Ticker

6/recent/ticker-posts

Ad Code

Responsive Advertisement

ಕ್ರಿಭಾ ಫೌಂಡೇಶನ್ ಸಹಯೋಗದೊಂದಿಗೆ ನಾದ ವರ್ಲ್ಡ್ ವೆಲ್ಫೇರ್ ಟ್ರಸ್ಟ್, ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಮೆಗಾಸಿಟಿ ಹಾಗೂ ವಿವೇಕ ಚೇತನ ಚಾರಿಟೆಬಲ್ ಟ್ರಸ್ಟ್ ವತಿಯಿಂದ ದಿನಸಿ ಕಿಟ್

 ಕೆಂಪೇಗೌಡ ದಿನಾಚರಣೆ ಅಂಗವಾಗಿ ಕ್ರಿಭಾ ಫೌಂಡೇಶನ್ ಸಹಯೋಗದೊಂದಿಗೆ ನಾದ ವರ್ಲ್ಡ್ ವೆಲ್ಫೇರ್ ಟ್ರಸ್ಟ್, ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಮೆಗಾಸಿಟಿ ಹಾಗೂ ವಿವೇಕ ಚೇತನ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಕೊರೋನಾ ಎರಡನೇ ಅಲೆಯ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೊಳಗಾಗಿರುವ 60ಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ದಿನಸಿ ಸಾಮಗ್ರಿ ಕಿಟ್ ಗಳನ್ನು ನೀಡಲಾಯಿತು.

ಈ ವೇಳೆ ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಮೆಗಾಸಿಟಿಯ ಕಾರ್ಯದರ್ಶಿಗಳಾದ ಲಯನ್ ಕೆ. ಕೃಷ್ಣಮೂರ್ತಿ ಮಾತನಾಡಿ ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೊಳಗಾಗಿರುವ ಬಡ ಕುಟುಂಬಗಳಿಗೆ ಸತತವಾಗಿ 4 ವಾರಗಳಿಂದ ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಮೆಗಾಸಿಟಿ ಸಹಯೋಗದೊಂದಿಗೆ ನಾದ ವರ್ಲ್ಡ್ ವೆಲ್ಫೇರ್ ಟ್ರಸ್ಟ್ ಮುಖ್ಯಸ್ಥರಾದ ಪ್ರಶಾಂತ್ ರಾಯಬಾಗಿ, ರಾಜೀವ್ ತಂಡದವರಿಂದ 400ಕ್ಕೂ ಹೆಚ್ಚು ದಿನಸಿ ಸಾಮಗ್ರಿ ಕಿಟ್ ಗಳನ್ನು ವಿತರಿಸಲಾಗಿದೆ. ವಿಶೇಷವಾಗಿ ಈ ದಿನ ಕೆಂಪೇಗೌಡ ಜಯಂತಿಯ ಅಂಗವಾಗಿ ಬಡ ಕುಟುಂಬಗಳಿಗೆ ದಿನಸಿ ಸಾಮಗ್ರಿ ಕಿಟ್ ಗಳನ್ನು ವಿತರಿಸಲಾಯಿತು. ಮುಂಬರುವ ದಿನಗಳಲ್ಲಿ ನಿರಾಶ್ರಿತ ಬಡ ಕುಟುಂಬಗಳಿಗೆ ಹೆಚ್ಚಿನ ಸಹಾಯ ಮಾಡಲಾಗುವುದು ಎಂದು ಹೇಳಿದರು.


ಕ್ರಿಭಾ ಫೌಂಡೇಶನ್ ಮುಖ್ಯಸ್ಥರಾದ ಶಮಂತ್ ಕೃಷ್ಣಮೂರ್ತಿ ಮಾತನಾಡಿ ಸಮಾಜಮುಖಿ ಕಾರ್ಯ ನಿರ್ವಹಿಸಬೇಕೆಂಬ ಉದ್ದೇಶದಿಂದ ಸ್ಥಾಪಿತಗೊಂಡ ಕ್ರಿಭಾ ಫೌಂಡೇಶನ್ ನೃತ್ಯ ಸಂಗೀತ ಕಲೆ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಬಡ ವಿದ್ಯಾರ್ಥಿಗಳಿಗೆ, ಬಡ ಕಲಾವಿದರಿಗೆ, ಬಡ ರೋಗಿಗಳಿಗೆ, ಕೂಲಿ ಕಾರ್ಮಿಕರು ಸೇರಿದಂತೆ ಹಲವು ಬಡ ಕುಟುಂಬಗಳಿಗೆ ಸಹಾಯ ಮಾಡುವ ಗುರಿ ಹೊಂದಿದೆ. ಪ್ರವಾಹ, ಸಾಂಕ್ರಮಿಕ ರೋಗ ಸೇರಿದಂತೆ ಹಲವು ಸಂಕಷ್ಟದ ಸಮಯದಲ್ಲಿ ನಿರಾಶ್ರಿತರಿಗೆ ಸ್ಪಂದಿಸಿ ನೆರವಾಗುವಂತೆ ಆಶ್ರಯ ನೀಡುವ ನಿಟ್ಟಿನಲ್ಲಿ ಕ್ರಿಭಾ ಫೌಂಡೇಷನ್ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.

ನಂತರ ಪ್ರಶಾಂತ್ ರಾಯಬಾಗಿ ಮಾತನಾಡಿ 6ವರ್ಷದ ಹಿಂದೆ ಪ್ರಾರಂಭವಾದ ನಾದ ವರ್ಲ್ಡ್ ವೆಲ್ಪೇರ್ ಟ್ರಸ್ಟ್  ಸಂಗೀತ ಕಾರ್ಯಕ್ರಮ ಹಾಗೂ ಉಚಿತ ನೇತ್ರ ತಪಾಸಣಾ ಶಿಬಿರ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ಈ ಕಾರ್ಯಕ್ರಮಗಳಿಗೆ ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಮೆಗಾಸಿಟಿಯ ಕಾರ್ಯದರ್ಶಿಗಳಾದ ಕೆ. ಕೃಷ್ಣಮೂರ್ತಿ ರವರು 4 ವರ್ಷಗಳಿಂದ ಪ್ರಾಯೋಜಕರಾಗಿ ಸಹಕಾರ ನೀಡುತ್ತಿದ್ದಾರೆ. ಅದೇ ರೀತಿ ಟ್ರಸ್ಟ್ ನ ವತಿಯಿಂದ ಕೊರೋನಾ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೊಳಗಾಗಿರುವ ಬಡ ಕುಟುಂಬಗಳಿಗೆ ದಿನಸಿ ಸಾಮಗ್ರಿ ಕಿಟ್ ಗಳನ್ನು ನೀಡಲು ಪ್ರಾಯೋಜಕರಾಗಿ ಸಹಕರಿಸಿದ್ದಾರೆ  ಜುಲೈ 1ರಂದು ಲಯನ್ಸ್ ಕ್ಲಬ್ ಆಫ್ ಮೆಗಾಸಿಟಿ ಅಧ್ಯಕ್ಷರಾಗಿ ಪದಗ್ರಹಣ ಮಾಡುತ್ತಿರುವ ಅವರಿಗೆ ಶುಭಾಶಯಗಳು. ಮುಂಬರುವ ದಿನಗಳಲ್ಲಿ ಕೆ ಕೃಷ್ಣಮೂರ್ತಿ ರವರ ಅಧ್ಯಕ್ಷತೆಯ ಜೊತೆಯಲ್ಲಿ ನಾದ ವರ್ಲ್ಡ್ ವೆಲ್ಫೇರ್ ಟ್ರಸ್ಟ್ ಉಚಿತ ನೇತ್ರ ತಪಾಸಣಾ ಶಿಬಿರ ಸೇರಿದಂತೆ ಹಲವು ಸಮಾಜಮುಖಿ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.

ಬಳಿಕ ವಿವೇಕ ಚೇತನ ಚಾರಿಟೆಬಲ್ ಟ್ರಸ್ಟ್ ನ ಅಧ್ಯಕ್ಷರಾದ ರವಿದಾಸ್ ಮಾತನಾಡಿ ಇಂದಿನ ದಿನ ಪವಿತ್ರವಾದ ದಿನ 512ನೇ ಕೆಂಪೇಗೌಡರ ಜನ್ಮದಿನಾಚರಣೆ ಅಂಗವಾಗಿ ಪ್ರಶಾಂತ್ ರಾಯಬಾಗಿ ಹಾಗೂ ತಂಡದವರಿಂದ ಬಡ ಕುಟುಂಬಗಳಿಗೆ ಉಚಿತವಾಗಿ ದಿನಸಿ ಸಾಮಗ್ರಿ ಕಿಟ್ ನೀಡುತ್ತಿದ್ದು ಇದಕ್ಕೆ ರೂವಾರಿಗಳಾಗಿ ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಮೆಗಾಸಿಟಿಯ ಬಾವಿ ಅಧ್ಯಕ್ಷರಾದ ಕೆ. ಕೃಷ್ಣಮೂರ್ತಿ ಹಾಗೂ ಅವರ ಶ್ರೀಮತಿ ಭಾರತಿ ಕೈಜೋಡಿಸಿರುವುದು ನಿಜಕ್ಕೂ ಸಂತೋಷದ ವಿಷಯ ಕೃಷ್ಣಮೂರ್ತಿರವರು ಸದಾ ಸಮಾಜಮುಖಿ ಚಿಂತನೆಯ ಮನಸ್ಥಿತಿ ಹೊಂದಿದ್ದು ನಿರಾಶ್ರಿತರಿಗೆ ಆಶ್ರಿತರಾಗಿ ಬಡವರಿಗೆ ಸಹಾಯ ಮಾಡುವ ಗುಣ ಹೊಂದಿರುವ ಇವರಿಗೆ ಇನ್ನೂ ಹೆಚ್ಚು ಸಹಾಯ ಮಾಡುವ ಶಕ್ತಿ ನೀಡಲಿ ಎಂದು ಆ ದೇವರಲ್ಲಿ ಕೋರುತ್ತೇನೆ ಎಂದು ಹೇಳಿದರು.

Post a Comment

0 Comments

Ad Code

Responsive Advertisement