Ticker

6/recent/ticker-posts

Ad Code

Responsive Advertisement

::- ಲಗ್ನ ಫಲ -::

ಪ್ರತಿ ವ್ಯಕ್ತಿಯು ನಿರ್ದಿಷ್ಟವಾದ 27 ನಕ್ಷತ್ರಗಳಲ್ಲಿ ಒಂದು ನಕ್ಷತ್ರದಲ್ಲಿ ಜನಿಸುವನು. ಅದೇ ರೀತಿಯಲ್ಲಿ 12 ಲಗ್ನಗಳಲ್ಲಿ ಒಂದು ಲಗ್ನದಲ್ಲಿ ಜನಿಸುವನು.

ಚಂದ್ರ ಸ್ಥಿತ ನಕ್ಷತ್ರ ರಾಶಿಯಾಗುವುದು. ಚಂದ್ರನು ಒಂದು ರಾಶಿಯಲ್ಲಿ ೫೪ ಘಂಟೆಗಳು ಸಂಚರಿಸುವನು. ಅಂದರೇ 2 1/4 ದಿನಗಳು. ಒಂದು ದಿನದಲ್ಲಿ, ಒಂದೇ ಸಮಯದಲ್ಲಿ ಸಾವಿರಾರು / ಲಕ್ಷಾಂತರ ವ್ಯಕ್ತಿಗಳು ಜನನ ಪಡೆಯುವರು. ಒಂದೇ ಸಮಯದಲ್ಲಿ ಜನಿಸಿದ ವ್ಯಕ್ತಿಗಳೆಲ್ಲರೂ, ವಿಭಿನ್ನ ಗುಣಗಳನ್ನು ಹೊಂದಿರುವರಾಗಿರುತ್ತಾರೆ, ವಿಭಿನ್ನ ವಿದ್ಯಾವಂತರಾಗುತ್ತಾರೆ, ವಿಭಿನ್ನ ಉದ್ಯೋಗಗಳು, ವಿಭಿನ್ನ ಹುದ್ದೆಗಳು, ಅವರ ಸ್ಥಿತಿಗತಿಗಳು ವಿಭಿನ್ನವಾಗಿರುವುದು. ಕಾರಣ ಅರ್ಥವಾಗದ್ದು.

ಆದರೇ ಒಂದು ದಿನದಲ್ಲಿ ಸೂರ್ಯೋದಯದ ಆಧಾರದ ಮೇಲೆ, 24 ಘಂಟೆಗಳು 12 ಲಗ್ನದ ರೂಪದಲ್ಲಿ ವಿಂಗಡಿಸಲಾಗಿದೆ. ಅಂದರೇ 1 ಲಗ್ನಕ್ಕೆ 2 ಘಂಟೆಗಳಾಗಿರುತ್ತದೆ. ಚಂದ್ರನ ಆಧಾರದ ಮೇಲೆ, ೫೪ ಘಂಟೆಗಳಲ್ಲಿ ಜನಿಸಿದ ವ್ಯಕ್ತಿಯು ಒಂದೇ ರೀತಿಯಿರುವುದಿಲ್ಲವೋ, ಅದೇ ರೀತಿ, ಲಗ್ನದ ಆಧಾರದ ಮೇಲೆ ಒಂದು ಗಣಿಸಿದಾಗ, ವ್ಯಕ್ತಿಯ ಗುಣ, ವ್ಯವಹಾರ, ವಿದ್ಯೆ, ವೃತ್ತಿ ಮತ್ತು ಹಲವಾರು ಚಿಂತನೆಗಳನ್ನು ತಿಳಿಯಲು ಅನುಕೂಲವಾಗುವುದು. ಆದುದರಿಂದ ರಾಶಿ ಫಲಕ್ಕಿಂತ ಲಗ್ನಫಲವು ಉತ್ತಮ ಮಾಹಿತಿ ನೀಡುವುದು.

ಓದುಗರ ಅನುಕೂಲ ಮತ್ತು ಒಳಿತಿಗಾಗಿ ಮುಂಬರುವ ಸಂಚಿಕೆಗಳಲ್ಲಿ ಲಗ್ನ ಫಲ ಜ್ಯೋತಿಷ್ಯ ಶೀರ್ಷಿಕೆಯನ್ನು ತಲುಪಿಸುವ ಉದ್ದೇಶ ಹೊಂದಿರುವ ವಾರ್ತಾಜಾಲ ಸಂಪಾದಕೀಯ ಮಂಡಲಿ.

Analysis by :

Dr. M.R. Badarinath Phd (Astrology) Phd (Palmistry)

SREE RAMANUJA GURUKULA

No.35, 3rd Cross Dwarakanagar BSK 3rd Stage
Bangalore 560 085,    Mobile : 9480261881

Post a Comment

0 Comments

Ad Code

Responsive Advertisement