ನಿರಾಶ್ರಿತನಿಗೆ ಆಶ್ರಯ ನೀಡಿ ಮಾನವೀಯತೆ ಮೆರೆದ ರಾಶ್ಚರುವು ಪಂಚಾಯಿತಿಯ ದೋರಣಾಲ ಪಲ್ಲಿ ಜನಸಾಮಾನ್ಯರು.
ಚಿಕ್ಕ ಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ರಾಶ್ಚರುವು ಗ್ರಾಮಪಂಚಾಯಿತಿಯಲ್ಲಿ ಯ ದೊರಣಾಲಪಲ್ಲಿ ಎಂಬ ಪುಟ್ಟ ಹಳ್ಳಿಯಲ್ಲಿ ಸುಮಾರು ವರ್ಷಗಳಿಂದ ತಂದೆ-ತಾಯಿ ಒಡಹುಟ್ಟಿದವರು ಹೆಂಡತಿಯಾಗಲಿ ಯಾರು ಇಲ್ಲದ ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿದ್ದ ರಾಮಿರೆಡ್ಡಿ ಎಂಬವರು ಜೀವನ ಸಾಗಿಸುತ್ತಿದ್ದ ಇವರಿಗೆ 80 ವರ್ಷ ದಾಟಿದೆ ಕಣ್ಣು ಕಾಣಿಸುವುದಿಲ್ಲ ಕಷ್ಟಪಡ ಲಾಗುವುದಿಲ್ಲ ಇಂತಹ ಪರಿಸ್ಥಿತಿಯಲ್ಲಿ ಹಳ್ಳಿಯ ಎಲ್ಲಾ ಜನರು ಸಹಾಯ ಹಸ್ತ ನೀಡಿ ಒಂದೊಂದು ಹೊತ್ತು ಒಬ್ಬಬ್ಬರು ಊಟ ನೀಡಿ ಅವರ ಹಸಿವನ್ನು ನೀಗಿಸುತ್ತಿ ದ್ಧರು ಸುಮಾರು ವರ್ಷಗಳಿಂದ ಇದೇ ರೀತಿಯಾಗಿತ್ತು ಇಲ್ಲಿ ಯಾವುದೇ ಒಬ್ಬ ಸರ್ಕಾರಿ ಅಧಿಕಾರಿ ಕೂಡ ಭೇಟಿ ನೀಡಿಲ್ಲವೆಂದು ಇಲ್ಲಿನ ಪಂಚಾಯಿತಿ ಸದಸ್ಯ ಕನ್ಯಮ್ಮ ಮತ್ತು ಚಿನ್ನಪ್ಪರೆಡ್ಡಿ ನರಸಿಂಹ ರೆಡ್ಡಿ ಶಿವಯ್ಯ ಅನೇಕರು ಪತ್ರಿಕಾ ಹೇಳಿಕೆ ನೀಡಿರುತ್ತಾರೆ. ಇದು ಮನಕಲಕುವಂತ ವಿಷಯವಾಗಿದ್ದು ಈಗಲಾದರೂ ಸರ್ಕಾರ ಕಣ್ಣು ತೆರೆಯಬೇಕೆಂದು ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ಪತ್ರಕರ್ತರು ತಿಳಿಸಬೇಕೆಂದು ಮತ್ತು ಈ ಕರೋನಾ ಕರಿನೆರಳಿನಲ್ಲಿ ಜನಸಾಮಾನ್ಯರು ಅವರ ಹತ್ತಿರ ಹೋಗುವುದು ಕಷ್ಟವಾಗುತ್ತದೆ ಎಂದು ಅದಕ್ಕೆ ನಿರಾಶ್ರಿತರ ಶಿಬಿರಕ್ಕೆ ಇವರನ್ನು ಕಳಿಸಬೇಕೆಂದು ತಹಸಿಲ್ದಾರ್ ರವರನ್ನು ಕೋರಿರುತ್ತಾರೆ.
****
ರಾಶ್ಚರುವು ಪಂಚಾಯಿತಿಯ ಅಧ್ಯಕ್ಷರಾದ ನೀಲಾವತಮ್ಮ ರವರ ಪತ್ರಿಕಾ ಹೇಳಿಕೆ.
ನಿಮ್ಮ ಪತ್ರಕರ್ತರಿಂದ ನಮಗೆ ವಿಷಯ ಗೊತ್ತಾಯಿತು ನಮ್ಮ ಪಂಚಾಯತಿಯ ಪಿ.ಡಿ.ಒ ಮತ್ತು ನಮ್ಮ ತಹಸೀಲ್ದಾರ್ ಅವರ ಗಮನಕ್ಕೆ ತಂದು ನಮ್ಮ ಪಂಚಾಯತಿಯಿಂದ ನಮ್ಮಿಂದ ಯಾವುದೇ ಸಹಾಯ ಹಸ್ತ ನೀಡಲು ಸಿದ್ಧರಿದ್ದೇವೆ.
-ನೀಲಾವತಮ್ಮ
****
ರಾಶ್ಚರುವು ಪಂಚಾಯತಿಯ ಪಿ.ಡಿ.ಒ. ನಾರಾಯಣಸ್ವಾಮಿ ರವರ ಪತ್ರಿಕಾ ಹೇಳಿಕೆ.
ಇದರ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ GFTF ಮೀಟಿಂಗಿನಲ್ಲಿ ಕೂಡ ಯಾರು ನಮ್ಮ ಗಮನಕ್ಕೆ ತಂದಿಲ್ಲ ನಿಮ್ಮ ಪತ್ರಕರ್ತರಿಂದ ಮಾಹಿತಿ ಗೊತ್ತಾಗಿದೆ ನಮ್ಮ EO ಸಾಹೇಬರಿಗೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ ನಾವು ಸಹಾಯ ಮಾಡಲು ಸಿದ್ಧರಿದ್ದೇವೆ. ನಿರಾಶ್ರಿತರಿಗೆ ಆಶ್ರಯ ನೀಡುವುದು ನಮ್ಮ ಧರ್ಮ ನಮ್ಮ ಕರ್ತವ್ಯ ಅದಕ್ಕೆ ಹಿಂದು ಮುಂದು ನೋಡುವುದಿಲ್ಲ.
-ಪಿ.ಡಿ.ಒ. ನಾರಾಯಣಸ್ವಾಮಿ
0 Comments