Ticker

6/recent/ticker-posts

Ad Code

Responsive Advertisement

ಕೂಲಿಕಾರ್ಮಿಕರಿಗೆ ದಿನಸಿ ಪದಾರ್ಥಗಳ ಫುಡ್ ಕಿಟ್ ವಿತರಣೆ

 ರಾಜಾಜಿ ನಗರ ವಿಧಾನ ಸಭಾ ಕ್ಷೇತ್ರದ ಶಿವನಗರ, ಪ್ರಕಾಶ್ ನಗರ ಹಾಗೂ ಕಾಮಾಕ್ಷಿ ಪಾಳ್ಯದಲ್ಲಿ ಭಾರತೀಯ ಜನತಾ ಪಾರ್ಟಿ ರಾಜಾಜಿನಗರ ಮಂಡಲ ವತಿಯಿಂದ  ಕೋವಿಡ್ -19,ಹಾಗೂ ಲಾಕ್ ಡೌನ್ ಆಗಿ ಸಂಕಷ್ಟ ಎದುರಿಸುತ್ತಿರುವ ಬಡ ಹಾಗೂ ಮಧ್ಯಮ ವರ್ಗದ ಕೂಲಿಕಾರ್ಮಿಕರಿಗೆ  ದಿನಸಿ ಪದಾರ್ಥಗಳ ಫುಡ್ ಕಿಟ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 

ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕರು ಹಾಗೂ ಶಿಕ್ಷಣ ಸಚಿವರಾದ ಎಸ್ ಸುರೇಶ್ ಕುಮಾರ್ ಅವರು ಆಗಮಿಸಿ ಫುಡ್ ಕಿಟ್ ವಿತರಣೆ ಮಾಡುವ ಮೂಲಕ ಚಾಲನೆ ನೀಡಿದರು.  

ಕೊರೋನ ಸೋಂಕಿನಿಂದ ಇಡೀ ದೇಶವೇ ಸಂಕಷ್ಟ ಎದುರಾಗಿದ್ದು ಇದನ್ನರಿತು  ರಾಜ್ಯ ಸರ್ಕಾರ ಸೋಂಕು ನಿಯಂತ್ರಣಕ್ಕೆ ತರಲು ಲಾಕ್ ಡೌನ್ ಹೇರಲಾಗಿದ್ದ ರಿಂದ ದುಡಿಯುವ ಶ್ರಮಿಕ ವರ್ಗಕ್ಕೆ ಸಂಕಷ್ಟ ಎದುರಾಗಿದ್ದು ಇಂಥ ಸಂದರ್ಭದಲ್ಲಿ ನಮ್ಮ ಜನಪ್ರಿಯ ಮುಖ್ಯ ಮಂತ್ರಿ ಬಿ ಎಸ್ ಯಡಿಯೂರಪ್ಪ ನವರು ಪರಿಹಾರದ ಪ್ಯಾಕೇಜ್ ಘೋಷಣೆ ಮಾಡಿದ್ದು ಹಾಗೂ ಇದನ್ನ ತ್ವರಿತವಾಗಿ ಸಂಬಂಧಪಟ್ಟ ಕೈ ಸೇರಲು ಈಗಾಗಲೇ ನಮ್ಮ ಕ್ಷೇತ್ರದ ಎಲ್ಲ ಭಾರತೀಯ ಜನತಾ ಪಕ್ಷದ ಮುಖಂಡರು ಕಾರ್ಯಕರ್ತರು ಕಾರ್ಯ ಪ್ರವುರ್ತರಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದ ಸಚಿವರು ಇನ್ನೂ ಈ ಕೊರೋನ ಅಲೆ ಕಡಿಮೆಯಾಗಿಲ್ಲ, ಯಾರು ಮೈ ಮರೆಯಬಾರದು,  

ರಾಜ್ಯ ಸರ್ಕಾರದ ಮಾರ್ಗ ಸೂಚನೆಗಳನ್ನು ಅನುಸರಿಸಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು, ಆಗಾಗ ತಮ್ಮ ಕೈ ಗಳನ್ನ ಸ್ವಚ್ಚವಾಗಿ ತೊಳೆದುಕೊಂಡು ಶುಭ್ರಗೊಳಿಸಬೇಕು.  ಸುಖಾ ಸುಮ್ಮನೆ ಹೊರಗಡೆ ತಿರುಗಾಡಬಾರದು. ನಿಮ್ಮ ಜೀವನ ನಿಮ್ಮ ಕೈಯಲ್ಲಿ, ಜೀವ ಇದ್ದರೆ ಜೀವನ ಹಾಗಾಗಿ ಎಲ್ಲರೂ ಲಸಿಕೆ ಹಾಕಿಸಿ ಕೊಳ್ಳಿ,

ನಿಮ್ಮ ಕುಟುಂಬ ಹಾಗೂ ಸುತ್ತಮುತ್ತಲಿನ ಬಡಾವಣೆಯ ನಿವಾಸಿ ಗಳಿಗೆ ಇದರ ಬಗ್ಗೆ ಜಾಗೃತಿ ಮೂಡಿಸಿ ಲಸಿಕಾ ಕೇಂದ್ರಕ್ಕೆ ಕರೆ ತಂದು ಲಸಿಕೆ ಹಾಕಿಸಿ ಕೋರೋನಾ ಹಿಮ್ಮೆಟ್ಟಿಸಲು  ಎಲ್ಲರೂ ಸರ್ಕಾರದ ಮಾರ್ಗ ಸೂಚನೆಗಳನ್ನು ಪಾಲನೆ ಮಾಡಬೇಕು ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು. 

ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ರಾಘವೇಂದ್ರ ರಾವ್, ಬಿಬಿಎಂಪಿ ಮಾಜಿ ಉಪ ಮಹಾಪೌರ ರಾದ ಕೆ ರಂಗಣ್ಣ, ಯುವ ಮುಖಂಡ ಅನಿಲ್ ರಂಗಣ್ಣ ಸೇರಿದಂತೆ ಹಲವು ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

Post a Comment

0 Comments

Ad Code

Responsive Advertisement