ಮಧುಗಿರಿ ತಾಲೂಕಿನ ಪುರವರ ಹೋಬಳಿಯ ಗೊಂದಿಹಳ್ಳಿ ಪಂಚಾಯಿತಿಯ ಗೊಂದಿಹಳ್ಳಿ ಗ್ರಾಮದಲ್ಲಿ ವೈದ್ಯರ ನಡಿಗೆ ಹಳ್ಳಿಯ ಕಡೆಗೆ ಕಾರ್ಯಕ್ರಮ ನಡೆಯಿತು. ಗೊಂದಿಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಚಂದ್ರಕಲಾ, ತಂಡ ಜೊತೆಗೆ ಉಪತಹಸೀಲ್ದಾರ್ ಜಯಲಕ್ಷ್ಮಮ್ಮ ಗ್ರಾಮೀಣ ಅಭಿವೃದ್ಧಿ ಅಧಿಕಾರಿ ಗೋಪಾಲಕೃಷ್ಣ, ಕಂದಾಯ ಇಲಾಖೆಯ ಶ್ರೀಧರ್ ಸಕ್ರಿಯ ಕೋವಿಡ್ ಸೋಂಕಿತರ ಮನೆಗಳ ಬೇಟಿ ಮಾಡಿ ಅವರಿಗೆ ಆತ್ಮಸ್ಥೈರ್ಯ ಜೊತೆಗೆ ಪೌಷ್ಟಿಕ ಆಹಾರ ಸೇವನೆ ಕುರಿತು ಶಿಕ್ಷಣ ನೀಡಲಾಯಿತು. ಇತರರ ಮನೆಮನೆಗೂ ತೆರಳಿ ಕೋವಿಡ್ ಲಸಿಕೆಯನ್ನು ಪಡೆಯಲು ತಿಳಿಸಿ ಇತರರಿಗೆ ಲಸಿಕೆಯನ್ನು ಕೂಡ ಮಾಡಲಾಯಿತು.
ಮಾಸ್ಕ್ ದರಿಸುವುದು ಮತ್ತು ದೈಹಿಕ ಅಂತರ ಕಾಯ್ದುಕೊಂಡು ಜೀವನ ನಡೆಸಲು ಸಾರ್ವಜನಿಕರಿಗೆ ತಿಳಿಸಲಾಯಿತು. ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ , ಗಣೇಶ್, ಗೊಂದಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಮ್ಯಕೃಷ್ಣ ಎಂ.ಸಿ. ಗ್ರಾ.ಪಂ. ಬಿಲ್ ಕಲೆಕ್ಟರ್ ಶಿವಕುಮಾರ್, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಗ್ರಾ.ಪಂ ಸದಸ್ಯರಾದ ನರೇಂದ್ರ, ಚಂದ್ರ ಇತರೆ ಸದಸ್ಯರುಗಳು ಹಾಗೂ ಗ್ರಾ.ಪಂ.ಸಿಬ್ಬಂದಿ ಮತ್ತಿತರರಿದ್ದರು.



0 Comments