ಬಳ್ಳಾರಿ ಜುಲೈ 05.ಚಾರ್ಟರ್ಡ್ ಅಕೌಂಟೆ0ಟ್ ಪರೀಕ್ಷೆಗಳು ಭಾರತಾದ್ಯಂತ ದಿನಾಂಕ 5.7.2021 ರಿಂದ 30.7.2021 ರ ವರೆಗೆ ನಡೆಯುತ್ತವೆ.
ಪರೀಕ್ಷೆಗಳು ಭಾರತದಲ್ಲಿ ಅಲ್ಲದೆ ದುಬೈ, ಅಬುದಾಬಿ, ಮಸ್ಕಟ್ ಮತ್ತು ನೆಪಾಳದ ಕಟ್‌ಮಂಡು ಸೇರಿದಂತೆ ಒಟ್ಟು 368 ಕೇಂದ್ರಗಳಲ್ಲಿ ನಡೆಯುತ್ತವೆ.
ಇದರಲ್ಲಿ ಬಳ್ಳಾರಿಯು ಕೂಡ ಒಂದು ಪರೀಕ್ಷಾ ಕೇಂದ್ರವಾಗಿದ್ದು, ಈ ಪರೀಕ್ಷೆಯು ಬಳ್ಳಾರಿಯ ವೀರಶೈವ ಕಾಲೇಜಿನಲ್ಲಿ ನಡೆಯುತ್ತವೆ.
ಸಿಎ ಫೈನಲ್, ಇಂಟರ್‌ಮೀಡಿಯೇಟ್, ಐಪಿಸಿಸಿ ಮತ್ತು ಫೌಂಡೇಶನ್ ಸೇರಿದಂತೆ ಒಟ್ಟು 1000 ವಿಧ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗುತ್ತಿದ್ದಾರೆ.
ಈ ಪರೀಕ್ಷೆಯು ಸುಪ್ರೀಂ ಕೋರ್ಟ್ ಆದೇಶದಂತೆ ಎಲ್ಲಾ ಕೋವಿಡ್ ನಿಯಮಗಳನ್ನು ಪಾಲಿಸಿ ನಡೆಸಲಾಗುತ್ತಿದೆ ಎಂದು ಸಿಎ. ಹೊನ್ನೂರ ಸ್ವಾಮಿ .ಕೆ ಕಾರ್ಯದರ್ಶಿ ಚಾರ್ಟರ್ಡ್ ಅಕೌಂಟೆ0ಟ್ಸ್ ಸಂಸ್ಥೆ,ಬಳ್ಳಾರಿ ಶಾಖೆ ತಿಳಿಸಿದ್ದಾರೆ.

0 Comments