ ಫೌಂಡೇಶನ್ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿAದ ನಡೆಸಿಕೊಟ್ಟರು. ಈಸಂಧರ್ಭದಲ್ಲಿ ಮಾಧವಿ ರೆನಿಗುಂಟ್ಲಾ, ಸ್ವಪ್ನಾ ನಾಗಮಲ್ಲಿ, ಜ್ಯೋತಿ ದಯಾಮಾ, ಸೀಮಾ ರೆನಿಗುಂಟ್ಲಾ, ಶಿಲ್ಪಾ ಮಿಟ್ಟೆ, ರಶ್ಮಿ ಆಲೂರ್, ಅನಿತಾ, ವಾಣಿ ಪ್ರಸಾದ್ ಮತ್ತು ಶಿಲ್ಪಾ ಅಜಯ್ ಅವರ ನೇತೃತ್ವದಲ್ಲಿ ವಕೀಲರು, ವೈದ್ಯರು, ಉದ್ಯಮಿಗಳು ಮತ್ತು ವಿದ್ಯಾರ್ಥಿಗಳಂತಹ ವಿವಿಧ ಕ್ಷೇತ್ರಗಳ 40 ಮಹಿಳಾ ಯೋಧರು ಸೇರಿದಂತೆ ಅಭಯ ತಂಡ ಅಡಿಪಾಯ ,ಅಧ್ಯಕ್ಷರು: ರಾಮಕೃಷ್ಣ ರೆನಿಗುಂಟ್ಲಾ, ನಾಮ ಕಾರ್ತೀಕ್, ಎಚ್.ಆರ್.ಬಳನಾಗರಾಜ್, ಜೆ.ಎಸ್.ಅಜಯ್, ಪಿ.ವೇಣುಗೋಪಾಲ್ ಗುಪ್ತಾ, ಎಸ್ ಜಿತೇಂದ್ರ ಪ್ರಸಾದ್ ಇನ್ನಿತರರು ಉಪಸ್ಥಿತರಿದ್ದರು.

0 Comments