ಹುಲಿಯ ಸ್ಥಿತಿಗತಿ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಜುಲೈ 29 ರಂದು "ವಿಶ್ವ ಹುಲಿ" ದಿನವೆಂದು ಆಚರಿಸಲಾಗುತ್ತಿದೆ. ಈ ವರ್ಷದ ವಿಷಯವೆಂದರೆ "ಹುಲಿ ಮತ್ತು ಅವುಗಳ ವಾಸಸ್ಥಾನ". ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 19 ಹುಲಿಗಳಿದ್ದು ಇಂದು ಬೆಂಗಳೂರಿನ ಅರ್ಚನಾ ಎಂ. ಇವರು ಹೆಣ್ಣು ಹುಲಿ "ಹಿಮ" ವನ್ನು ದತ್ತು ತೆಗೆದುಕೊಂಡಿದ್ದಾರೆ.
ಮೃಗಾಲಯ ಘಟಕದಲ್ಲಿರುವ ಹುಲಿ "ಕೃಷ್ಣ"ನಿಗೆ ಸಂವೇದನಾ ಮತ್ತು ಆಟದ ಪುಷ್ಠೀಕರಣವನ್ನು ಕೊಡಲಾಯಿತು. ಬಿದಿರಿನ ಆಟದ ಪುಷ್ಠೀಕರಣವನ್ನು ಮರದಿಂದ ತೂಗಿಸಿ ಪರಿಶೋಧನಾ ನಡವಳಿಕೆಯನ್ನು ಉತ್ತೇಜಿಸಲು ಕೋಳಿಮಾಂಸವನ್ನು ಬಳಸಲಾಗಿತ್ತು. ಇದರೊಟ್ಟಿಗೆ ಪ್ಲೆಮೆನ್ ಪ್ರತಿಕ್ರಿಯೆಯನ್ನು ಉತ್ತೇಜಿಸಲು ರಟ್ಟಿನ ಪೆಟ್ಟಿಗೆಯಲ್ಲಿ ಹಸಿರು ಹುಲ್ಲನ್ನು ತುಂಬಿಸಿ ಸದರಿ ಹುಲಿಗೆ ನೀಡಲಾಯಿತು.
ಇದಲ್ಲದೆ ಕಾಡಿನಲ್ಲಿ ಹುಲಿಗಳ ಸ್ಥಿತಿಗತಿ ಮತ್ತು ಕಾಡು ಹುಲಿಗಳ ಸಂಖ್ಯೆಯನ್ನು ಅಂದಾಜು ಮಾಡಲು ಬಳಸುವ ಜನಗಣತಿ ವಿಧಾನಗಳ ಪ್ರದರ್ಶನ ಮತ್ತು ಜೀವವೈವಿಧ್ಯ ಸಂರಕ್ಷಣೆಗಾಗಿ ಹುಲಿಗಳ ಆವಾಸ ಸ್ಥಾನವನ್ನು ಸಂರಕ್ಷಿಸುವ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಹುಲಿ ಮತ್ತು ಜೀವವೈವಿಧ್ಯ ಸಂರಕ್ಷಣೆಯಲ್ಲಿ ಪ್ರಾಣಿ ಸಂಗ್ರಹಾಲಯಗಳ ಪಾತ್ರ, ಅಕ್ರಮ ವನ್ಯಜೀವಿ ವ್ಯಾಪಾರಕ್ಕೆ ಬೇಡಿಕೆಯನ್ನು ಸೃಷ್ಠಿಸದೆ ಹುಲಿ ಮತ್ತು ಅದರ ಅವಾಸ ಸ್ಥಾನಗಳ ಮೇಲೆ ಮಾನವ ಪ್ರಭಾವವನ್ನು ಕಡಿಮೆ ಮಾಡುವ ಮಾರ್ಗಗಳ ಬಗ್ಗೆ ಅರಿವು ಮೂಡಿಸಲಾಯಿತು. ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಐಕ್ಯ ಅವರ ಬೆಂಬಲದೊಂದಿಗೆ ಸ್ಥಳದಲ್ಲೇ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಎಸ್ಒಎಸ್ ಚಿಲ್ಡ್ರನ್ಸ್ ವಿಲೇಜಸ್ ಇಂಡಿಯಾದ 55 ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಹುಲಿ ಸಂರಕ್ಷಣಾ ಸಂದೇಶವನ್ನು ಹರಡಲು ಮೃಗಾಲಯದ ಆವರಣದಲ್ಲಿ ಸೈಲೆಂಟ್ ಮಾರ್ಚ್ನಲ್ಲಿ ಭಾಗವಹಿಸಿದ್ದರು.




0 Comments