ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ ವರ್ಚುವಲ್ ರೀತಿಯಲ್ಲಿ 250 ಹಾಸಿಗೆಗಳ ಸತ್ಯಪ್ರಭಾ ಲೇಕ್‌ಸೈಡ್ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ಮತ್ತು ಮೆಡಿಕಲ್ ಸೆಂಟರ್‌ಗಳ ಉದ್ಘಾಟನೆ
ಬೆಂಗಳೂರು, 09, 2021 :- 40 ವರ್ಷಗಳಷ್ಟು ಹಳೆಯ ಐತಿಹಾಸಿಕವಾದ ಹಾಗೂ ಅಲಸೂರಿನಲ್ಲಿರುವ ಲೇಕ್‌ಸೈಡ್ ಮೆಡಿಕಲ್ ಹಾಸ್ಪಿಟಲ್ ಪ್ರಸ್ತುತ ನವೀಕರಣಗೊಳ್ಳುತ್ತಿದ್ದು, ಇದನ್ನು ಇಂದು ನಗರದಲ್ಲಿ ಕರ್ನಾಟಕದ ಗೌರವಾನ್ವಿತ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪ ಅವರು ವರ್ಚುವಲ್ ರೀತಿಯಲ್ಲಿ ಉದ್ಘಾಟಿಸಿದರು. ಜೊತೆಗೆ ಅವರು 150 ಹಾಸಿಗೆಗಳ ವಿಶೇಷ ಕೋವಿಡ್ ವಾರ್ಡ್ ಅನ್ನು ಕೂಡ ಉದ್ಘಾಟಿಸಿದರು. ಉದ್ಯಾನನಗರಿಯ ಹೃದಯಭಾಗದಲ್ಲಿರುವ ಲೇಕ್‌ಸೈಡ್ ಹಾಸ್ಪಿಟಲ್ ನಗರದ ಎಲ್ಲಾ ಭಾಗಗಳೊಂದಿಗೆ ಸಾಟಿಯಿಲ್ಲದ ಸಂಪರ್ಕ ಹೊಂದಿರುತ್ತದೆ. ಸಂಪೂರ್ಣವಾಗಿ ನವೀಕರಣಗೊಂಡ ನಂತರ ರೋಗಿಗಳಿಗೆ ಉನ್ನತಮಟ್ಟದ ವಿಶೇಷ ಮೂರನೇ ಹಂತದ ವೈದ್ಯಕೀಯ ಆರೈಕೆಯನ್ನು ಪೂರೈಸುವ ಗುರಿ ಹೊಂದಿದೆ.
``ಸತ್ಯಪ್ರಭಾ ಲೇಕ್‌ಸೈಡ್ ಹಾಸ್ಪಿಟಲ್‌ನ ಆವರಣದಲ್ಲಿ 150 ಹಾಸಿಗೆಗಳ ಕೋವಿಡ್ ಆರೈಕೆ ಕೇಂದ್ರ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭವಾಗುತ್ತಿರುವುದು ಅದ್ಭುತ ಸುದ್ದಿಯಾಗಿದೆ. ಸತ್ಯಪ್ರಭಾ ಲೇಕ್‌ಸೈಡ್ ಹಾಸ್ಪಿಟಲ್ ಬೆಂಗಳೂರಿನಲ್ಲಿ ಅತ್ಯಂತ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಒಂದಾಗಿದ್ದು, ನವೀಕರಣದ ನಂತರ ಜನರಿಗೆ ಸೇವೆ ನೀಡಲು ಸಿದ್ಧವಾಗಿದೆ. ಕೋವಿಡ್-19 ಅನ್ನು ನಿಯಂತ್ರಿಸುವಲ್ಲಿ ಖಾಸಗಿ ಆಸ್ಪತ್ರೆಗಳು ಸರ್ಕಾರದೊಂದಿಗೆ ಕೈಜೋಡಿಸುತ್ತಿರುವುದು ಸ್ವಾಗತಾರ್ಹ ನಡೆಯಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಸೇವೆಗಳನ್ನು ಪೂರೈಸುವ ಜನರು ವೃತ್ತಿಪರರಾಗಿದ್ದು, ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡಿರಬೇಕು. ಸಾಮಾನ್ಯ ಜನರಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆಗಳನ್ನು ಪೂರೈಸುವ ಖಾತ್ರಿ ಮಾಡಿಕೊಳ್ಳುವುದು ನಮ್ಮ ಸತತ ಪರಿಶ್ರಮವಾಗಿರಬೇಕು. ಈ ನಿಟ್ಟಿನಲ್ಲಿ ಸತ್ಯಪ್ರಭಾ ಲೇಕ್‌ಸೈಡ್ ಹಾಸ್ಪಿಟಲ್ ಕೆಲಸ ಮಾಡಲಿದೆ ಎಂಬ ಖಾತ್ರಿ ನನಗಿದೆ’’ ಎಂದು ಆಸ್ಪತ್ರೆಯನ್ನು ವರ್ಚುವಲ್ ರೀತಿಯಲ್ಲಿ ಉದ್ಘಾಟಿಸಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಶ್ರೀ ವೈ.ಎಸ್. ಯಡಿಯೂರಪ್ಪ ಹೇಳಿದರು.
ಈ ಸಂದರ್ಭದಲ್ಲಿ ಹಾಜರಿದ್ದ ಗಣ್ಯರಲ್ಲಿ -ಶ್ರೀ ಪಿ.ಸಿ. ಮೋಹನ್, ಸಂಸತ್ ಸದಸ್ಯರು ಮತ್ತು ಶ್ರೀ ರಿಜ್ವಾನ್ ಅರ್ಷದ್, ಶಾಸಕರು ಸೇರಿದ್ದರು. ಜೊತೆಗೆ ಕರ್ನಾಟಕದ ವೈದ್ಯಕೀಯ ಶಿಕ್ಷಣ ಸಚಿವರಾದ ಶ್ರೀ ಡಿ.ಕೆ. ಸುಧಾಕರ್, ಡಿಆರ್‌ಡಿಒನ ಚರ‍್ಮನ್ ಶ್ರೀ ಜಿ.ಸತೀಶ್ ರೆಡ್ಡಿ, ಸಂಸದರಾದ ಶ್ರೀ ತೇಜಸ್ವಿ ಸರ‍್ಯ ಮತ್ತು ವಿಆರ್‌ಎಲ್ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಆನಂದ್ ಸಂಕೇಶ್ವರ್ ಅವರು ಉದ್ಘಾಟನಾ ಕಾರ್ಯಕ್ರಮದಲ್ಲಿ ವರ್ಚುವಲ್ ರೀತಿಯಲ್ಲಿ ಭಾಗವಹಿಸಿದ್ದರು.
ಇವರಿಗೆ ಚೈತನ್ಯಾ ಆದಿಕೇಶವಲು ಮತ್ತು ಕುಟುಂಬದವರು ಸ್ವಾಗತ ಕೋರಿದರು. ಇವರು ಪ್ರಸ್ತುತ ಲೇಕ್‌ಸೈಡ್ ಮೆಡಿಕಲ್ ಸೆಂಟರ್ ಅಂಡ್ ಹಾಸ್ಪಿಟಲ್‌ನ ಮಾಲೀಕರಾಗಿದ್ದು, ಈ ಆಸ್ತಿಯನ್ನು ಸ್ವಾಧೀನಪಡಿಸಿಕೊಂಡು ಆಸ್ಪತ್ರೆಯ ನವೀಕರಣ ಮತ್ತು ಪುನರುಜ್ಜೀವನದಲ್ಲಿ ಪ್ರಮುಖಪಾತ್ರ ವಹಿಸುತ್ತಿದ್ದಾರೆ.
ಪ್ರಸ್ತುತ ನವೀಕರಣಗೊಳ್ಳುತ್ತಿರುವ ಆಸ್ಪತ್ರೆ ಶೀಘ್ರದಲ್ಲಿ ಕಾರ್ಯಾಚರಣೆ ಆರಂಭಿಸಲಿದ್ದು, ಲೇಕ್‌ಸೈಡ್ ಮೆಡಿಕಲ್ ಹಾಸ್ಪಿಟಲ್ ಎಲ್ಲರಿಗೂ ಇತ್ತೀಚಿನ ಮತ್ತು ಅತ್ಯಂತ ಸಮಗ್ರವಾದ ವೈದ್ಯಕೀಯ ಆರೈಕೆ ಸೌಲಭ್ಯಗಳನ್ನು ಪೂರೈಸಲಿದೆ. ಲೇಕ್‌ಸೈಡ್ ಮೆಡಿಕಲ್ ಹಾಸ್ಪಿಟಲ್‌ನ ಮೇಲ್ವಿಚಾರಣೆಯನ್ನು ಡಾ. ರಾಜೇಶ್ ನಾಯ್ಡು ಅವರು ನೋಡಿಕೊಳ್ಳಲಿದ್ದಾರೆ.
0 Comments