ಕೊರೋನ ಲಾಕ್ ಡೌನ್ ಸಡಿಲಿಕೆಯಾದರು ಬಡವರು ,ಕೂಲಿಕಾರ್ಮಿಕರು ಮತ್ತು ಬೀದಿ ಬದಿಯ ವ್ಯಾಪಾರಿಗಳಿಗೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ ಮತ್ತು ಕೊವಿಡ್-19 ಸಾಂಕ್ರಾಮಿಕ ತಡೆಗಟ್ಟಲು ಶ್ರಮಿಸುತ್ತಿರುವ ಕೊರೋನ ವಾರಿಯರ್ಸ್ ಗಳಿಗೆ *ದಶಮುಖ ಸಾಮಾಜಿಕ ಸೇವಾ ಟ್ರಸ್ಟ್ ವತಿಯಿಂದ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಜರಗನಹಳ್ಳಿ ವಾರ್ಡ್ನನಲ್ಲಿ ಆಹಾರ ಕಿಟ್ ಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಸತೀಶ್ ರೆಡ್ಡಿರವರು ಮತ್ತು ದಶಮುಖ ಸಾಮಾಜಿಕ ಸೇವಾ ಟ್ರಸ್ಟ್ ಅಧ್ಯಕ್ಷ *ಬೊಮ್ಮೆಗೌಡ ಮತ್ತು ಮಾಜಿ ಬಿ.ಬಿ.ಎಂ.ಪಿ.ಸದಸ್ಯರಾದ ಶ್ರೀಮತಿ ಶೋಭಾ ಮುನಿರಾಮ್ ,ಸಮಾಜ ಸೇವಕ ಬೆಟ್ಟೆಗೌಡರು ಮತ್ತು ಬಿ.ಜೆ.ಪಿ.ಮುಖಂಡ ಎ.ಟಿ.ಲೋಕೇಶ್ ಮತ್ತು ಪದಾಧಿಕಾರಿಗಳಾದ ರವಿಶಂಕರ್ ,ಮಹದೇವ್ ಗೌಡ ,ಪ್ರಶಾಂತ್ ಗೌಡರವರು ಆಹಾರ ಕಿಟ್ ಗಳನ್ನು ವಿತರಿಸಿದರು.
ಇದೇ ಸಂದರ್ಭದಲ್ಲಿ ಶಾಸಕರಾದ ಸತೀಶ್ ರೆಡ್ಡಿರವರು ಮಾತನಾಡಿ ಕೊರೋನ ವೈರಸ್ ಸಾಂಕ್ರಮಿಕ ರೋಗ ಎರಡನೇ ಅಲೆಯಿಂದ ಲಕ್ಷಾಂತರ ಕುಟುಂಬಗಳು ಸಂಕಷ್ಟ ಎದುರಿಸುತ್ತಿದ್ದಾರೆ.
ಬಡವರ ಕಷ್ಟಕ್ಕೆ ನೆರವಾಗುವ ಮಾನವೀಯ ಗುಣ ಇದ್ದಾಗ ಕಷ್ಟಗಳು ನೀರಿನಂತೆ ಕರಗಿ ಹೋಗುತ್ತದೆ .ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕೊವಿಡ್ ಸೋಂಕಿತರಿಗೆ ಕೊವಿಡ್ ಕೇರ್ ಸೆಂಟರ್ ನಿರ್ಮಿಸಲಾಗಿದೆ ಮತ್ತು ಬಡವರಿಗೆ ಆಹಾರ ಕಿಟ್ ಗಳನ್ನು ವಿತರಿಸಲಾಗಿದೆ .
ನಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಹಲವಾರು ಸಮಾಜ ಸೇವಾ ಸಂಘಟನೆಗಳು ಮತ್ತು ಸಮಾಜ ಸೇವಕರು ಬಡವರ ಸಂಕಷ್ಟಕ್ಕೆ ಸಹಾಯಹಸ್ತ ನೀಡುತ್ತಿರುವುದು ಸಂತೋಷದಾಯಕ ವಿಷಯವಾಗಿದೆ .ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಮತ್ತು ಕೊವಿಡ್-19ಲಸಿಕೆ ಹಾಕಿಸಿಕೊಳ್ಳಿ ಇದ್ದರಿಂದ ಕೊವಿಡ್ ಬರದಂತೆ ರಕ್ಷಣೆ ಪಡೆಯಬಹುದು ಎಂದು ಹೇಳಿದರು.

0 Comments