Ticker

6/recent/ticker-posts

Ad Code

Responsive Advertisement

IRCTC ಆನ್ ಲೈನ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯಲ್ಲಿ ಬದಲಾವಣೆ


 ಡಿಜಿಟಲ್ ಇಂಡಿಯಾ ಅಭಿಯಾನದ ಭಾಗವಾಗಿ 2019ರಲ್ಲಿ ಐಆರ್ ಸಿಟಿಸಿ-ಐಪೇ ಅನ್ನು ಕೇಂದ್ರ ಸರ್ಕಾರ ಪರಿಚಯಿಸಿದೆ. ಹೊಸ ವ್ಯವಸ್ಥೆಗಳು ಪ್ರಯಾಣಿಕರನ್ನು ರದ್ದುಗೊಳಿಸುವುದರ ಜೊತೆಗೆ ತತ್ಕಾಲ್ ಮತ್ತು ನಿಯಮಿತ ಟಿಕೆಟ್ ಗಳನ್ನು ತ್ವರಿತವಾಗಿ ಕಾಯ್ದಿರಿಸಲು ಅವಕಾಶ ನೀಡುತ್ತದೆ ಎಂದು ಐಆರ್ ಸಿಟಿಸಿ ಹೇಳಿದೆ.

ಆನ್ ಲೈನ್ ಟಿಕೆಟ್ ರದ್ದುಗೊಳಿಸುವುದು, ರೀಫಂಡ್ ವ್ಯವಸ್ಥೆಯಲ್ಲಿ IRCTC ಬದಲಾವಣೆ ಮಾಡಿದೆ. ಐಆರ್ ಸಿಟಿಸಿಗಳ ಪಾವತಿ ಗೇಟ್ ವೇ ಐಆರ್ ಸಿಟಿಸಿ-ipay ಮೂಲಕ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರು ತಮ್ಮ ಟಿಕೆಟ್ ರದ್ದುಗೊಳಿಸಿದ ತಕ್ಷಣ ತಮ್ಮ ಮರುಪಾವತಿಯನ್ನು ಪಡೆಯಲಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಎರಡು-ಮೂರು ದಿನಗಳವರೆಗೆ ರೀಫಂಡ್ ಗಾಗಿ ಪ್ರಯಾಣಿಕರು ಕಾಯಬೇಕಾಗಿದೆ. 

ಐಆರ್ ಸಿಟಿಸಿ-ಐಪೇ ಮೂಲಕ ಕಡಿಮೆ ಸಮಯದಲ್ಲಿ ಟಿಕೆಟ್ ಗಳನ್ನು ಕಾಯ್ದಿರಿಸಬಹುದಾಗಿದ್ದು, ಟಿಕೆಟ್ ಐಪೇ ಮೂಲಕ ಬುಕ್ ಮಾಡುವ ವಿಧಾನ ಇಲ್ಲಿದೆ;
1. ಐಆರ್ ಸಿಟಿಸಿ ಅಧಿಕೃತ ವೆಬ್ ತಾಣಕ್ಕೆ ಭೇಟಿ ಕೊಡಿ www.irctc.co.in
2. ಪ್ರಯಾಣಕ್ಕೆ ಸಂಬಂಧಿಸಿದ ವಿವರಗಳನ್ನು ದಾಖಲಿಸಿ
3. ಪ್ರಯಾಣಿಕರ ವಿವರ ನಮೂದಿಸಿ
4. ಪೇ ಹಾಗೂ ಬುಕ್ ಮಾಡಿ
5. ಕ್ರೆಡಿಟ್/ ಡೆಬಿಟ್/ ಪ್ರೀಪೇಯ್ಡ್ ಕಾರ್ಡ್/ಯುಪಿಐ ಬಳಸಿ ಹಣ ಪಾವತಿಸಿ
6. ಟಿಕೆಟ್ ಬುಕ್ ನಂತರ ಎಸ್ಎಂಎಸ್/ ಇಮೇಲ್ ಬರಲಿದೆ.


Post a Comment

0 Comments

Ad Code

Responsive Advertisement