Ticker

6/recent/ticker-posts

Ad Code

Responsive Advertisement

ಸಾರ್ವಜನಿಕಗ್ರಂಥಾಲಯ ಇಲಾಖೆ: ಪ್ರಥಮ ಮುದ್ರಣದ ಪುಸ್ತಕಗಳನ್ನು ರಾಜ್ಯ ಮಟ್ಟದ ಪುಸ್ತಕ : ಅರ್ಜಿ ಅಹ್ವಾನ

ಬೆಂಗಳೂರು,  ಜೂನ್ 29  (ಕರ್ನಾಟಕ ವಾರ್ತೆ):  2021 ನೇ ವರ್ಷದಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟಗೊಂಡ ಸಾಹಿತ್ಯ, ಕಲೆ, ವಿಜ್ಞಾನ, ವೃತ್ತಿ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಆದಾಯ ಉತ್ಪಾದನಾ ಯೋಜನೆ, ಸ್ಪರ್ಧಾತ್ಮಕ, ಪಠ್ಯ ಪುಸ್ತಕ, ಸಾಂದರ್ಭಿಕ ಮತ್ತು ಪರಾಮರ್ಶನ ಕೃತಿಗಳು ಹಾಗೂ ಮಕ್ಕಳ ಸಾಹಿತ್ಯ / ನವಸಾಕ್ಷರರ ಕೃತಿಗಳು ಇತ್ಯಾದಿ ವಿಷಯಗಳ ಕನ್ನಡ/ಆಂಗ್ಲ/ಇತರೆ ಭಾರತೀಯ ಭಾಷೆಯ ಗ್ರಂಥಗಳ ಆಯ್ಕೆಗೆ ಲೇಖಕರು, ಲೇಖಕ-ಪ್ರಕಾಶಕರು, ಪ್ರಕಾಶಕರು ಮತ್ತು ಪ್ರಕಟಣಾ ಸಂಸ್ಥೆಗಳಿಂದ ಪುಸ್ತಕಗಳನ್ನು ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಗೆ ಆಯ್ಕೆಗಾಗಿ ಸ್ವೀಕರಿಸಲು ಅರ್ಜಿಗಳನ್ನು ಆಹ್ವಾನಿಸಿದೆ. ಆಯ್ಕೆ ಗೆ ಸಲ್ಲಿಸುವ ಪುಸ್ತಕಗಳು,

1. 2021 ನೇ ವರ್ಷದಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟವಾಗಿರಬೇಕು/ ಮರುಮುದ್ರಣವಾದಲ್ಲಿ. ಹತ್ತು ವರ್ಷಗಳ ಅಂತರವಿರಬೇಕು. ಈ ಬಗ್ಗೆ ದೃಢೀಕರಣ ಪತ್ರವನ್ನು ನೀಡಬೇಕು.

2. ಪುಸ್ತಕದ ಶೀರ್ಷಿಕೆ, ಗ್ರಂಥಕರ್ತರ ಹೆಸರು, ಪ್ರಕಾಶಕರ ಹೆಸರು, ಪುಟ ಸಂಖ್ಯೆ, ಪ್ರಕಟಣೆಯ ವರ್ಷ, ಆವೃತ್ತಿಯಎಲ್ಲಾ ವರ್ಷಗಳ ವಿವರ, ಮುಖ ಬೆಲೆಗಳನ್ನು ಸ್ಪಷ್ಠವಾಗಿ ನಮೂದಿಸಬೇಕು. ಇವುಗಳಲ್ಲಿ ತಾಂತ್ರಿಕ ಲೋಪದೋಷಗಳು ಏನಾದರೂ ಇದ್ದಲ್ಲಿ ತಿರಸ್ಕರಿಸುವ ಹಕ್ಕು ಆಯ್ಕೆ ಸಮಿತಿಗೆ ಇದೆ.  ಕೃತಿಯ ಮೊದಲ ಮುದ್ರಣಕ್ಕೂ ಮತ್ತು ಮರು ಮುದ್ರಣಕ್ಕೂ ಹತ್ತು ವರ್ಷಗಳ ಅಂತರವಿರಬೇಕು.

3. ಪುಸ್ತಕ ಖರೀದಿಗೆ ನಿಗದಿಯಾದ ಮೊತ್ತದಲ್ಲಿ ಶೇ.80 ರಷ್ಟುಕನ್ನಡ ಪುಸ್ತಕಗಳು (ಎಲ್ಲಾ ವಿಷಯಗಳು ಸೇರಿ) ಶೇ.20 ರಷ್ಟು ಆಂಗ್ಲ ಭಾಷೆಯ ಪುಸ್ತಕಗಳು ಹಾಗೂ ಇತರೆ ಭಾರತೀಯ ಭಾಷೆಯ ಪುಸ್ತಕಗಳನ್ನು ಆಯ್ಕೆ ಮಾಡಲು ಅವಕಾಶವಿರುವುದರಿಂದ ನಿಯಾಮಾವಳಿಗಳಿಗೆ ಒಳಪಟ್ಟು ಪುಸ್ತಕಗಳನ್ನು ಆಯ್ಕೆಗೆ ಸಲ್ಲಿಸಬಹುದು. ಕರ್ನಾಟಕದಲ್ಲಿ ಪ್ರಕಟವಾದ ಆಂಗ್ಲ ಪುಸ್ತಕಗಳಿಗೆ ಆದ್ಯತೆಇರುತ್ತದೆ.

4. ಯುನೆಸ್ಕೋ ನಿಯಮದ ಪ್ರಕಾರ ನಲವತ್ತೆಂಟು (48) ಪುಟಕ್ಕಿಂತ ಕಡಿಮೆ ಪುಟಗಳಿರುವ ಪುಸ್ತಕಗಳನ್ನು ಆಯ್ಕೆಗೆ ಸ್ವೀಕರಿಸುವುದಿಲ್ಲ. (ಮಕ್ಕಳ ಪುಸ್ತಕ, ಎನ್.ಬಿ.ಟಿ. ಹಾಗೂ ನವಸಾಕ್ಷರತೆ ಸಾಹಿತ್ಯಕ್ಕೆಇದುಅನ್ವಯಿಸುವುದಿಲ್ಲ) ಸೆಂಟರ್ ಪಿನ್ನಿಂಗ್ ಮಾಡಿರುವ ಯಾವುದೇ ಪುಸ್ತಕಗಳನ್ನು ಆಯ್ಕೆಗೆ ಸ್ವೀಕರಿಸುವುದಿಲ್ಲ.

5. ಲೇಖಕರೇ ಪ್ರಕಾಶಕರಾಗಿರುವ ಸಂದರ್ಭದಲ್ಲಿ ಲೇಖಕರೇಅರ್ಜಿ ಸಲ್ಲಿಸಬೇಕು.

6. ಪುಸ್ತಕಗಳ ಜೆರಾಕ್ಸ್ / ಸ್ಕ್ಯಾನ್ ಮಾಡಿ ಮುದ್ರಿಸಿರುವ ಪ್ರತಿಗಳನ್ನು ಆಯ್ಕೆಗೆ ಸ್ವೀಕರಿಸುವುದಿಲ್ಲ.  ಅಸಮರ್ಪಕ (ಚೋರ) ಪ್ರಕಟಣೆ ಪುಸ್ತಕಗಳನ್ನು ಆಯ್ಕೆಗೆ ಸ್ವೀಕರಿಸುವುದಿಲ್ಲ. ಆದಾಗ್ಯೂಅಸಮರ್ಪಕ (ಚೋರ) ಪ್ರಕಟಣೆ ಪುಸ್ತಕಗಳು ಎಂದುಸಮಿತಿಯ ಗಮನಕ್ಕೆ ಕಂಡು ಬಂದಲ್ಲಿಅಂತಹ ಲೇಖಕರು, ಲೇಖಕ-ಪ್ರಕಾಶಕರು, ಪ್ರಕಟಣಾ ಸಂಸ್ಥೆಗಳು ಹಾಗೂ ವಿತರಕರನ್ನು ಕಪ್ಪು ಪಟ್ಟಿಗೆ ಸೇರಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು.

7. ಪುಸ್ತಕಗಳನ್ನು ಪ್ರಕಟಿಸುವ ಮೂಲ ಪ್ರಕಾಶಕರು ಅಥವಾ ಅವರ ಅನುಮತಿಯನ್ನು ಅಧಿಕೃತವಾಗಿ ಪಡೆದ ಪುಸ್ತಕ ವ್ಯಾಪಾರಿಗಳು ಮಾತ್ರಅರ್ಜಿ ಸಲ್ಲಿಸಬೇಕು. ನೋಂದಣಿ ಪ್ರಮಾಣ ಪತ್ರದಲ್ಲಿ ಅವರ ವಿಳಾಸವನ್ನು ದಾಖಲು ಮಾಡಿರಬೇಕು.

8. ನ್ಯೂಸ್ ಪ್ರಿಂಟ್ ಅಥವಾ ಇತರೆ ಅಗ್ಗದ ಕಾಗದದಲ್ಲಿ ಮುದ್ರಿಸಿರುವ ಪುಸ್ತಕಗಳನ್ನು ಯಾವುದೇ ಕಾರಣಕ್ಕೂ ಆಯ್ಕೆಗೆ ಸ್ವೀಕರಿಸುವುದಿಲ್ಲ.
9. ಆಯ್ಕೆಗೆ ಒಪ್ಪಿಸಿದ ಯಾವುದೇ ಭಾಷೆಯ ಗ್ರಂಥಗಳನ್ನು ಯಾವುದೇಕಾರಣಕ್ಕೂ ಹಿಂತಿರುಗಿಸುವುದಿಲ್ಲ.                                                                                                

10. ಲೇಖಕರು, ಲೇಖಕ-ಪ್ರಕಾಶಕರು, ಪ್ರಕಾಶಕರು ಮತ್ತು ಪ್ರಕಟಣಾ ಸಂಸ್ಥೆಗಳು ತಾವು ಪ್ರಕಟಿಸಿದ ಪುಸ್ತಕಗಳನ್ನು ಬೆಂಗಳೂರಿನ ರಾಜ್ಯ ಕೇಂದ್ರ ಗ್ರಂಥಾಲಯದಲಿ ್ಲಗ್ರಂಥಸ್ವಾಮ್ಯ (ಕಾಪಿರೈಟ್) ಕಾಯ್ದೆಯಡಿಯಲ್ಲಿ ಪ್ರತಿಗ್ರಂಥದ ಮೂರು ಪ್ರತಿಗಳನ್ನು ಮುಫತ್ತಾಗಿ ಸಲ್ಲಿಸಿ ನೋಂದಣೆಯನ್ನು ಮಾಡಿಸತಕ್ಕದ್ದು, ಆಯ್ಕೆಗಾಗಿ ಸಲ್ಲಿಸುವ ಪುಸ್ತಕದ ಕೊನೆಯ ಪುಟದಲ್ಲಿ ಅರ್ಜಿಯೊಂದಿಗೆ ನೋಂದಣಿ ಪತ್ರದ ನಕಲನ್ನು ಕಡ್ಡಾಯವಾಗಿ ಅಂಟಿಸಿರಬೇಕು. ಇಲ್ಲದೇ ಇದ್ದಲ್ಲಿ ಅಂತಹ ಗ್ರಂಥಗಳನ್ನು ತಿರಸ್ಕರಿಸುವ ಹಕ್ಕು ಆಯ್ಕೆ ಸಮಿತಿಯದಾಗಿರುತ್ತದೆ. ನೋಂದಣಿ ಪ್ರಮಾಣ ಪತ್ರದಲ್ಲಿರುವ ವಿಳಾಸಕ್ಕೆ ಮುಂದಿನ ಎಲ್ಲಾ ಪತ್ರ ವ್ಯವಹಾರಗಳನ್ನು ಮಾಡಲಾಗುವುದು.                                        

11. ನಿಗದಿತಅರ್ಜಿ ನಮೂನೆಯಲ್ಲಿ (ಅರ್ಜಿ ನಮೂನೆಯು ಇಲಾಖೆಯ ಅಂತರ್ಜಾಲದಲಿ ್ಲ  www.dpl.karnataka.gov.in  ಹಾಗೂ ರಾಜ್ಯದ ಎಲ್ಲಾ ಜಿಲ್ಲಾ / ನಗರ ಕೇಂದ್ರ ಗ್ರಂಥಾಲಯಗಳಲ್ಲಿ ದೊರೆಯುತ್ತವೆ) 1) ಅರ್ಜಿದಾರರ ಹೆಸರು ಮತ್ತು ವಿಳಾಸ 2) ಪ್ರಕಾಶಕರು / ಸರಬರಾಜುದಾರರ ಹೆಸರು ಮತ್ತು ವಿಳಾಸ 3)ಎ) ಅರ್ಜಿದಾರರು ಪುಸ್ತಕದ ಲೇಖಕರೇ /ಪ್ರಕಾಶಕರೇ / ವಿತರಕರೇ ಬಿ) ಪುಸ್ತಕದ ಹಕ್ಕು 4) ಎ) ಪುಸ್ತಕದ ಶಿರೋನಾಮೆ ಬಿ) ಲೇಖಕರ ಹೆಸರು ಸಿ) ಸಂಪುಟಗಳ ಸಂಖ್ಯೆ ಡಿ) ಪುಸ್ತಕದ ವಿಷಯ 5) ಪ್ರಕಟಣಾ ವರ್ಷ 6) ಅನುವಾದವಾಗಿದ್ದಲ್ಲಿ ಮೂಲ ಲೇಖಕರ ಹೆಸರು ಮತ್ತು ಭಾಷೆ 7) ಎ) ಪುಸ್ತಕದ ಅಳತೆ ಬಿ) ಪುಟಗಳ ಸಂಖ್ಯೆ ಸಿ) ಬೈಂಡಿಂಗ್ ಡಿ)ಪುಸ್ತಕದ ಬೆಲೆ ಇ) ಪುಸ್ತಕ ಮುದ್ರಿಸಲು ಬಳಸಿದ ಕಾಗದದಗುಣಮಟ್ಟ 8) ಗ್ರಂಥವು ಮರುಮುದ್ರಣಗೊಂಡಿದ್ದರೆ, ಮೊದಲ ಆವೃತ್ತಿಯ ವರ್ಷ 9) ಗ್ರಂಥಸ್ವಾಮ್ಯ ನೋಂದಣಿ ಸಂಖ್ಯೆ ಮತ್ತು ವರ್ಷ 10) ಲೇಖಕ, ಲೇಖಕ-ಪ್ರಕಾಶಕರು ಕಡ್ಡಾಯವಾಗಿ ಪ್ಯಾನ್ ಸಂಖ್ಯೆ ಹಾಗೂ ಪ್ರಕಾಶಕರು / ಮಾರಾಟಗಾರರು ಜಿ.ಎಸ್.ಟಿ. ನೊಂದಣಿ ಪ್ರಮಾಣ ಪತ್ರದ ಸಂಖ್ಯೆಯನ್ನು ನಮೂದಿಸುವುದು. ಮೇಲ್ಕಂಡ ಮಾಹಿತಿಗಳು ಸತ್ಯವಾಗಿರುತ್ತದೆಎಂದು ಅರ್ಜಿಯ ಘೋಷಣಾ ಪ್ರಮಾಣ ಪತ್ರದಲ್ಲಿ ಸಹಿ ಮಾಡುವುದು ಮತ್ತು ಆಯ್ಕೆಯಾದ ಪುಸ್ತಕಗಳಿಗೆ ಸರ್ಕಾರ ನಿಗದಿಪಡಿಸಿದ ಬೆಲೆಯಂತೆ, ಬೆಲೆಯನ್ನು ನಿಗದಿಪಡಿಸಲಾಗುವುದು.

12. 2021ನೇ ವರ್ಷದಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟವಾದ ಪುಸ್ತಕಗಳನ್ನು ಗ್ರಂಥಸ್ವಾಮ್ಯ ವಿಭಾಗ, ರಾಜ್ಯ ಕೇಂದ್ರ ಗ್ರಂಥಾಲಯ, ಕಬ್ಬನ್ ಉದ್ಯಾನವನ, ಬೆಂಗಳೂರು ಇಲ್ಲಿ ದಿನಾಂಕ: 30-07-2021 ರ ವರಗೆ ಕಾಪಿರೈಟ್ ಮಾಡಿಸಿರುವ ಪುಸ್ತಕಗಳನ್ನು ಆಯ್ಕೆಗಾಗಿ ಅರ್ಜಿಯೊಂದಿಗೆ ಪುಸ್ತಕದ ಒಂದು ಪ್ರತಿಯನ್ನು (ನೋಂದಣಿ ಪತ್ರದ ಪ್ರತಿಯೊಂದಿಗೆ) ನಿರ್ದೇಶಕರು, ಸಾರ್ವಜನಿಕಗ್ರಂಥಾಲಯ ಇಲಾಖೆ, ವಿಶ್ವೇಶ್ವರಯ್ಯ ಮುಖ್ಯಗೋಪುರ, 4ನೇ ಮಹಡಿ, ಡಾ: ಅಂಬೇಡ್ಕರ್ ವೀಧಿ, ಬೆಂಗಳೂರು-560001 ಇಲ್ಲಿಗೆ ದಿನಾಂಕ: 01-07-2021 ರಿಂದ 31-07-2021 ರ ಸಂಜೆ 5.00ರ ಗಂಟೆ ಒಳಗಾಗಿ ಸಲ್ಲಿಸುವುದು. ತದನಂತರಯಾವುದೇ ಪುಸ್ತಕಗಳನ್ನು ಆಯ್ಕೆಗೆಸ್ವೀಕರಿಸಲಾಗುವುದಿಲ್ಲ.

13. ಆಯ್ಕೆಗಾಗಿ ಸಲ್ಲಿಸುವ ಗ್ರಂಥಗಳ ಶೀರ್ಷಿಕೆ ಪುಟದ ಹಿಂಭಾಗದ ಪುಟದಲ್ಲಿ  (imprint page)  ಶೀರ್ಷಿಕೆ, ಲೇಖಕರ ಹೆಸರು, ಪ್ರಕಾಶಕರ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಪುಟಗಳ ಸಂಖ್ಯೆ, ಪುಸ್ತಕದ ಅಳತೆ, ಉಪಯೋಗಿಸಿರುವ ಕಾಗದದ ಗುಣಮಟ್ಟ, ಗ್ರಂಥಸ್ವಾಮ್ಯ ವಿವರ, ಮುದ್ರಣ ವರ್ಷ, ಆವೃತ್ತಿ, ಬೆಲೆ, ಮುಖಪುಟ, ಪುಸ್ತಕದ ಒಳಪುಟ ವಿನ್ಯಾಸ, ರೇಖಾಚಿತ್ರಗಾರರ ವಿವರ ಮತ್ತು ಲೇಖಕರು, ಲೇಖಕ-ಪ್ರಕಾಶಕರು, ಪ್ರಕಾಶಕರು ಮತ್ತು ಪ್ರಕಟಣಾ ಸಂಸ್ಥೆಗಳು ಹಾಗೂ ಮುದ್ರಕರ ವಿಳಾಸಗಳನ್ನು ಕಡ್ಡಾಯವಾಗಿ ಮುದ್ರಿಸಿರಬೇಕು.  ಕೈಯಿಂದ ಬರೆಯಲಾದ, ರಬ್ಬರ್ ಸ್ಟಾಂಪ್‍ನಿಂದ ಮುದ್ರಿಸಲಾದ ಅಥವಾ ಬೇರೆಯಾಗಿ ಅಂಟಿಸಲಾದ ಬೆಲೆಗಳಿದ್ದಲ್ಲಿ ಅಂತಹ ಪುಸ್ತಕಗಳನ್ನು ಆಯ್ಕೆಗೆ ಪರಿಗಣಿಸುವುದಿಲ್ಲ.

14. ಸರ್ಕಾರದ ಆದೇಶ ಸಂ. ಇಡಿ 283 ಎಲ್‍ಐಬಿ 2009, ಬೆಂಗಳೂರು ದಿನಾಂಕ 14-06-2010 ಮತ್ತು ಸರ್ಕಾರದ ಆದೇಶ ಸಂ. ಇಡಿ 234 ಎಲ್‍ಐಬಿ 2015, ಬೆಂಗಳೂರು ದಿನಾಂಕ 22-12-2017 ರಲ್ಲಿ ತಿಳಿಸಿರುವ ಪುಸ್ತಕ ಅಳತೆಗೆ ಅನುಗುಣವಾಗಿ ಮುದ್ರಿಸಿರುವ ಪುಸ್ತಕಗಳನ್ನು ಮಾತ್ರಆಯ್ಕೆಗೆ ಸ್ವೀಕೃರಿಸಲಾಗುವುದು. ಪುಸ್ತಕದ ಅಳತೆ ಸರಿಯಾಗಿಲ್ಲದ  (unsize books)  ಹಾಗೂ ಹೆಚ್ಚು-ಕಡಿಮೆ ಅಳತೆಗಳಿದ್ದಲ್ಲಿ ಕಡಿಮೆ ಅಳತೆಗೆ ಅನುಗುಣವಾಗಿದರವನ್ನು ನಿಗಧಿಪಡಿಸಲಾಗುವುದು.  ಸರ್ಕಾರವು ನಿಗದಿಪಡಿಸಲಾದ ಅಳತೆಯ ಕಾಗದವನ್ನು ಮಾತ್ರ ಮುದ್ರಣಕ್ಕೆ ಬಳಸುವುದು.  ಕಡಿಮೆ ಗುಣಮಟ್ಟದ ಕಾಗದವನ್ನು ಬಳಸಿ ಪುಸ್ತಕವನ್ನು ಮುದ್ರಿಸಿದಲ್ಲಿ ಅಂತಹ ಪುಸ್ತಕಗಳನ್ನು ಆಯ್ಕೆ ಮಾಡದೇ ತಿರಸ್ಕರಿಸಲಾಗುವುದು.

ಕಡ್ಠಾಯವಾಗಿ ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು
1. ಪುಸ್ತಕದಒಂದು ಪ್ರತಿ
2. ಕಾಪಿರೈಟ್‍ನ ನೋಂದಣಿಯ ದೃಢೀಕರಿಸಿದ ನಕಲುಪ್ರತಿ.
3. ವಿತರಕರು ಸರಬರಾಜು ಹಕ್ಕನ್ನು ಪಡೆದಿದ್ದಲ್ಲಿ ಅದರ ನಕಲು ಪ್ರತಿಯನ್ನುಅರ್ಜಿಯಜೊತೆಕಡ್ಡಾಯವಾಗಿ ಸಲ್ಲಿಸುವುದು.
ಈ ಮೇಲ್ಕಂಡ ದಾಖಲಾತಿಗಳು ಇಲ್ಲದಿದ್ದಲ್ಲಿ ಪುಸ್ತಕವನ್ನುಆಯ್ಕೆಗೆ ಪರಿಗಣಿಸಲಾಗುವುದಿಲ್ಲ. ಸಾರ್ವಜನಿಕಗ್ರಂಥಾಲಯ ಇಲಾಖೆ ಯು ಪ್ರಕಟಣೆಯಲ್ಲಿ ತಿಳಿಸಿದೆ

Post a Comment

0 Comments

Ad Code

Responsive Advertisement