Ticker

6/recent/ticker-posts

Ad Code

Responsive Advertisement

ಕೊರೋನ ಮೂರನೆ ಅಲೆ ಭೀತಿಯ ಅವಶ್ಯವಿಲ್ಲ. Dr. M.R.Badarinath Phd (Astrology) Phd (Palmistry)

ಪ್ರತಿ ಗ್ರಹವು ರವಿ ಮತ್ತು ಚ0ದ್ರ ಹೊರತುಪಡಿಸಿ ವಕ್ರತ್ವ ಪಡೆಯುವುದು ಸಾದಾರಣ ವಿಷಯ.  ಗುರು ಗ್ರಹವು ಪ್ರಸ್ತುತ ಕುಂಭರಾಶಿಯಲ್ಲಿ ಸ್ಥಿತನಾಗಿರುವನು.

ಗುರು ಗ್ರಹದ ಸ್ವಕ್ಷೇತ್ರವು ಧನುಸ್ ಮತ್ತು ಮೀನರಾಶಿಯಾಗಿರುವುದು. ಗುರು ಗ್ರಹವನ್ನು ಅತಿ ಶುಭ ಗ್ರಹವೆಂದು, ಸಕಲ ಕಾರ್ಯಗಳಿಗೂ ಗುರುಬಲ  ವಿರಬೇಕೆಂಬುವುದು ಅನಾಧಿ ಕಾಲದಿಂದ ಬಂದಿರುವ ನಂಬಿಕೆ. ಪ್ರತಿ ಗ್ರಹಗಳೂ ನೇರವಾಗಿ ಸಂಚರಿಸುವುದು. ಕೆಲವೊಮ್ಮೆ ವಕ್ರತ್ವವನ್ನು ಪಡೆಯುವುದು ಸಾಧಾರಣ ವಿಷಯ. ಯಾವುದೇ ಗ್ರಹವು ವಕ್ರತ್ವಪಡೆದ ಕ್ಷಣದಿಂದ ತನ್ನ ನೈಜ ಗುಣವನ್ನು ಸ್ವಲ್ಪಮಟ್ಟಿಗೆ ಕಳೆದು ಕೊಳ್ಳುವುದು. ಅಂತಹ  ಗ್ರಹಗಳು ವಕ್ರತ್ವ ಪಡೆದಾಗ ಹೇಗೆ ಫಲ ನೀಡುವುದೆ0ಬುವುದನ್ನು ಪರಿಶೀಲಿಸೋಣ.

ಇದೀಗ  ಗುರುಗ್ರಹವು  20 ಜೂನ್ 2021ರಂದು  ವಕ್ರತ್ವ ಪಡೆದು ಕುಂಭ ರಾಶಿಯಲ್ಲಿ ಸೆಪ್ಟಂಬರ್ 14 1ರವರೆಗೆ  ಸಂಚರಿಸುವುದರಿAದ ಏನಾಗಬಹುದು ಎಂಬುದನ್ನು ತಿಳಿಯೋಣ. ಗ್ರಹಗಳ ಪ್ರಭಾವ ರಾಶಿ ಮೇಲೆ ಭೀರುವ ಪ್ರಭಾವಕ್ಕಿಂತ ಲಗ್ನದ ಮೇಲೆ ಭೀರುವ ಪ್ರಭಾವ ಹೆಚ್ಚು. ಈ ರೀತಿಯಲ್ಲಿ ವಕ್ರ ಗುರು 12 ಲಗ್ನಗಳ ಮೇಲೆ  ಹೇಗೆ ವರ್ತಿಸುವುದನ್ನು ತಿಳಿಸಲು ಇಚ್ಚಿಸುತ್ತೇನೆ,

ಮೊದಲನೆಯದು, ಮೇಷ ಲಗ್ನ. ಗುರುಗ್ರಹವು ಮೇಷ ಲಗ್ನಕ್ಕೆ 11ನೆ ರಾಶಿಯಾದ ಕುಂಭ ರಾಶಿಯಲ್ಲಿ ಸ್ಥಿತನಾಗಿ ವಕ್ರತ್ವ ಪಡೆದಿರುವನು. 11ನೆ ರಾಶಿ ಮೇಷಲಗ್ನದವರಿಗೆ  ಭಾದಕ ಸ್ಥಾನ ವಾಗಿರುವುದು. ಗುರು ವಕ್ರತ್ವದಿಂದ ಮೇಷ ಲಗ್ನದವರಿಗೆ ಲಾಭವನ್ನು ಸೂಚಿಸುವುದು. 9ನೆ ಧನಸ್ಸಿನ ಅಧಿಪತಿಯಾಗಿ (ಪಿತ್ರುಸ್ಥಾನ) ಏಕಾದಶದಲ್ಲಿರುವುದರಿಂದ ವ್ಯಕ್ತಿಗೆ ತನ್ನ ತಂದೆಯ ಕಡೆಯಿಂದ ಲಾಭವಾಗುವುದನ್ನು ಸೂಶಿಸುವನು. ವ್ಯಕ್ತಿಗೆ ಹಿರಿಯ  ಅಣ್ಣನಿಂದ ಅನುಕೂಲವಾಗುವುದು.

ದ್ವಿತೀಯ ಲಗ್ನ ವೃಷಭ:  ಈ ಲಗ್ನಕ್ಕೆ ಗುರುವು ಅಷ್ಟಮ  ಅಂದರೆ 8ನೆ ಮನೆಯ (ಧನುರ್ ) ಅಧಿಪತಿ ಹಾಗು 11 ನೆ (ಮೀನ) ಲಗ್ನಗಳಿಗೆ ಅಧಿಪತಿಯಾಗುವನು. ವ್ಯಕ್ತಿಗಳಿಗೆ ವೃತ್ತಿ ಕ್ಷೇತ್ರದಲ್ಲಿ ಸ್ವಲ್ಪ ಹಿನ್ನಡೆಯಾಗುವುದು. ಆದರೇ ಕೆಲಸ ಹೋಗುವುದಿಲ್ಲ.  ವೃಷಭ ಲಗ್ನಕ್ಕೆ 4ನೇ (ಸಿಂಹ)  ಮನೆಯನ್ನು ವಕ್ರ ಗುರು ವೀಕ್ಷಿಸುವುದರಿಂದ ತಾಯಿಗೆ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಕಾಣುವುದು. ಈ ಜಾತಕದವರಿಗೆ ಅಜೀರ್ಣ ಸಮಸ್ಯೆ ಉಂಟಾಗುವುದು.

ತೃತೀಯ ಲಗ್ನ ಮಿಥುನ: ಈ ಲಗ್ನಕ್ಕೆ 9ರಲ್ಲಿ ವಕ್ರಗುರು ಸಂಚರಿಸುವನು. ಮಿಥುನ ಲಗ್ನಕ್ಕೆ 7ರ (ಧನುರ್) ಅಧಿಪತಿ ಮತ್ತು 10ರ (ಮೀನ) ಅಧಿ ಪತಿಯು ಆಗಿರುವನು. ಮಿಥುನ ಲಗ್ನದವರಿಗೆ ಗುರು ಭಾದಕ ನಾಗಿರುವುದರಿಂದ , ವಕ್ರ ಗುರು ಲಗ್ನವನ್ನೆ ವೀಕ್ಷಿಸುವುದರಿಂದ ಸ್ವಲ್ಪ ಪತಿ/  ಪತ್ನಿಯರಲ್ಲಿ ಭಿನ್ನಾಭಿಪ್ರಾಯ ಉಂಟಾಗುವುದು. ವ್ಯಕ್ತಿಗೆ ಬಂಧು ವರ್ಗದಿಂದ ಯಾವರೀತಿಯಲ್ಲೂ ಅನುಕೂಲವಾಗವುದಿಲ್ಲ.  ಗುರು 10 ನೆ(ಮೀನ)  ಅಧಿಪತಿಯಾಗಿ ಅದು ವೃತ್ತಿ ಸ್ಥಾನವಾಗಿ, ಆ ಸ್ಥಾನಕ್ಕೆ ವ್ಯಯದಲ್ಲಿರುವುದರಿ0ದ, ವೃತ್ತಿಯಲ್ಲಿ  ತೊಂದರೆ ಕಂಡರೂ ಅನುಕೂಲವಾಗುವುದು.

ಚತುರ್ಥ ಲಗ್ನ ಕರ್ಕಾಟಕ: ಈ ಲಗ್ನಕ್ಕೆ ವಕ್ರ ಗುರು ಅಷ್ಟಮದಲ್ಲಿ 8 (ಕುಂಭ) ಸಂಚರಿಸುವನು.  ಲಗ್ನಕ್ಕೆ ಗುರು ಗ್ರಹವು   9  (ಮೀನ) (ಪಿತೃ) ಸ್ಥಾನಾಧಿಪತಿಯಾಗಿರುತ್ತಾನೆ. ವ್ಯಕ್ತಿಯ ತಂದೆಗೆ ಅರೋಗ್ಯದಲ್ಲಿ ತೊಂದರೆಯಿದ್ದರೂ ಅಷ್ಟಮದಲ್ಲಿರುವುದರಿಂದ, ತಂದೆಯ ಆಯುರ್ ವೃದ್ದಿಯಾಗುವುದು. ಆದರೆ ವ್ಯಕ್ತಿಗಳಿಗೆ ಹಣದ ಅಭಾವ ವಿರುವುದು. ತಂದೆಯ ಸೇವೆ ಮಾಡಲು ಪಿತ್ರಾರ್ಜಿತ ಆಸ್ತಿಯಾನ್ನು ಕಳೆದು ಕೊಳ್ಳುವನು. ವ್ಯಕ್ತಿಗೆ ಮಾನಸಿಕ ಚಿಂತೆಯಿಲ್ಲಿರುವುದು.

ಸಿAಹ ಲಗ್ನವು ಪಂಚಮ ಲಗ್ನವಾಗಿ, ವಕ್ರ ಗುರು 7ರಲ್ಲಿ(ಕುಂಭ)  ಸ್ಥಿತನಾಗಿರುವನು. 7 ಅಂದರೆ ಸಪ್ತಮ ಸ್ಥಾನ, ಕಳತ್ರ ಸ್ಥಾನ ಹಾಗು ವ್ಯಾಪಾರ ಭಾಗಸ್ವಾಮಿ ಕ್ಷೇತ್ರವಾಗಿರುವುದು. ಸಿಂಹಲಗ್ನಕ್ಕೆ ಗುರು ಪಂಚಮಾಧಿ ಪತಿ (ಯೋಗಕಾರಕ ಗ್ರಹ) ಹಾಗು 8ನೇ ಮನೆಯ(ಮೀನ)  ಗ್ರಹವಾಗಿ 7ರಲ್ಲಿ ಕುಂಭದಲ್ಲಿ  ವಕ್ರತ್ವ ಪಡೆದಿರುವುದರಿಂದ  ಕಳತ್ರದಿಂದ (ದಾಂಪತ್ಯ ಭಾಗಸ್ವಾಮಿಗಳು) ಭಾಗ್ಯ/ಅನುಕೂಲ ವಾಗುವುದು. ಆದರೆ ವ್ಯಾವಹಾರಿಕ (PARTNERSHIP)  ಭಾಗತ್ವದಲ್ಲಿ ತೊಂದರೆಯುAಟಾಗುವುದು. ಕಾರಣ ಶನಿಯು ಸಿಂಹಕ್ಕೆ 6ರಲ್ಲಿ (ಮಕರ), 7ಕ್ಕೆ(ಕುಂಭಕ್ಕೆ)  12ರಲ್ಲಿ ಸ್ಥಿತವಾಗಿರುವುದು ವ್ಯವಹಾರ/ವ್ಯಾಪಾರದಲ್ಲಿ ನಷ್ಟವುಂಟಾಗುವುದು.

ಕನ್ಯಾ ಲಗ್ನ 6ನೆ ಲಗ್ನವಾಗಿ ಆ ಲಗ್ನಕ್ಕೆ 4 (ಧನುರ್) ಮತ್ತು 7ನೆ(ಮೀನ)  ಗ್ರಹವಾದ ಗುರು, 6ರಲ್ಲಿ (ಕುಂಭ)  ಸ್ಥಿತನಾಗಿರುವುದರಿಂದ, ಕನ್ಯಾಲಗ್ನಕ್ಕೆ 2ನೆ (ತುಲ)  ಮನೆಮೇಲೆ ಗುರುನೋಟವಿರುವುದರಿಂದ, ಸಂಸಾರ ಜೀವನದಲ್ಲಿ  ತಾತ್ಕಾಲಿಕ ಅಡಚಣೆಯುಂಟಾಗುವುದು, ಆದರೆ ವೃತ್ತಿಯಲ್ಲಿ ಅಭಿವೃದ್ದಿ ಕಾಣುವುದು. ತಾಯಿಗೆ ಆರೋಗ್ಯದಲ್ಲಿ ಏರುಪೇರಾಗುವುದು. ಕೆಲವರಿಗೆ ಮಾತೃ ವಿಯೋಗ ಸಂಭವಿಸಬಹುದು.

ತುಲಾ ಲಗ್ನ 7 ನೆ ಲಗ್ನವಾಗಿ ಗುರು ಲಗ್ನಕ್ಕೆ 3 (ಧನುರ್)  ಮತ್ತು 6ನೆ(ಮೀನ)  ಅಧಿಪತಿಯಾಗಿರುವನು. ಅಂತಹ ಗುರು ವಕ್ರತ್ವ ಪಡೆದು ಪಂಚಮದಲ್ಲಿ (ಕುಂಭ) ಸ್ತಿತನಾಗಿರುವನು. ಗುರು ಸಂತಾನಕಾರಕನಾಗಿ, ಸಂತಾನ ಕ್ಷೇತ್ರದಲ್ಲಿ ಸ್ಥಿತನಾಗಿರುವುದರಿಂದ, ವ್ಯಕ್ತಿಗೆ ತನ್ನ ಸಂತಾನದಿAದಲೆ ಸುಖ ಕಾಣಲಾರದ ಪರಿಸ್ಥಿತಿಯುಂಟಾಗಬಹುದು. 6ನೆ(ಮೀನ)  ಅಧಿಪತಿಗುರು 5ರಲ್ಲಿ (ಕುಂಭ) ವಕ್ರನಾಗಿರುವುದರಿಂದ ಕಿರಿಯ ಭ್ರಾತ್ರುವಿಗೆ  ಅರೋಗ್ಯದಲ್ಲಿ ಮುಖ್ಯವಾಗಿ  ಹೃದಯ ತೊಂದರೆ  ಕಾಣುವುದು. ಜೀವಕ್ಕೆ ಭಯವಿಲ್ಲ.  ಜಾತಕನಿಗೆ ಪಾದಗಳಲ್ಲಿ ವಾಹನದಿಂದ ಗಾಯವುಂಟಾಗುವುದು..

8ನೆ ಲಗ್ನ ವೃಶ್ಚಿಕಕ್ಕೆ ಗುರು 5ನೆ (ಮೀನ) ಮತ್ತು 2ರ(ಧನುರ್) ಅಧಿಪತಿಯಾಗಿ 4ರಲ್ಲಿ ವಕ್ರವಾಗಿರುವುದರಿಂದ, ಕುಟುಂಬದಿAದ,  ಗೃಹ ಮತ್ತು ವಾಹನದಿಂದ ಅನುಕೂಲ ಪರಿಸ್ಥಿತಿ ವುಂಟಾದರೂ, ಕಾರಣಾಂತರದಿAದ ಮಕ್ಕಳು ದೂರ ಸರಿಯುವರು. ಮಕ್ಕಳಿಗಾಗಿ ತಾನು ಕಟ್ಟಿರುವ ಗೃಹ ಕಳೆದುಕೊಳ್ಳುವ ಸಂಭವವುAಟಾಗುವುದು.

9ನೆ ಲಗ್ನ ಧನುರ್ ಲಗ್ನವಾಗಿ  ಲಗ್ನಾಧಿಪತಿಯಾಗಿ ಹಾಗು 4ರ(ಮೀನ)  ಅಧಿಪತಿಯಾದ ಗುರುವು ಲಗ್ನಕ್ಕೆ 3 (ಕುಂಭ) ದಲ್ಲಿ      ವಕ್ರತ್ವ ಪಡೆದು ಸ್ಥಿತನಾಗಿರುವುದರಿಂದ, ಗೃಹದಿ0ದ ಬರುವ ಆದಾಯ ನಿಲುಗಡೆ ಯಾಗುವುದು. ಧನುರ್ ಲಗ್ನಾಧಿಪತಿಯಾಗಿ    3ರಲ್ಲಿರುವುದರಿಂದ (ಕುಂಭ)  ತನ್ನ 5ನೆ ದೃಷ್ಟಿ 7ರ ಮೇಲೆ(ಮಿಥುನ) ಇರುವುದರಿ0ದ ಅದು ಪತಿ/ಪತ್ನಿಸ್ಥಾನವಾದುದರಿಂದ  ಪತಿ/ಪತ್ನಿಯರಿಂದ ಅನುಕೂಲವಾಗುವುದು, 9ನೆ ದೃಷ್ಟಿ 11ರಮೇಲೆ ( ತುಲ) ಇರುವುದರಿಂದ, ಇತರರಿಗೆ ನೀಡಿರುವ ಹಣ ಮರು ಪಾವತಿ ಯಾಗುವುದು.

ದಶಮ ಲಗ್ನಾಧಿಪತಿ ಶನಿ ತನ್ನ ಸ್ವ ಕ್ಷೇತ್ರದಲ್ಲೆ(ಮಕರ) ಸ್ಥಿತನಾಗಿರುವರು. 12 (ಧನುರ್) ಮತ್ತು 3ರ (ಮೀನ) ಅಧಿಪತಿಯಾದ ಗುರು ಮಕರಕ್ಕೆ ದ್ವಿತೀಯ ಕುಂಭ ದಲ್ಲಿರುವುದರಿ0ದ, ಒಡಹುಟ್ಟಿರುವರಿಂದ ಅರ್ಥಿಕ ಸಹಾಯವಾಗಬಹುದು, ಆದರೇ ತಮ್ಮ ಅಥವಾ ತಂಗಿಗೆ  ಅರೋಗ್ಯದಲ್ಲಿ (ಶ್ವಾಶಕೋಶ) ಸಮಸ್ಯೆ ಉಂಟಾದರೂ, ಆರೋಗ್ಯದಲ್ಲಿ ಸುಧಾರಣೆ ಕಾಣುವುದು.

11ರ (ಕುಂಭ) ಅಧಿಪತಿಯು ಶನಿಯಾಗಿ 10ರಲ್ಲಿ ಮಕರದಲ್ಲಿ  ಸ್ಥಿತನಾಗಿರುವನು. ವಕ್ರ ಗುರು 12 ಧನುರ್  ಮತ್ತು 3ರ ಅಧಿಪತಿಯಾಗಿ 2 ರಲ್ಲಿ ಸ್ಥಿತನಾಗಿರುವುದರಿಂದ ತಾನು ಕಳಿಸಿದ ಹಣವನ್ನು ಉತ್ತಮ ರೀತಿಯಿಂದ ಉಪಯೋಗಿಸಲು ಮುಂದಾಗುವನು. ವ್ಯಕ್ತಿಗೆ ಹಣ ಬಾಧೆ ಕಾಣುವುದಿಲ್ಲ. ಅಂದರೆ ಲಾಭದಲ್ಲಿ ನಷ್ಟ.

12ನೆ ಮೀನ  ಅಧಿಪತಿ ಹಾಗು 10ರ ಧನುರ್ ನಾಯಕ ಗುರು ಕುಂಭದಲ್ಲಿ ವಕ್ರನಾಗಿರುವುದರಿಂದ, ಅಣ್ಣನ ಸಹಾಯ ಉತ್ತಮ ವಾಗಿರುವುದು. ಹೃದಯ ಸಂಬ0ಧಿ ರೋಗವಿದ್ದರೂ, ರೋಗದಿಂದ ಹೊರ ಬರುವರು. ತನ್ನ ಮಾತಿನ  ಚಾತುರ್ಯದಿಂದ ಕಾರ್ಯ ಕ್ಷೇತ್ರದಲ್ಲಿ ಅನುಕೂಲವಾಗುವುದು.

ಸೂಚನೆ: ಇದು ಕೊರೋನ ಕಾಲವಾಗಿರುವುದರಿ0ದ ವಕ್ರ ಗುರುವಿಕೆ ಶುಕ್ತನ ಕ್ಷೇತ್ರದಲ್ಲಿ ಸ್ಥಿತನಾದ ಬುಧಗ್ರಹವನ್ನು ಕೇಂದ್ರ ದೃಷ್ತಿಯಿ0ದ ವೀಕ್ಷಿತನಾಗಿರುವುದರಿಂದ, ಶುಕ್ರ, ಬುಧ, ಗುರು(ವ) 14 ಸೆಪ್ಟೆಂಬರ್ ಒಳಗೆ ನೂತನ ಆಯುರ್ವೇದ ಔಷದಿ ಬರುವುದು. ಆದುದರಿಂದ ಕೊರೋನ ಮೂರನೆ ಅಲೆಯ ಭೀತಿಯ  ಅವಶ್ಯವಿಲ್ಲ.

|| ಸರ್ವೇಜನಾ ಸುಖಿನೋ ಭವಂತು. ||

Analysis by 

Dr. M.R.Badarinath 

Phd (Astrology) Phd (Palmistry)


SREE RAMANUJA GURUKULA

No.35, 3rd Cross Dwarakanagar Bsk 3rd Stage, Bangalore 560085 .
Cell 9480261881

Post a Comment

0 Comments

Ad Code

Responsive Advertisement