ಅನ್‌ಲಾಕ್ ಆಗಿದೆಯೆಂದು ಸಾಮಾಜಿಕ ಅಂತರ ಮರೆದು ಬೇಕಾಬಿಟ್ಟಿ ಹೊರಗೆ ಓಡಾಡುವುದು, ನಿರ್ಲಕ್ಷ್ಯ ವಹಿಸುವುದು ಮಾಡಬೇಡಿ, ಕೊರೋನಾ ನಿಯಮ ಸಾಧ್ಯವಾದಷ್ಟು ಪಾಲಿಸಿಕೊಂಡು ದಿನನಿತ್ಯದ ವಹಿವಾಟು ನಡೆಸಿ. ಸಾಧ್ಯವಾದಷ್ಟು ಮನೆಯಲ್ಲೇ ಇರಿ, ಸುರಕ್ಷತಾ ಕ್ರಮಗಳನ್ನು ತಪ್ಪದೇ ಪಾಲಿಸಿ. ಹೊರಗೆ ಬರುವಾಗ ಮಾಸ್ಕ್ ಧರಿಸಿ, ಭೌತಿಕ ಅಂತರ ಕಾಯ್ದುಕೊಳ್ಳಿ, ಶುಚಿತ್ವ ಪಾಲಿಸಿ, ಸರದಿ ಬಂದಾಗ ಲಸಿಕೆ ಪಡೆದುಕೊಳ್ಳಿ, ಮುನ್ನೆಚ್ಚರಿಕೆ ವಹಿಸಿ, ನಿಯಮಗಳನ್ನು ಅನುಸರಿಸಿ, ಸರ್ಕಾರದೊಂದಿಗೆ ಸಹಕರಿಸಿ.
ಇಂದಿನಿಂದ ಕೊರೋನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ವಿಧಿಸಲಾಗಿದ್ದ ನಿರ್ಬಂಧಗಳನ್ನು ಜಿಲ್ಲಾವಾರು ಪರಿಸ್ಥಿತಿಗಳನ್ನು ಪರಿಗಣಿಸಿ ಸಡಿಲಿಸಲಾಗಿದೆ. ಸಾಮಾನ್ಯ ಜನಜೀವನಕ್ಕೆ ಅನುಕೂಲ ಕಲ್ಪಿಸಲು ಕೆಲವು ತೆಗೆದುಕೊಳ್ಳಲಾಗುತ್ತಿದೆ ಹೊರತು ಜನರು ನಿರ್ಲಕ್ಷ್ಯ ವಹಿಸಬೇಡಿ.

0 Comments