ಬೆಂಗಳೂರು:- ಅಂತರ್ರಾಷ್ಟ್ರೀಯ ಲಯನ್ಸ್ ಸಂಸ್ಥೆ ಜಿಲ್ಲೆ 317f ನಿಂದ ರಿಲಿವಿಂಗ್ ಹಂಗರ್ (ಹಸಿದವರಿಗೆ ಊಟ ನೀಡುವುದು) ಕಾರ್ಯಕ್ರಮ ಒಂದು ವಾರ ಕಾಲ ಹೆಬ್ಬಾಳದ ಬಸ್ ನಿಲ್ದಾಣದಲ್ಲಿ ಏರ್ಪಡಿಸಲಾಗಿದೆ.
ಲಯನ್ ಜಿಲ್ಲಾ 317f ರಾಜ್ಯಪಾಲರಾಗಿ ಆಯ್ಕೆಯಾದ ದೀಪಕ್ ಸುಮನ್ ರವರು 2020 ಜುಲೈ 1ರಿಂದ ಈ ಕಾರ್ಯಕ್ರಮವನ್ನು ಇಲ್ಲಿಯವರೆಗೆ ನಿರಂತರವಾಗಿ ನಡೆಸಿಕೊಂಡು ಬಂದಿರುತ್ತಾರೆ.
ಜಿಲ್ಲಾ ಕಾರ್ಯಕ್ರಮವಾದ ರಿಲಿವಿಂಗ್ ಹಂಗರ್ ಒಂದು ವರ್ಷದಿಂದ ಸತತವಾಗಿ ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ಹಾಗೂ ಬಸ್ ನಿಲ್ದಾಣದಲ್ಲಿ ಹಸಿದವರಿಗೆ ಊಟ ನೀಡುವ ಯೋಜನೆಯನ್ನು ಒಂದು ವರ್ಷ ಕಾಲ ಯಶಸ್ವಿಯಾಗಿ ನಡೆಸಿಕೊಂಡು ಬಂದಿರುತ್ತಾರೆ.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಗವರ್ನರ್ ದೀಪಕ್ ಸುಮನ್, ಉಪ ಗವರ್ನರ್ ರಾದ ಮನೋಹರನ್ ನಂಬಿಯಾರ್, ಬಿಎಸ್. ರಾಜಶೇಖರಯ್ಯ, ಜಿಲ್ಲಾ ಹಂಗರ್ ಟೀಮಿನ ನಾಗರಾಜ ಶೆಟ್ಟಿ, ವೇಣುಗೋಪಾಲ್, ರಾಮಾಂಜನಿ ಮುಂತಾದ ಲಯನ್ ಸದಸ್ಯರಿಂದ ಯೋಜನೆ ಯಶಸ್ವಿಯಾಯಿತೆಂದು ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರಾದ ಲಯನ್ ಜಿಎಸ್ ಮಂಜುನಾಥ್ ರವರು ತಿಳಿಸಿರುತ್ತಾರೆ.

0 Comments