Ticker

6/recent/ticker-posts

Ad Code

Responsive Advertisement

MADHUGIRI : ಯಾವುದೇ ಕ್ಷೇತ್ರದಲ್ಲಿ ದುಡಿದರೂ ಶಿಸ್ತನ್ನು ಪಾಲಿಸಬೇಕಾದ್ದು ಅತೀ ಮುಖ್ಯ : ಸ್ವಾಮಿ ಜಪಾನಂದಜೀ

ಮಧುಗಿರಿ: ಮನುಷ್ಯ ಯಾವುದೇ ಕ್ಷೇತ್ರದಲ್ಲಿ ದುಡಿದರೂ ಶಿಸ್ತನ್ನು ಪಾಲಿಸಬೇಕಾದ್ದು ಅತೀ ಮುಖ್ಯ ಎಂದು ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಸ್ವಾಮಿ ಜಪಾನಂದಜೀ ತಿಳಿಸಿದರು.

ಪಟ್ಟಣದ ಸಿಪಿಸಿ ಸಭಾಂಗಣದಲ್ಲಿ ಇನ್ಪೋಸಿಸ್ ಫೌಂಡೇಶನ್ , ಶ್ರೀ ರಾಮಕೃಷ್ಣ ಸೇವಾಶ್ರಮ ಹಾಗೂ ಮಧುಗಿರಿ ರೋಟರಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಖಾಸಗಿ ಬಸ್‍ಗಳ ಚಾಲಕ, ನಿರ್ವಾಹಕ ಹಾಗೂ ಏಜೆಂಟ್ ಸಿಬ್ಬಂದಿಗಳಿಗೆ ದಿನಸಿ ಕಿಟ್ ವಿತರಣ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ನಾಗರೀಕರಾದ ಬಧುಕಿನಲ್ಲಿ ಶಿಸ್ತನ್ನು ರೂಢಿಸಿಕೊಳ್ಳದೆ ಹೋದರೆ ದೊಡ್ಡ ಅನಾಹುತಗಳು ಸಂಭವಿಸಿ ಅಪಾರ ನಷ್ಟ ಅನುಭವಿಸಬೇಕಾಗುತ್ತದೆ. ಕರೋನಾ ನಿಯಂತ್ರಿಸಲು ವೈಯಕ್ತಿಕ ಸ್ಚಚ್ಚತೆ, ಮಾಸ್ಕ್ ಧರಿಸುವುದು ಅಗತ್ಯವಾಗಿದ್ದು ಖಾಸಗಿ ಬಸ್ ಗಳ ಸಂಚಾರ ಆರಂಭವಾದಾಗ ಮಾಸ್ಕ್ ಇಲ್ಲದ ಪ್ರಯಾಣಿಕರನ್ನು ಬಸ್‍ಗಳಿಗೆ ಹತ್ತಿಸ ಬೇಡಿ, ಇದರಿಂದ ಮೂರನೇ ಅಲೆ ಹರಡದಂತೆ ತಡೆಯಲು ಸಾಧ್ಯ ಎಂದರು.

ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ ಮಾತನಾಡಿ ಕರೋನಾ ಮೂರನೇ ಅಲೆ ಈಗಾಗಲೇ ಕೆಲವು ರಾಜ್ಯಗಳಲ್ಲಿ ಪ್ರಾರಂಭವಾಗಿದ್ದು ಇದು ಚಿಕ್ಕ ಮಕ್ಕಳನ್ನು ಕಾಡುವ ಆತಂಕ ಎದುರಾಗಿದೆ ಆದ್ದರಿಂದ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಪ್ರತಿಯೊಬ್ಬರು ಕಡ್ಡಾಯವಾಗಿ ಲಸಿಕೆ ಪಡೆದು ಕೊಳ್ಳಬೇಕೆಂದರು.

ಖಾಸಗಿ ಬಸ್‍ಗಳ ಮಾಲೀಕರ ಸಂಘದ ಅಧ್ಯಕ್ಷ ಜಿಲ್ಲಾ ಕಾರ್ಯದರ್ಶಿ ಎಂ.ಎಸ್.ಶಂಕರನಾರಾಯಣ್ ಮಾತನಾಡಿ ಖಾಸಗಿ ಬಸ್ ಗಳ ಸಿಬ್ಬಂದಿಗಳಲ್ಲಿ ಬಹುತೇಕರು ಲಸಿಕೆ ಪಡೆದಿದ್ದು ಇನ್ನುಳಿದವರಿಗೆ ಆರ್ ಟಿ ಓ ಹಾಗೂ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ವಿಶೇಷ ಶಿಬಿg ಏರ್ಪಡಿಸಿ ಲಸಿಕೆ ಹಾಕಿಸಲಾಗುವುದು ಮುಂದಿ ದಿನಗಳಲ್ಲಿ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುವಾಗ ಲಸಿಕೆ ಪಡೆದಿರುವ ಬಗ್ಗೆ ಕಡ್ಡಾಯವಾಗಿ ಪ್ರಮಾಣ ಪತ್ರ ತರಬೇಕಾಗುತ್ತದೆ ಎಂದರು.

ಇದೇ ಸಂಧರ್ಭದಲ್ಲಿ ಆಶ್ರಮದ ವತಿಯಿಂದ 13 ಪಲ್ಸ್ ಆಕ್ಸಿಮೀಟರ್‍ಗಳನ್ನು ಟಿಹೆಚ್‍ಓ ರವರಿಗೆ ಹಸ್ತಾಂತರಿಸಲಾಯಿತು.

ಟಿಹೆಚ್‍ಓ ರಮೇಶ್ ಬಾಬು, ಪುರಸಭೆಯ ಸದಸ್ಯರಾದ ಕೆ.ನಾರಾಯಣ್, ಎಂ.ಎಲ್.ಗಂಗರಾಜು, ರೋಟರಿ ಆದ್ಯಕ್ಷ ಎಂ.ಶಿವಲಿಂಗಪ್ಪ, ಕಾರ್ಯದರ್ಶಿ ಜಿ.ಜಯರಾಮಯ್ಯ, ಖಜಾಂಚಿ ಎಂ.ವೆಂಕಟರಾಮು, ಬಸ್ ಮಾಲೀಕ ಎಂ.ವಿ.ರುದ್ರಾರಾಧ್ಯ, ಆಶ್ರಮದ ವ್ಯವಸ್ಥಾಪಕ ಸುದೇಶ್ ಕುಮಾರ್, ತಾಲ್ಲೂಕು ಸಂಚಾಲಕರಾದ ಹೆಚ್.ಆರ್. ಶಶಿಕುಮಾರ್, ಟಿ.ಪ್ರಸನ್ನ ಕುಮಾರ್ ಇದ್ದರು. 

ಪೋಟೋ ಶೀರ್ಷಿಕೆ 19 ಮಧುಗಿರಿ 02: ಮಧುಗಿರಿ ಪಟ್ಟಣದ ಸಿಪಿಸಿ ಸಭಾಂಗಣದಲ್ಲಿ ಇನ್ಪೋಸಿಸ್ ಫೌಂಡೇಶನ್ , ಶ್ರೀ ರಾಮಕೃಷ್ಣ ಸೇವಾಶ್ರಮ ಹಾಗೂ ಮಧುಗಿರಿ ರೋಟರಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಖಾಸಗಿ ಬಸ್ ಗಳ ಚಾಲಕ, ನಿರ್ವಾಹಕ ಹಾಗೂ ಏಜೆಂಟ್ ಸಿಬ್ಬಂದಿಗಳಿಗೆ ದಿನಸಿ ಕಿಟ್‍ಗಳನ್ನು ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಸ್ವಾಮಿ ಜಪಾನಂದಜೀ ವಿತರಿಸಿದರು.

Post a Comment

0 Comments

Ad Code

Responsive Advertisement