Ticker

6/recent/ticker-posts

Ad Code

Responsive Advertisement

ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ಗೆ 59ನೇ ಜನ್ಮದಿನದ ಸಂಭ್ರಮ

 


ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಅವರಿಗೆ ಸೋಮವಾರ (ಜುಲೈ 12) 59ನೇ ಜನ್ಮದಿನದ ಸಂಭ್ರಮ. ಕೋವಿಡ್‌ ಕಾರಣದಿಂದಾಗಿ ಕೇವಲ ಕುಟುಂಬದ ಸದಸ್ಯರು ಹಾಗೂ ಆಪ್ತರ ಸಮ್ಮುಖದಲ್ಲಿ ಕೇಕ್‌ ಕತ್ತರಿಸಿ ಸರಳವಾಗಿ ಜನ್ಮದಿನಾಚರಣೆಯನ್ನು ಶಿವರಾಜ್‌ಕುಮಾರ್‌ ಆಚರಿಸಿದ್ದಾರೆ.

‘ನನ್ನ ಜನ್ಮದಿನಕ್ಕಿಂತ ನಿಮ್ಮೆಲ್ಲರ ಆರೋಗ್ಯ ನನಗೆ ಮುಖ್ಯ. ದೇವರ ದಯೆಯಿಂದ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಹಾಗಂತ ನಾವು ಎಚ್ಚರಿಕೆಯಿಂದ ಇರಬೇಕಾದ ಸಮಯ ಇನ್ನೂ ಮುಗಿದಿಲ್ಲ. ಮುಂದೆ ಇನ್ನಷ್ಟು ಎಚ್ಚರಿಕೆಯಿಂದ ಇರಬೇಕು. ಜುಲೈ 12 ನನ್ನ ಜನ್ಮದಿನ. ಇದು ಎಲ್ಲರಿಗೂ ತಿಳಿದಿದೆ. ನಿಮ್ಮ ಶುಭಹಾರೈಕೆಯನ್ನು ಸಾಮಾಜಿಕ ಜಾಲತಾಣಗಳ ಮುಖಾಂತರವೇ ತಿಳಿಸಿ’ ಎಂದು ಕೆಲ ದಿನಗಳ ಹಿಂದಷ್ಟೇ ಶಿವರಾಜ್‌ಕುಮಾರ್‌ ವಿಡಿಯೊ ಸಂದೇಶದ ಮುಖಾಂತರ ತಿಳಿಸಿದ್ದರು.
ಅದರಂತೇ ಸಾವಿರಾರು ಅಭಿಮಾನಿಗಳು ಹಾಗೂ ಪ್ರಮುಖ ಕಲಾವಿದರೆಲ್ಲರೂ ಸಾಮಾಜಿಕ ಜಾಲತಾಣದ ಮುಖಾಂತರವೇ ಶಿವರಾಜ್‌ಕುಮಾರ್‌ ಅವರಿಗೆ ಶುಭ ಹಾರೈಸಿದ್ದಾರೆ.

 ಚಂದನವನದಲ್ಲಿ ತಮ್ಮ ವಿಶಿಷ್ಟ ಶೈಲಿಯ ಅಭಿನಯದಿಂದ ಅಭಿಮಾನಿಗಳ ಮನಸ್ಸು ಗೆದ್ದಿರುವ ನಟ ಶಿವರಾಜ್‌ಕುಮಾರ್ ಅವರಿಗೆ ಜಯಣ್ಣ ಫಿಲಂಸ್ ಕಡೆಯಿಂದ ಹುಟ್ಟುಹಬ್ಬದ ವಿಶೇಷ ಉಡುಗೊರೆ ಲಭಿಸಿದೆ. ‘ಭಜರಂಗಿ 2’ ಸಿನಿಮಾದ 4K ಟೀಸರ್ ಅನ್ನು ಜಯಣ್ಣ ಫಿಲಂಸ್ ಬಿಡುಗಡೆ ಮಾಡಿದೆ. ಎ. ಹರ್ಷ ನಿರ್ದೇಶನದ ಭಜರಂಗಿ 2 ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದ್ದು, ನಾಯಕನ ಪಾತ್ರದಲ್ಲಿ ಶಿವರಾಜ್‌ಕುಮಾರ್ ಅಭಿನಯಿಸಿದ್ದರೆ, ಭಾವನ ಮೆನನ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

Post a Comment

0 Comments

Ad Code

Responsive Advertisement