Ticker

6/recent/ticker-posts

Ad Code

Responsive Advertisement

BIG BREAKING : ಗಾಂಜಾ ಮಾರಾಟ ಮಾಡುತ್ತಿದ್ದ ಅಂತರಾಜ್ಯ ಆರೋಪಿಗಳ ಬಂಧನ; 75.56 ಕೆ.ಜಿ. ಗಾಂಜಾ ವಶ.

ಸಂಜಯನಗರ ಠಾಣಾ ವ್ಯಾಪ್ತಿಯ ಲೊಟ್ಟೆಗೊಲ್ಲಹಳ್ಳಿ ರೈಲ್ವೆ ನಿಲ್ದಾಣದ ಬಳಿ ಶಿವಶಂಕರ್, 28 ವರ್ಷ, ಎಂಬುವನು ಮಾದಕ ವಸ್ತು ಸೇವನೆ ಮಾಡುತ್ತಿದ್ದು, ಆಸಾಮಿಯು ತನಗೆ ಹೆಬ್ಬಾಳ ಮೇಲ್ಸೇತುವೆ ಹಾಗೂ ಲೊಟ್ಟೆಗೊಲ್ಲಹಳ್ಳಿ ರೈಲ್ವೆ ನಿಲ್ದಾಣದ ಬಳಿ ಆಂಧ್ರಪ್ರದೇಶ ಕೆಲವು ವ್ಯಕ್ತಿಗಳು ಬಂದು ಮಾರಾಟ ಮಾಡುತ್ತಿದ್ದು ಅವರಿಂದ ಖರೀದಿಸಿಕೊಂಡು ಸೇವನೆ ಮಾಡುತ್ತಿದ್ದನೆಂಬ ನೀಡಿದ ಮಾಹಿತಿ ಮೇರೆಗೆ ಹೆಚ್ಚಿನ ತನಿಖೆಕ್ಕೆ ಕೈಗೊಂಡು ಭಾತ್ಮೀದಾರರನ್ನು ಸಂಪರ್ಕಿಸಿ, 

ಈ ಸ್ಥಳಗಳಲ್ಲಿ ಗಾಂಜಾ ಮಾರಾಟ ಮಾಡುವ ಬಗ್ಗೆ ಹೆಚ್ಚಿನ ನಿಗಾವಹಿಸಿದಾಗ ಆಂಧ್ರಪ್ರದೇಶದಿAದ ಬೆಂಗಳೂರು ನಗರಕ್ಕೆ ಗಾಂಜಾವನ್ನು ಮಾರಾಟ ಬರುವ ಮಾಹಿತಿ ಆಧರಿಸಿ, ಬಾಲರಾಜು ಜಿ. ಪೊಲೀಸ್ ಇನ್ಸ್ಪೆಕ್ಟರ್, ಸಂಜಯನಗರ ಪೊಲೀಸ್ ಠಾಣೆ ಮತ್ತು ಸಿಬ್ಬಂದಿ ಹೆಬ್ಬಾಳ ಮೇಲ್ಸೇತುವೆ ಕೆಳಗೆ ಇಬ್ಬರು ಆಸಾಮಿಗಳು ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡಲು ಇಟ್ಟುಕೊಂಡಿರುವಾಗ ಕ್ಷಿಪ್ರ ಕಾರ್ಯಾಚರಣೆ ನಡೆಸಿ, 


ಗಾಂಜಾವನ್ನು ತಮ್ಮ ವಶದಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳು ಮತ್ತು 4 ಮೂಟೆ ಗಾಂಜಾವನ್ನು ವಶಕ್ಕೆ ಪಡೆದು ಹೆಸರು ವಿಳಾಸ ವಿಚಾರಿಸಲಾಗಿ, ಎ. ವಿಜಯ್ ಪುಂಗನೂರು ಟೌನ್ ಚಿತ್ತೂರು ಜಿಲ್ಲೆ, ಆಂಧ್ರಪ್ರದೇಶ ರಾಜ್ಯ. ಎಂಬುವನನ್ನು ದಸ್ತಗಿರಿ ಮಾಡಿ, 75.560 ಕೆ.ಜಿ. ತೂಕದ ಗಾಂಜಾ ಮತ್ತು 1-ಮೊಬೈಲ್ ಫೋನ್, 1-ದ್ವಿಚಕ್ರವಾಹನ  ವಶಪಡಿಸಿಕೊಳ್ಳುವಲ್ಲಿ ಸಂಜಯನಗರ ಪೊಲೀಸರು ಯಶಸ್ವಿಯಾಗಿರುತ್ತಾರೆ. 

ಆರೋಪಿ ವಿಜಯ್ ಎಂಬುವನು ಹಂದಿ ಸಾಕಾಣೆ ಕೆಲಸ ಮಾಡಿಕೊಂಡಿದ್ದು, ಆಂಧ್ರ ಪ್ರದೇಶದ ಗಡಿಭಾಗದಲ್ಲಿನ ಒರಿಸ್ಸಾ ರಾಜ್ಯದ ಹಳ್ಳಿ ಹಳ್ಳಿಗಳಲ್ಲಿ ಕಡಿಮೆ ಬೆಲೆ ಗಾಂಜಾವನ್ನು ಖರೀದಿಸಿಕೊಂಡು ರಾಷ್ಟಿಯ ಹೆದ್ದಾರಿ ರಸ್ತೆಯ ಬಳಿ ತಂದು ಬೆಂಗಳೂರಿನ ಕಡೆ ಬರುವ ಸರಕು ಸಾಗಾಟ ಮಾಡುವ ಖಾಲಿ ವಾಹನಗಳಿಗೆ ಹೆಚ್ಚಿನ ಬಾಡಿಗೆ ಹಣವನ್ನು ನೀಡುವುದಾಗಿ ಚಾಲಕರಿಗೆ ಒಪ್ಪಿಸಿಕೊಂಡು ಅದರಲ್ಲಿ ಬೆಂಗಳೂರಿಗೆ ತಂದು ಬರುವ ಮೊದಲೇ ಇಲ್ಲಿನ ಗಿರಾಕಿಗೆ ತಾವು ಬಂದು ಸೇರುವ ಜಾಗವನ್ನು ತಿಳಿಸಿ 

ಅವರುಗಳಿಗೆ ಸಗಟಾಗಿ ಮಾರಾಟ ಮಾಡುವುದಾಗಿ ತಿಳಿಸಿರುತ್ತಾರೆ. ಮತ್ತೊಬ್ಬ ಆರೋಪಿ ಶಿವಕುಮಾರ್ ಈತನು ದುಶ್ಚಟಗಳ ವ್ಯಸನಿಯಾಗಿದ್ದು, ದೈನಂದಿನ ಖರ್ಚುವೆಚ್ಚಕ್ಕಾಗಿ ಆರೋಪಿ ವಿಜಯ್‌ಯೊಂದಿಗೆ ಸೇರಿ ಈ ಕೃತ್ಯವೆಸಗುತ್ತಿರುವುದಾಗಿ ಹಾಗೂ ಆರೋಪಿಗಳು ಈ ಹಿಂದೆ ಕೋಲಾರ, ಆಂಧ್ರಪ್ರದೇಶ, ಬೆಂಗಳೂರು ನಗರಗಳಿಗೆ ಗಾಂಜಾವನ್ನು ತೆಗೆದುಕೊಂಡು ಬಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡಿರುವುದಾಗಿ ತನಿಖೆಯಿಂದ ತಿಳಿದು ಬಂದಿರುತ್ತದೆ.  

ಈ ಪ್ರಕರಣದಲ್ಲಿ ಶ್ರೀಮತಿ ರೀನಾ ಸುವರ್ಣ, ಜೆ.ಸಿ.ನಗರ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಬಾಲರಾಜು ಜಿ., ಪೊಲೀಸ್ ಇನ್ಸ್ಪೆಕ್ಟರ್, ಸಂಜಯನಗರ, ಗಿರೀಶ್ ನಾಯ್ಕ್ ಹಾಗೂ ಸಿಬ್ಬಂದಿಗಳಾದ ಸುರೇಶ್, ಪ್ರದೀಪ್ ಕುಮಾರ್, ಟಿಪ್ಪುಸುಲ್ತಾನ್, ಶ್ರೀಮತಿ ಲತಾಮಣಿ, ಪ್ರದೀಪ್, ಕಾರ್ತಿಕ್, ಅರುಣ, ಮಲ್ಲಪ್ಪ ಕಡ್ಲಿ, ರಕ್ಷಿತ್ ರವರುಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

Post a Comment

0 Comments

Ad Code

Responsive Advertisement