Ticker

6/recent/ticker-posts

Ad Code

Responsive Advertisement

MADHUGIRI : ಬಲಿಷ್ಠ ಭಾರತ ನಿರ್ಮಾಣಕ್ಕೆ ಯುವಕರು ಕೈ ಜೋಡಿಸಬೇಕು:ಪಿ.ಎಲ್.ನರಸಿಂಹ ಮೂರ್ತಿ

ಮಧುಗಿರಿ : ಬಲಿಷ್ಠ ಭಾರತ ನಿರ್ಮಾಣಕ್ಕೆ ಯುವಕರು ಕೈ ಜೋಡಿಸಬೇಕೆಂದು ಬಿಜೆಪಿ ತಾಲೂಕು ಅಧ್ಯಕ್ಷ ಪಿ.ಎಲ್.ನರಸಿಂಹ ಮೂರ್ತಿ ತಿಳಿಸಿದರು.


ಪಟ್ಟಣದ ಬಿಜೆಪಿ ಕಚೇರಿ ಆವರಣದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚಾರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯೋಗಭ್ಯಾಸ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕ ಸಾಮಥ್ರ್ಯವನ್ನು ಹೆಚ್ಚಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಕೆಲವು ಯುವಕರು ಅನೇಕ ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ಅವರನ್ನು ಸರಿ ದಾರಿಗೆ ತರಲು ಪೋಷಕರು ಕ್ರಮ ಕೈಗೊಳ್ಳಬೇಕು ಎಂದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ ನಮ್ಮ ದೇಶದ ಯೋಗಕ್ಕೆ ಅಂತರರಾಷ್ರ್ಟೀಯ ಮನ್ನಣೆ ದೊರೆತಿದ್ದು, ಜೂ.21 ರಂದು ಜಗತ್ತಿನಾದ್ಯಂತ ಯೋಗ ದಿನವನ್ನಾಗಿ ಆಚರಿಸಲಾಗುತ್ತದೆ ಎಂದರು. 

ಇದೆ ಸಂಧರ್ಭದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಂಸ್ಥಯಿಂದ ಯೋಗ ಶಿಕ್ಷಕರಾದ ಎಂ.ಎನ್. ನರಸಿಂಹಮೂರ್ತಿ ಹಾಗೂ ಮಂಜುಳಾ ರಾಜ್‍ಕುಮಾರ್ ಅವರ ಮಾರ್ಗದರ್ಶನದಲ್ಲಿ ಕಾರ್ಯಕರ್ತರಿಗೆ ಯೋಗಾಭ್ಯಾಸ ಮಾಡಿಸಲಾಯಿತು.  

ಕಾರ್ಯಕ್ರಮದಲ್ಲಿ ಪಕ್ಷದ ಹಿರಿಯ ಮುಖಂಡರಾದ ಶ್ರೀ ನಾಗರಾಜಪ್ಪ. ಉಪಾಧ್ಯಕ್ಷರುಗಳಾದ ಗೋವಿಂದರೆಡ್ಡಿ, ಜಯಣ್ಣ, ಪ್ರಧಾನ ಕಾರ್ಯದರ್ಶಿ ಸೀತಾರಾಮು, ಖಜಾಂಚಿ ತಿಮ್ಮಣ್ಣ, ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷರಾದ ಡಾ.ಶ್ರೀನಿವಾಸ್, ಜಿಲ್ಲಾ ಒಬಿಸಿ ಮೋರ್ಚಾದ ಸದಸ್ಯ ಸುರೇಶ್, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಇಮ್ತಿಯಾಜ್ , ಮಹಿಳಾ ಮೋರ್ಚಾ ಕಾರ್ಯದರ್ಶಿ ಕಲ್ಪನಾ ಗೋವಿಂದರಾಜು, ಎಸ್ಸಿ ಮೋರ್ಚಾ ಅಧ್ಯಕ್ಷರಾದ ರವಿ, ರೈತ ಮೋರ್ಚಾ ಅಧ್ಯಕ್ಷ ಸುರೇಶ್ ರೆಡ್ಡಿ, ಸಾಮಾಜಿಕ ಜಾಲತಾಣ ಸಂಚಾಲಕ ಶರಣ ಶಾಂತಾರಾದ್ಯ, ಮುಖಂಡರಾದ ಮಂಜುನಾಥ್, ಪ್ರಸನ್ನಕುಮಾರ್ ಹಾಗೂ ಮುಂತಾದವರು ಇದ್ದರು.. ವರದಿ: ನಾಗೇಶ್ ಜೀವ ಮಧುಗಿರಿ

Post a Comment

0 Comments

Ad Code

Responsive Advertisement