ಆದರೆ ಈಗ ಕೊರೋನಾ ಸ್ವಲ್ಪಮಟ್ಟಿಗೆ ತಗ್ಗಿರುವುದರಿಂದ, ಕೊರೋನಾದ ಮೂರನೇ ಅಲೆ ಬರುವ ಸಾಧ್ಯತೆ ಇರುವುದರಿಂದ ಆದಷ್ಟು ಬೇಗ ಮುಂದೂಡಲ್ಪಟ್ಟಿದ್ದ ಕಸಾಪ ಚುನಾವಣೆ ನಡೆದುಬಿಡಲಿ ಎಂದು ಕರ್ನಾಟಕದ ಹಲವು ಜಿಲ್ಲೆಗಳ ಅಭ್ಯರ್ಥಿಗಳ ಒಮ್ಮತದ ಅಭಿಪ್ರಾಯವಾಗಿದೆ.ಈ ಹಿಂದಿನ ಅಧ್ಯಕ್ಷರುಗಳ ಐದು ವರ್ಷಗಳ ಅವಧಿ ಮುಗಿದು, ಸೆಪ್ಟೆಂಬರ್ 2 ನೇ ತಾರೀಖಿಗೆ ಹೆಚ್ಚುವರಿ ಆರು ತಿಂಗಳ ಅವಧಿಯೂ ಮುಗಿಯುತ್ತದೆ.
ಮುಂದೆ ಮಳೆಗಾಲ ಚಳಿಗಾಲ ಆರಂಭವಾಗಿ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸುವ ಸಂಭವ ಎದುರಾದಾಗ ಚುನಾವಣೆ ನಡೆಸುವುದು ಕಷ್ಟ ಸಾಧ್ಯ. ಅಲ್ಲದೇ ಕಸಾಪದ ನಿಬಂಧನೆಯ ಪ್ರಕಾರ ಆಗಷ್ಟ್ ಅಂತ್ಯದ ಒಳಗಾಗಿ ಚುನಾವಣೆ ನಡೆಸಿದರೆ ಆಡಳಿತಾಧಿಕಾರಿಯ ನೇಮಕದ ಅವಶ್ಯಕತೆಯೂ ಇರುವುದಿಲ್ಲ.
ಪ್ರತಿಯೊಂದು ತಾಲೂಕಿನಲ್ಲಿ ಹಾಗೂ ಕೆಲವೆಡೆ ಮಾತ್ರ ಹೋಬಳಿಗಳಲ್ಲಿ ಮಾತ್ರ ಈ ಚುನಾವಣೆ ನಡೆಯುವುದರಿಂದ, ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಸೂಕ್ತ ಕ್ರಮಗಳನ್ನು ಜರುಗಿಸಿ ಚುನಾವಣೆ ನಡೆಸಬಹುದು
ಮತ್ತು ಪ್ರತಿಯೊಂದು ಚುನಾವಣಾ ಬೂತ್ ನಲ್ಲಿ ಮತದಾರರ ಗರಿಷ್ಠ ಸಂಖ್ಯೆ ಸಾವಿರವನ್ನೂ ತಲುಪುವುದಿಲ್ಲ.
ಅದರಲ್ಲೂ ಶೇ. 50 ರಿಂದ 60 ರಷ್ಟು ಮಾತ್ರ ಮತ ಚಲಾವಣೆಯಾಗುತ್ತದೆ. ಕಸಾಪದ ಎಲ್ಲಾ ಮತದಾರರೂ ಪ್ರಬುದ್ಧರಾಗಿರುವುದರಿಂದ, ಸ್ಯಾನಿಟೈಜರ್ ಮತ್ತು ಮಾಸ್ಕ್ ಬಳಸುವುದರ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಮತ ಚಲಾಯಿಸುತ್ತಾರೆ. ಈಗ ಎಲ್ಲಾ ಖಾಸಗಿ ಮತ್ತು ಸರಕಾರಿ ಕಚೇರಿಗಳಲ್ಲಿ ಎಲ್ಲಾ ವ್ಯವವಹಾರವೂ ನಡೆಯುವಂತೆ, ಕಸಾಪ ಚುನಾವಣೆ ನಡೆಯುತ್ತದೆ ಎನ್ನಬಹುದು.
ಈ ಚುನಾವಣೆ ಯಾವುದೇ ರಾಜಕೀಯ ಪಕ್ಷಕ್ಕೆ ಸಂಬAಧ ಪಡದ ಕಾರಣ, ಗುಂಪು ಪ್ರಚಾರ ಇರುವುದಿಲ್ಲ. ಹಣ, ಮದ್ಯ ಇವುಗಳು ಪ್ರವೇಶ ಮಾಡುವುದಿಲ್ಲ. ಚುನಾವಣೆ ಕೇವಲ 13 ದಿನಗಳು ಇದ್ದಾಗ ಮುಂದೂಡಲ್ಪಟ್ಟಿತ್ತು. ಹಾಗೇ ಚುನಾವಣಾ ದಿನಾಂಕ ನಿಗದಿಪಡಿಸಿದ 13 ದಿನಗಳ ಒಳಗಾಗಿ ಚುನಾವಣಾ ಪ್ರಕ್ರಿಯೆ ಮುಗಿದಲ್ಲಿ ಎಲ್ಲರಿಗೂ ನಿರಾಳವಾಗುತ್ತದೆ. ಮುಂದೆ ಎಲ್ಲಾ ಅಭ್ಯರ್ಥಿಗಳೂ ಅವರವರ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಅನುಕೂಲ ವಾಗುತ್ತದೆ.ಜನರ ಆರೋಗ್ಯದ ಕಡೆ ಗಮನ ಹರಿಸುವುದರೊಂದಿಗೆ ಆದಷ್ಟು ಬೇಗ ಚುನಾವಣೆ ನಡೆಯಲಿ ಎಂಬುದು ಸಾರ್ವತ್ರಿಕ ಅಭಿಪ್ರಾಯ. ಈ ಬಗ್ಗೆ ಸರಕಾರ ಮತ್ತು ರಾಜ್ಯ ಕಸಾಪದ ಚುನಾವಣಾ ಅಧಿಕಾರಿಗಳು ಗಮನ ಹರಿಸಬೇಕೆಂದು ವೈ. ಎಂ. ವೈದ್ಯನಾಥ.ಎ.ಇ.ಇ. ಜೆಸ್ಕಾಂ. ಬಳ್ಳಾರಿ ಕಸಾಪ ನ ಆಜೀವ ಸದಸ್ಯರು ಕೇಳಿಕೊಂಡಿದ್ದಾರೆ.

0 Comments