Ticker

6/recent/ticker-posts

Ad Code

Responsive Advertisement

“ಸನ್ ಸಿಟಿ 04ನೇ ಹಂತ” ವಸತಿಗೃಹಗಳನ್ನು ಪೊಲೀಸ್ ಸಿಬ್ಬಂದಿಗೆ, ಶಿಕ್ಷಕರಿಗೆ ನೀಡಲು ಕೋರಿ ಮನವಿ

 ಬೆಂಗಳೂರು ಮಹಾನಗರದಲ್ಲಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಮತ್ತು 05 ವರ್ಷಗಳಿಂದೀಚೆಗೆ ನಿವೃತ್ತರಾಗಿರುವ 05 ಸಾವಿರ ಮಂದಿ ಪೋಲೀಸ್ ಕಾನ್ಸ್ ಟೇಬಲ್ ಗಳು, ಹೆಡ್ ಕಾನ್ಸ್ ಟೇಬಲ್ ಗಳು ಮತ್ತು ಸಬ್ ಇನ್ಸ್ ಪೆಕ್ಟರ್ ಗಳು ಹಾಗೂ ಬೆಂಗಳೂರು ಮಹಾನಗರದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಹಾಗೂ 05 ವರ್ಷಗಳಿಂದೀಚೆ ನಿವೃತ್ತರಾಗಿರುವ 03 ಸಾವಿರ ಮಂದಿ ಶಿಕ್ಷಕರಿಗೆ ರಾಜ್ಯ ಸರ್ಕಾರದ ವಸತಿ ಇಲಾಖೆ ವತಿಯಿಂದ ನಿರ್ಮಿಸಲಾಗುತ್ತಿರುವ “ಸನ್ ಸಿಟಿ 04ನೇ ಹಂತ” ದ ವಸತಿಗೃಹಗಳಲ್ಲಿ ಅತಿ ಕಡಿಮೆ ಬೆಲೆಗೆ ವಸತಿಗೃಹಗಳನ್ನು ಹಂಚಿಕೆ ಮಾಡಬೇಕೆಂದು ವಸತಿ ಸಚಿವ ವಿ. ಸೋಮಣ್ಣ ರವರನ್ನು ಬೇಟಿಯಾಗಿ ಮನವಿ ಪತ್ರ ನೀಡಲಾಯಿತು.




ಸದಾ ನಮ್ಮ ರಕ್ಷಣೆಗಾಗಿ ಶ್ರಮಿಸುವ ರಕ್ಷಕರು ಹಾಗೂ ನಮ್ಮ ಜೀವನವನ್ನು ರೂಪಿಸಿ ದೇಶದ ಸತ್ಪ್ರಜೆಗಳನ್ನಾಗಿ ಮಾಡುವ ಶಿಕ್ಷಕರು - ಇವರುಗಳ ಋಣ ಸಂದಾಯಕ್ಕಾಗಿಯಾದರೂ ಅವರ ಕುಟುಂಬಗಳ ಭದ್ರತೆ ದೃಷ್ಠಿಯಿಂದ ಅವರುಗಳಿಗೆ ವಸತಿಗೃಹಗಳನ್ನು ಮಂಜೂರು ಮಾಡುವ ಅವಶ್ಯಕತೆ ಅತಿ ಹೆಚ್ಚಾಗಿ ಇದೆ ಎಂದು ಸಚಿವರಿಗೆ ಮನವರಿಕೆ ಮಾಡಿಕೊಡಲಾಯಿತು.

ಈ ಸಂದರ್ಭದಲ್ಲಿ ಸ್ಥಳದಲ್ಲೇ ಪ್ರತಿಕ್ರಿಯಿಸಿದ ವಿ. ಸೋಮಣ್ಣ ರವರು ಮನವಿ ಪತ್ರವನ್ನು ಸ್ವೀಕರಿಸಿ ಪತ್ರದಲ್ಲಿ ತಿಳಿಸಿರುವಂತೆ ರಕ್ಷಕರಿಗೆ ಮತ್ತು ಶಿಕ್ಷಕರಿಗೆ ಸಾಧ್ಯವಾದಷ್ಟು ಕಡಿಮೆ ಬೆಲೆಯಲ್ಲಿ ವಸತಿಗೃಹಗಳನ್ನು ಮಂಜೂರು ಮಾಡುವ ಬಗ್ಗೆ ಶೀಘ್ರದಲ್ಲೇ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.


Post a Comment

0 Comments

Ad Code

Responsive Advertisement