Ticker

6/recent/ticker-posts

Ad Code

Responsive Advertisement

IN AND AROUND MALLESWARAM : "ಪ್ರತಿದಿನವೂ ದೃಷ್ಟಿ ತೆಗೆಸಿಕೊಳ್ಳಬೇಕಾದ ಅಗಾಧ ಪ್ರತಿಭೆ" ಶ್ರೀ.ಗೋವಿಂದ್ ಕರ್ನೂಲ್ !

ಶ್ರೀ.ಗೋವಿಂದ್ ಕರ್ನೂಲ್ ನಿಜಕ್ಕೂ ಅಪ್ರತಿಮ ಗಾಯಕ.ತುಂಬಾ ಚೆನ್ನಾಗಿ ಹಾಡುತ್ತಾರೆ.ಒಂದು ಸಲ ಅವರು ಹಾಡುವುದನ್ನು ಕೇಳಿ ದರೆ ಸಾಕು ನಾವೂ ಆ ತನ್ಮಯತೆಯಲ್ಲಿ ಸೇರಿ ಹೋಗುತ್ತೇವೆ.ನನಗೆ ಪ್ರಾಮಾಣಿಕವಾಗಿ ಇಷ್ಟವಾಗಿದ್ದು ಅವರಲ್ಲಿನ ಕಪಟ ಕಲ್ಮಶವಿಲ್ಲದ ನಿರ್ಮಲತೆ ತುಂಬಿದ ಮುಗ್ಧವಾದ ವ್ಯಕ್ತಿತ್ವ.ತಾನೆಷ್ಟೇ ಪ್ರತಿಭಾವಂತನಾದರೂ ಯಾವುದೇ ಅಹಂಕಾರವಿಲ್ಲ.ಮೋಸ ಅನ್ಯಾಯ ಬಯಸದ ಪ್ರಾಮಾಣಿಕ ಪ್ರತಿಭೆ.ಶ್ರೀ.ಗೋವಿಂದ್ ಕರ್ನೂಲ್ ಅವರಲ್ಲಿ ಯಾವುದೋ ಒಂದು ದೈವತ್ವವೂ ಇದೆ ಹಾಗಾಗಿಯೇ ಅವರು ಹಾಡುತ್ತಿದ್ದರೆ ಗಂಧರ್ವಲೋಕ ಸೃಷ್ಟಿಯಾಗಿ ಬಿಡುತ್ತದೆ.ಯಾವುದೇ ವೇದಿಕೆಯಲ್ಲಿ ಶ್ರೀ.ಗೋವಿಂದ್ ಕರ್ನೂಲ್ ಅವರ ಪ್ರತಿಭೆ ನೋಡಿದ ಹಿರಿಯರು ಹೇಳುವ ಒಂದು ಮಾತು.ನಿಮ್ಮ ಅಮ್ಮ ಶ್ರೀಮತಿ.ವನಿತಾ ಸತೀಶ್ ಅವರಿಗೆ ದೃಷ್ಟಿ ತೆಗೆಯಲು ಹೇಳಬೇಕು.ಮನೆಗೆ ಹೋದ ಮೇಲೆ ದೃಷ್ಟಿ ತೆಗೆಸಿಕೊಳ್ಳಿ ಅಂತ.ಶ್ರೀ.ಗೋವಿಂದ್ ಕರ್ನೂಲ್ ಅನುಕ್ಷಣವೂ ರೋಮಾಂಚಕವಾಗಿ ಹಾಡುವ ಪ್ರತಿಭೆ.ಹಾಗಾಗಿಯೇ ಇವರು "ಪ್ರತಿ ದಿನವೂ ದೃಷ್ಟಿ ತೆಗೆಸಿಕೊಳ್ಳಬೇಕಾದ ಅಗಾಧ ಪ್ರತಿಭೆ" ಎಂದು ಹೇಳಬಹುದು.ಇವರು ಕನ್ನಡದ ಕುಮಾರ್ ಸಾನು ಅಂತಲೋ ತಮಗಿಷ್ಟವಾದ ಗಾಯಕನ ಜೂನಿಯರ್ ಅಂತಲೋ ಪ್ರೀತಿಯಿಂದ ಶ್ರೀ.ಗೋವಿಂದ್ ಕರ್ನೂಲ್ ಅವರ ಅಭಿಮಾನಿಗಳು ಕರೆಯುತ್ತಾರೆ.ಇವರು ಅಪ್ಪಟ ಕನ್ನಡಿಗ ಎಂಬುದು ನಮ್ಮ ಹೆಮ್ಮೆ.ಕನ್ನಡದ ಜೊತೆಗೆ ಹಿಂದಿ ತಮಿಳು ಮುಂತಾದ ಇತರ  ಭಾಷೆಗಳಲ್ಲೂ ಹಾಡಿ ಸೈ ಎನಿಸಿಕೊಂಡಿದ್ದಾರೆ.



ಶ್ರೀ.ಗೋವಿಂದ್ ಕರ್ನೂಲ್ ನಮ್ಮ ರಾಜಾಜಿನಗರದ ವಿದ್ಯಾವರ್ಧಕ ಸಂಘದ ಸರ್ದಾರ್ ಪಟೇಲ್ ಶಾಲೆಯಲ್ಲಿ,,ಶ್ರೀ ಭಗವಾನ್ ಮಹಾವೀರ್ ಜೈನ್ ಕಾಲೇಜಿನಲ್ಲಿ ಓದಿದ ಪ್ರತಿಭಾವಂತ.ಸಧ್ಯಕ್ಕೆ ಹಿಂದೂಸ್ಥಾನಿ ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಮತ್ತು ಸಂಗೀತದಲ್ಲಿ ಡಾಕ್ಟರೇಟ್ ಮಾಡುವತ್ತ ಗಮನಹರಿಸಿದ್ದಾರೆ.ಚಲನಚಿತ್ರ ಗೀತೆಗಳನ್ನು ಸ್ವಂತ ಪರಿಶ್ರಮಗಳಿಂದ ಸುಶ್ರಾವ್ಯವಾಗಿ ಹಾಡುವುದನ್ನು ಕಲಿತಿದ್ದಾರೆ.ಮಲ್ಲೇಶ್ವರದ ಮೂಲದ ಸತೀಶ್ ಕರ್ನೂಲ್ ಅವರ ಮಗ ಗೋವಿಂದ್ ಕರ್ನೂಲ್ ! ಸತೀಶ್ ಕರ್ನೂಲ್ ಕೂಡಾ ವೈವಿಧ್ಯಮಯ ವ್ಯಕ್ತಿ.ನೇರವಂತಿಕೆ ಬಯಸುವ ಹೃದಯವಂತ.ನಮ್ಮ ಮಲ್ಲೇಶ್ವರದವರು.ಏಳನೇ ತರಗತಿಯ ತನಕ ಎಂ ಎಲ್ ಎ ಶಾಲೆಯಲ್ಲಿ ಓದಿದವರು ಹೈಸ್ಕೂಲು ಎಂಟನೇ ಮುಖ್ಯರಸ್ತೆಯಲ್ಲಿದ್ದ ಶಾರದಾ ವಿದ್ಯಾನಿಕೇತನದಲ್ಲಿ ಓದಿದವರು.1972 ಯಿಂದ 1983 ರ ತನಕ ನಮ್ಮ ಮಲ್ಲೇಶ್ವರದ ಹದಿನೈದನೇ ಕ್ರಾಸಿನ ಎರಡನೇ ದೇವಸ್ಥಾನದ ರಸ್ತೆಯ ಅಚ್ಚಮ್ಮನ ವಠಾರದಲ್ಲಿ ವಾಸವಿದ್ದವರು ಈಗ ಮಹಾಲಕ್ಷ್ಮಿ ಬಡಾವಣೆಯ ಸಮೀಪದ ಗೆಳೆಯರ ಬಳಗದ ವಾಸಿಗಳು.ಕೆಲವು ಸಂಸ್ಥೆಗಳಲ್ಲಿ ಕೆಲಸ ಮಾಡಿದ ನಂತರ ಈಗ ತಮ್ಮದೇ ಸ್ವಂತ ಕೈಗಾರಿಕಾ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ.ಶ್ರೀ.ಸತೀಶ್ ಕರ್ನೂಲ್ ಅವರು ನನಗೆ  ಪರಿಚಯವಾದ ಹೊಸತರಲ್ಲಿ ತಮ್ಮ ಮಗ ಹಾಡಿರುವ ಹಾಡುಗಳನ್ನು ಕೇಳಿ ಎಂದು  ಕೆಲವು ಲಿಂಕ್ ಕಳುಹಿಸಿದ್ದರು.ಅವರ ಮಗ ಶ್ರೀ.ಗೋವಿಂದ್ ಕರ್ನೂಲ್ ಅವರ ಪ್ರತಿಭೆ ಕಂಡು ಮಾರು ಹೋದೆ."ಐ ಯಾಮ್ ಎ ಬಿಗ್ ಫ್ಯಾನ್ ಆಫ್ ಯುವರ್ ಕನ್ನಡ ಅರ್ಟಿಕಲ್ಸ್" ಅಂತ ಹೇಳಿ ನಿಮ್ಮದೇ ವರ್ಡ್ಸ್ ಅಂತ ಅವರ ಫೋಟೋದೊಂದಿಗೆ ನಾನು ಬರೆದ ಸಾಲುಗಳನ್ನು‌ ಬಳಸಿಕೊಂಡಿರುವುದನ್ನು ತಿಳಿಸಿದ್ದರು ಸತೀಶ್.ನಿಜಕ್ಕೂ ಇದು ಅವರ ಸರಳ ಹೃದಯ ಶ್ರೀಮಂತಿಕೆ.ನಿಜ ಹೇಳಬೇಕೆಂದರೆ ನಾನೇ ಅವರ ಮತ್ತು ಅವರ ಮಗನ ಫ್ಯಾನ್ ! 

ದೂರದ ಬೀದರ್ ನಗರದಲ್ಲಿರುವ ನಾನು ಕೆಲಸ ಮಾಡಿದ ಮೊದಲ ಸಂಸ್ಥೆ "ಕಾಸ್ಮೋಸ್" ಫ್ಯಾಕ್ಟರಿಗೆ 1989ರಲ್ಲಿ  ತಮ್ಮ ಇಂಜಿನಿಯರಿಂಗ್ ಮುಗಿದ ನಂತರ ಹೋಗಿದ್ದರ ಬಗ್ಗೆ ಶ್ರೀ.ಸತೀಶ್ ಕರ್ನೂಲ್ ಅವರು ನಾನು ಕಾಸ್ಮೋಸ್ ಬಗ್ಗೆ ಹಿಂದೆ ಬರೆದಿದ್ದ ಬರಹ ಇಷ್ಟವಾಗಿತ್ತು ಎಂದಿದ್ದರು.ಕರ್ನೂಲ್ ಎಂದರೆ ಆಂಧ್ರಪ್ರದೇಶ ಅಲ್ವಾ ಅಂದಾಗ ಇಲ್ಲ ಬೆಳೆದಿದ್ದು ಕರ್ನಾಟಕ ಮಾತೃಭಾಷೆ ಕನ್ನಡ ಸುಮಾರು ಇನ್ನೂರು ವರ್ಷಗಳ ಹಿಂದೆ ಪೂರ್ವಿಕರ ನಂಟಿನ ಬಗ್ಗೆ ತಿಳಿಸಿದ್ದರು.

ಸೌಜನ್ಯತೆ ಮತ್ತು ಸಜ್ಜನಿಕೆಗಳ ಸಂಸ್ಕಾರ ಹೊಂದಿರುವ ಶ್ರೀ.ಗೋವಿಂದ್ ಕರ್ನೂಲ್ ಅವರಿಗೆ ತನ್ನ ಅಮ್ಮನ ಅಮ್ಮ ಅಜ್ಜಿಯ ಸಂಗೀತದ ಬಳುವಳಿ ಬಂದಿರಬೇಕು ಎಂದು ಸಂಗೀತ ಕುಟುಂಬದ ಹಿನ್ನಲೆ ನೋಡಿದಾಗ ತಿಳಿದು ಬರುತ್ತದೆ. ಡಾ.ಎಸ್ ಪಿ ಬಾಲಸುಬ್ರಹ್ಮಣ್ಯಂ ಮತ್ತು ಡಾ.ಪಿ ಬಿ ಶ್ರೀನಿವಾಸ್ ಮೊದಲಾದ ಅತಿರಥ ಮಹಾರಥ ಗಾಯಕರಲ್ಲಿದ್ದ ವಿನಯವಂತಿಕೆ ಶ್ರೀ.ಗೋವಿಂದ್ ಕರ್ನೂಲ್ ಅವರಲ್ಲೂ ಇದೆ.ಕಿರಿಯ ಉದಯೋನ್ಮುಖ ಪ್ರತಿಭೆಯಾದರೂ ರಾಷ್ಟ್ರಾದ್ಯಂತ ಜನಪ್ರಿಯವಾಗುವ ಎಲ್ಲ ಲಕ್ಷಣವೂ ಅವರಲ್ಲಿದೆ.ಇವರನ್ನು ಬೆಳೆಸಬೇಕಿರುವುದು ಸಂಗೀತಾಭಿಮಾನಿಗಳ ಕರ್ತವ್ಯ.ಕನ್ನಡಿಗರು ಹೆಮ್ಮೆಯಿಂದ ಮಾಡಬೇಕಾದ ಕೆಲಸ ಎಂದು ತಿಳಿಸಿ  ನಮಿಸಿ ಅವರ ಕುಟುಂಬಕ್ಕೆ ಸದಾಕಾಲ ಶುಭ ಹಾರೈಸುತ್ತೇನೆ.

-C.N. Ramesh

Post a Comment

0 Comments

Ad Code

Responsive Advertisement