Ticker

6/recent/ticker-posts

Ad Code

Responsive Advertisement

ಎಸ್.ಎಸ್. ಕಲಾ ಸಂಗಮವತಿಯಿ0ದ ಕೋರೋನಾ ವಾರಿಯರ್ಸ್ ಗಳಿಗೆ ಸನ್ಮಾನ...!

ಎಸ್.ಎಸ್. ಕಲಾ ಸಂಗಮವು ಕೋರೋನಾ ವಾರಿಯರ್ಸ್ಗಳಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಬೆಂಗಳೂರು ಮಹಾನಗರದ ನಯನ ಸಭಾಂಗಣದಲ್ಲಿ ಅಚ್ಚುಕಟ್ಟಾಗಿ ಏರ್ಪಡಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಹಲವು ಮಹನೀಯರುಗಳನ್ನು ಗುರುತಿಸಿ ಅವರ ಸಾಧನೆಯ ಪ್ರತಿಫಲವಾಗಿ ಸನ್ಮಾನಿಸಲಾಯಿತು.











ಕುಮಾರಿ ಅಭಿಜ್ಞಾ ಪಿ. ಕಶ್ಯಪ್ ಅವರ ಗಣೇಶನ ಪ್ರಾರ್ಥನೆಯೊಂದಿಗೆ ಸಮಾರಂಭ ಪ್ರಾರಂಭಗೊ0ಡಿತು.

ಕಲಾ ಸಂಗಮದ ಅಧ್ಯಕ್ಷ ಬಿ.ಕೆ.ಶಿವಕುಮಾರ್ ಅವರು ಕೋವಿಡ್ ಸಂಬ0ಧ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಶಿಸ್ತು ಸಂಯಮ ಅಲ್ಲಿ ಎದ್ದು ಕಾಣುತ್ತಿದ್ದುದು ಸಂತೋಷದ ವಿಷಯವೇ.

ಹಾವೇರಿ ಜಿಲ್ಲೆ, ರಾಣೆಬೆನ್ನೂರಿನ ಐರಾಣಿ ಗ್ರಾಮದ ಜೂ.ವಿಷ್ಣುವರ್ಧನ್ ಅವರು ಪ್ರೇಕ್ಷಕರನ್ನು ರಂಜಿಸಿದರು.

ಮುಖ್ಯ ಅತಿಥಿಗಳಾಗಿ ಅಸಿಸ್ಟೆಂಟ್ ಕಮೀಷನರ್ ಆಫ್ ಪೊಲೀಸ್ ನಜ್ಮಾ ಫಾರುಖ್ ಅವರು ಆಗಮಿಸಿದ್ದರು. ವೇದಿಕೆ ಹಂಚಿಕೊ0







ಡು ಮಾತನಾಡಿದ ನಜ್ಮಾ ಫಾರುಖ್ ಅವರು, ಈ ಒಂದು ಕಾರ್ಯಕ್ರಮಕ್ಕೆ ನಾನು ಆಗಮಿಸಿರುವುದು ನನಗೆ ಸಂತೋಷ ತಂದಿದೆ. ಕೋರೋನಾ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳು ತಮ್ಮ ಜೀವದ ಹಂಗನ್ನು ತೊರೆದು ವಿವಿಧ ಕಾರ್ಯಗಳಲ್ಲಿ ತೊಡಗಿರುವುದು ನಿಜವಾಗಿಯೂ ಶ್ಲಾಘನೀಯ, ಹಾಗೂ ಪತ್ರಕರ್ತರು ಕೇವಲ ವರದಿಗಳನ್ನು ಮಾಡುವುದಲ್ಲದೇ, ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವುದು ಸಂತೋಷದ ವಿಷಯ ಅವರಿಗೆ ನಮ್ಮ ಪೊಲೀಸ್ ಇಲಾಖೆ ವತಿಯಿಂದ ಕೃತಜ್ಞತೆಗಳನ್ನು ವೇದಿಕೆ ಮೂಲಕ ತಿಳಿಸುತ್ತಿದ್ದೇನೆ. ಹಾಗೂ ವಾರಿಯರ್ಸ್ಗಳಿಗೆ, ಸಮಾಜ ಸೇವಾ ಧುರೀಣರಿಗೆ ಸನ್ಮಾನಿಸುತ್ತಿರುವುದು ಒಳ್ಳೆಯ ಕಾರ್ಯಕ್ರಮವೂ ಹೌದು ಎಂದರು.

ಖ್ಯಾತ ಗಾಯಕ, ಚಲನಚಿತ್ರ ನಟ ಶ್ರೀ ಶಶಿಧರ್ ಕೋಟೆ ಅವರು ಆಗಮಿಸಿದ್ದುದು ವಿಶೇಷ ಕಳೆ ಕಟ್ಟಿತ್ತು. ಶ್ರೀಯುತರು ಮಾತನಾಡಿ, ಭಾರತೀಯ ಸಂಸ್ಕೃತಿ ಎಂದರೆ ಪ್ರೀತಿ ನೀತಿ ಭಕ್ತಿ, ಇಲ್ಲಿ ಜಾತಿ ಜನಾಂಗ ಎನ್ನದೇ ಎಲ್ಲರೂ ಸೇರಿದ್ದೇವೆ. ಮುಂದೆಯೂ ಪ್ರತಿಯೊಬ್ಬರೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ನಾವೆಲ್ಲ ಒಂದೇ ಎಂಬ0ತೆ ಸಮಾಜ ಮುನ್ನಡೆಸೋಣ ಎಂದರು. ನಾವು ಕನ್ನಡಿಗರು ಭಾವುಕರು ಎನ್ನುತ್ತಾ ಭಾವನಾತ್ಮಕವಾಗಿ ಮಾತನಾಡಿದರು.


ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಮಂಜುನಾಥ್ ಬನಶಂಕರಿ, ನಿವೃತ್ತ ಮುಖ್ಯ ಶಿಕ್ಷಕಿ ನಾಗಮಣಿ ಪಿ.ಆರ್., ಬಾಲ ನಟ ಆಕಾಶ್ ಭಜಂತ್ರಿ ಹಾಗೂ ಎಸ್.ಎಸ್. ಕಲಾ ಸಂಗಮದ ಅಧ್ಯಕ್ಷ ಬಿ.ಕೆ. ಶಿವಕುಮಾರ್ ಉಪಸ್ಥಿತರಿದ್ದರು. ಚಲನಚಿತ್ರ ನಟ, ನಿರೂಪಕ ಧನಂಜಯ ಅವರು ಕಾರ್ಯಕ್ರಮವನ್ನು ಸೊಗಸಾಗಿ ನಿರ್ವಹಿಸಿದರು.

ಇದೇ ಸಂದರ್ಭದಲ್ಲಿ ‘ನಮ್ಮ ಕುರಿ’ ಹೆಸರಿನ ನಕ್ಕು ನಗಿಸುವ ವಿಶೇಷ ಕಾರ್ಯಕ್ರಮದ ಯೂ-ಟ್ಯೂಬ್ ಚಾನೆಲ್‌ನ ದೃಶ್ಯಾವಳಿಯನ್ನು ಲೋಕಾರ್ಪಣೆ ಮಾಡಲಾಯಿತು. 


Post a Comment

0 Comments

Ad Code

Responsive Advertisement