ಬಹು ಶಿಸ್ತಿನಿಂದ ಕೂಡಿರುವ ಹೊಸ ಶಿಕ್ಷಣ ನೀತಿ 2020ಯನ್ನು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಎಲ್ಲರಿಗಿಂತ ಮುಂಚೆಯೇ ಸ್ವಾಗತಿಸಿದ್ದಲ್ಲದೆ ಅದರ ಕುರಿತು ಸ್ಟಡಿ ಸರ್ಕಲ್, ವಿಚಾರ ಸಂಕಿರಗಳನ್ನು, ವಿಶೇಷ ಉಪನ್ಯಾಸಗಳನ್ನು ರಾಜ್ಯದುದ್ದಕ್ಕೂ ಹಮ್ಮಿಕೊಂಡು ಬೆಂಬಲಿಸಿದೆ. ಹೊಸ ಶಿಕ್ಷಣ ನೀತಿ 2020ನ್ನು ರಾಜ್ಯ ಸರ್ಕಾರ ಅನುಷ್ಟಾನಕ್ಕೆ ತರುವುದನ್ನು ವಿದ್ಯಾರ್ಥಿ ಪರಿಷತ್ ಸ್ವಾಗತಿಸುತ್ತದೆ. ಆದರೆ ಯಾವುದೇ ಸರಿಯಾದ ಪೂರ್ವ ಸಿದ್ಧತೆ ಮಾಡಿಕೊಳ್ಳದೆ ಈ ಹೊತ್ತಿನಲ್ಲಿ ಅನುμÁ್ಠನಕ್ಕೆ ತರುವುದಕ್ಕೆ ಮುಂದಾಗಿರುವುದನ್ನು ಎಬಿವಿಪಿ ತೀವ್ರವಾಗಿ ಖಂಡಿಸುತ್ತದೆ.
ಸ್ವತಂತ್ರ ಬಂದು ಎಪ್ಪತ್ತು ವರ್ಷಗಳ ನಂತರ ವರ್ತಮಾನ ಕಾಲಾನುಗುಣಕ್ಕಾಗಿ ಸತ್ವಯುಕ್ತವಾದ ಉತ್ತಮ ಶಿಕ್ಷಣ ನೀತಿಯೊಂದು ರಚನೆಗೊಂಡಿರುವುದು ಹೆಮ್ಮೆಯ ವಿಚಾರ! ಕಳೆದ ಒಂದುವರೆ ವರ್ಷದಿಂದ ತರಗತಿಗಳಿಲ್ಲದ, ತಾಂತ್ರಿಕ ಹಾಗೂ ಮೂಲಭೂತ ಸೌಲಭ್ಯಗಳಿಲ್ಲದ ಈ ಹೊತ್ತಿನಲ್ಲಿ ಅದನ್ನು ಜಾರಿಗೆ ತಂದರೆ ವ್ಯತಿರಿಕ್ತ ಪರಿಣಾಮ ಆಗುವುದಂತೂ ಸಹಜ. ಸರ್ಕಾರ ಈ ಸಮಯದಲ್ಲಿ ದಿಡೀರನೆ ಅನುಷ್ಟಾನಕ್ಕೆ ತರುವುದು ಅದರ ಯಶಸ್ಸಿನ ದೃಷ್ಠಿಯಿಂದ ಸೂಕ್ತವಲ್ಲ. ಅದನ್ನು ಆತುರದಲ್ಲಿ ಜಾರಿಗೆ ತಂದು ಮತ್ತಷ್ಟು ವಿದ್ಯಾರ್ಥಿಗಳ ಭವಿಷ್ಯವನ್ನು ಗೊಂದಲಕ್ಕೋಳಪಡಿಸಿ ಶಿಕ್ಷಣ ನೀತಿಯನ್ನು ವೈಫಲ್ಯಗೊಳಿಸಬಾರದೆಂಬುದು ಎಬಿವಿಪಿ ನಿಲುವು.
ಉಪಮುಖ್ಯಮಂತ್ರಿ ಅಶ್ವತ್ ನಾರಾಯಣ್‍ರವರು ವಿಶ್ವವಿದ್ಯಾಲಯಗಳ ಕುಲಪತಿಗಳ ಜೊತೆಗೆ ಹೊಸ ಶಿಕ್ಷಣ ನೀತಿಯ ಕುರಿತು ವರ್ಚುವಲ್ ಸಭೆ ಮಾಡಿದ್ದಾರೆ. ಜೂನ್ 15ಕ್ಕೆ ಸಭೆ ಮಾಡಿ ಜುಲೈ ಹದಿನೈದಕ್ಕೆ ಪಠ್ಯಪುಸ್ತಕ ರಚನಾ ಸಮಿತಿ ರಚಿಸಲು ವರದಿ ನೀಡುವಂತೆ ತಿಳಿಸಿದ್ದಾರೆ. ಇಷ್ಟು ಕಡಿಮೆ ಅವಧಿಯಲ್ಲಿ, ಅದು ಕೋವಿಡ್ 19ರ ಸಂದರ್ಭದಲ್ಲಿ, ಎಲ್ಲರಿಗೂ ಮಂಕು ಕವಿದ ಹೊತ್ತಿನಲ್ಲಿ ಈ ರೀತಿ ನಿರ್ಧಾರ ತೆಗೆದುಕೊಳ್ಳುವುದು ಎಷ್ಟು ಸರಿ? ಬರುವ ಅಕ್ಟೋಬರ್ ತಿಂಗಳಿಂದ 2021-22 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಹೊಸ ಶಿಕ್ಷಣ ನೀತಿ ಅಳವಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ. ಆದರೆ ಹೊಸ ಶಿಕ್ಷಣ ನೀತಿಗೆ ಬೇಕಾದ ಯಾವ ಸಿದ್ಧತೆಯು ಇದ್ದಂತಿಲ್ಲ. ಬಹುಮುಖ್ಯವಾಗಿ ಹೊಸ ಶಿಕ್ಷಣ ನೀತಿಯ ವಿಶೇಷತೆಗಳ ಬಗ್ಗೆ ವಿದ್ಯಾರ್ಥಿ – ಅಧ್ಯಾಪಕರಲ್ಲಿ ಜಾಗೃತಿ, ಉತ್ತಮ ಗುಣಮಟ್ಟದ ಪಠ್ಯಪುಸ್ತಕಗಳ ರಚನೆ, ವಿದ್ಯಾರ್ಥಿಗಳ ಪಠ್ಯಕ್ರಮದ ಬಗ್ಗೆ ವಿಶೇಷ ಕಾಳಜಿ, ಬೋಧಿಸುವ ಅಧ್ಯಾಪಕರ ತರಬೇತಿಗೆ ಒತ್ತು, ಪರೀಕ್ಷಾ ವಿಧಾನಗಳಲ್ಲಿ ಬಹುಮುಖ್ಯ ಮಾರ್ಪಾಡು ಇತ್ಯಾದಿಗಳನ್ನು ಮಾಡಬೇಕು. ಆದರೆ ಇದು ಯಾವುದ್ನು ಮಾಡದೆ ಸರ್ಕಾರ ಅನುಷ್ಟಾನಕ್ಕೆ ಮುಂದಾಗಿದೆ. ಹೊಸದಾದ ಪಠ್ಯಕ್ರಮವಿಲ್ಲದೆ ಹೊಸ ಶಿಕ್ಷಣ ನೀತಿ ಪದ್ಧತಿ ಬಗ್ಗೆ ಅಧ್ಯಾಪಕರಿಗೆ ತರಬೇತಿ ಇಲ್ಲದೆ, ಅಠ್ಯ ಪುಸ್ತಕಗಳಿಲ್ಲದೆ ಯಾವ ರೀತಿಯ ತರಗತಿಯನ್ನು ಮಾಡಬಹುದು? ಇದೀಗ ಈ ಸರ್ಕಾರ ಓಇPಯನ್ನು “ನಾವೇ ಮೊದಲು ಜಾರಿಗೆ ತರುದ್ದೇವೆ” ಎನ್ನುವ ಒಣ ಪ್ರತಿಷ್ಟಗೆ ಒಳಗಾದಂತೆ ಕಾಣುತ್ತಿದೆ! ಸರ್ಕಾರ ಇಂತಹ ಆತುರದ ನಿರ್ಧಾರದಿಂದ ತಕ್ಷಣ ಹಿಂದೆ ಸರಿಯಬೇಕು.
ಸ್ವಾತಂತ್ರ್ಯ ಬಂದ ಎಪ್ಪತ್ತು ವರ್ಷಗಳ ನಂತರ ಉತ್ಕಷ್ಟ ರೀತಿಯಲ್ಲಿ ಶಿಕ್ಷಣ ನೀತಿಯೊಂದನ್ನು ರಚಿಸಲಾಗಿದೆ. ಈಗ ಅದನ್ನು ಪೂರ್ವನಿಯೋಜಿತ ಯೋಜನೆಗಳಿಲ್ಲದೆ ಜಾರಿಗೆ ತಂದರೆ ಅದರ ವೈಫಲ್ಯಕ್ಕೆ ಸರ್ಕಾರವೇ ಕಾರಣವಾದಂತಾಗುತ್ತದೆ. ಜೊತೆಗೆ ಶಿಕ್ಷಣದ ಪವಿತ್ರತೆಯು ಹಾಳಾಗುತ್ತದೆ. ಓಇPಯ ಅನುಷ್ಟಾನವನ್ನು ಕಾಟಾಚಾರಕ್ಕಾಗಿಮಾಡುತ್ತಿರುವಂತೆ ಗೋಚರಿಸುವ ತರ್ಕಬದ್ಧವಿಲ್ಲದ ಈ ನಿರ್ಧಾರವನ್ನು ಸರ್ಕಾರ ಕೈಬಿಡಬೇಕೆಂದು ವಿದ್ಯಾರ್ಥಿ ಪರಿಷತ್ ಆಗ್ರಹಿಸುತ್ತದೆ.
ಬೇಡಿಕೆಗಳು
1) NEP ಯ ಆಶಯಕ್ಕನುಗುಣವಾದ ಉತ್ತಮ ರೀತಿಯ ಪಠ್ಯಕ್ರಮ ರಚನೆಯಾಗಬೇಕು, ರಚನೆಯ ನಂತರ ಅಧ್ಯಾಪಕರ - ಪರಿಣಿತರ ಅಭಿಪ್ರಾಯ ಸಂಗ್ರಹಿಸಬೇಕು.
2) ಉತ್ತಮ ಗುಣಮಟ್ಟದ ಪಠ್ಯಪುಸ್ತಕಗಳು ಯೋಗ್ಯ ವ್ಯಕ್ತಿಗಳಿಂದ ರಚಿತವಾಗಬೇಕು.
3) ಹೊಸ ಶಿಕ್ಷಣ ನೀತಿಗೆ ಅನುಸಾರವಾಗಿ ಅಧ್ಯಾಪಕರಿಗೆ ತರಬೇತಿ ನೀಡಬೇಕು ಹಾಗೂ ಸೂಕ್ತ ಕಾರ್ಯಗಾರಗಳನ್ನು ಮಾಡಬೇಕು.
4) ಸಮಾಜದ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಕಲಿಕೆಯ ಸಮಾನ ಅವಕಾಶ ಸೌಲಭ್ಯ ಕಲ್ಪಿಸಬೇಕು.
5) ಆತುರದ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಬೇಕು.
6) ಪರೀಕ್ಷಾ ವಿಧಾನಗಳಲ್ಲಿ ಸೂಕ್ತ ಮಾರ್ಪಾಡು ಮಾಡಬೇಕು.
7) ಕನ್ನಡ ಅಧ್ಯಯನಕ್ಕೆ ಈ ಹಿಂದಿನಂತೆ 2 ವರ್ಷಗಳ ಅವಕಾಶ ಕಲ್ಪಿಸಬೇಕು.
8) ಕನ್ನಡ ಮಾಧ್ಯಮಗಳಲ್ಲಿ ಬೋಧನೆ-ವ್ಯಾಸಾಂಗ ಮಾಡುವವರ ದೃಷ್ಠಿಯಿಂದ ಕಲಿಕೆಯ ಎಲ್ಲಾ ಅಧ್ಯಯನ ಶಾಸ್ತ್ರಗಳಲ್ಲಿ ಸರಿಯಾದ ಪದಕೋಶ, ವಿಶ್ವಕೋಶ ಹಾಗೂ ಪರಾಮರ್ಶನ ಗ್ರಂಥಗಳ ರಚನೆಗೆ ತಕ್ಷಣದಲ್ಲಿ ಅರ್ಹ ವ್ಯಕ್ತಿಗಳ ಮುಂದಾಶತ್ವದಲ್ಲಿ ಕಾರ್ಯಾರಂಭ ಮಾಡಬೇಕು.
9) NEP ಕುರಿತಂತೆ ಅದರ ವಿಶೇಷತೆಗಳ ಬಗ್ಗೆ ಮನವರಿಕೆ ಮಾಡಿಸುವ ದೃಷ್ಠಿಯಿಂದ ಇಂಗ್ಲೀಷ್ï ಹಾಗೂ ಕನ್ನಡ ಭಾಷಳಲ್ಲಿ ಕೈಪಿಡಿಗಳನ್ನು ತಕ್ಷಣ ಹೊರತರಬೇಕು.ಎಂದು ಅಭಾವಿಪ ಕರ್ನಾಟಕ ರಾಜ್ಯ ಕಾರ್ಯದರ್ಶಿಗಳು ಪತ್ರಿಕಾಹೇಳಿಕೆಯಲ್ಲಿ ತಿಳಿಸಿರುತ್ತಾರೆ.
0 Comments