Ticker

6/recent/ticker-posts

Ad Code

Responsive Advertisement

ವೃತ್ತಿ ತೆರಿಗೆ ಪಾವತಿಸಲು ಅವಧಿ ವಿಸ್ತರಣೆ

ಬೆಂಗಳೂರು,  ಜೂನ್ 29  (ಕರ್ನಾಟಕ ವಾರ್ತೆ): ಕರ್ನಾಟಕ ವೃತ್ತಿ ತೆರಿಗೆ ಕಾಯ್ದೆ, 1976ರ ಪ್ರಕರಣ 10ರ ಅನ್ವಯ ಎನ್‍ರೋಲ್‍ಮೆಂಟ್ ಪಡೆದ ಪ್ರತಿಯೊಬ್ಬ ವ್ಯಕ್ತಿಯ 2021-22ನೇ ಸಾಲಿಗೆ ಸಂಬಂಧಿಸಿದ ವೃತ್ತಿ ತೆರಿಗೆಯನ್ನು ದಿನಾಂಕ                30-04-2021ರೊಳಗಾಗಿ ಪಾವತಿಸಬೇಕಾಗಿರುತ್ತದೆ. ಹಾಗೆಯೇ, ಪ್ರಕರಣ 6-ಎ ಅನ್ವಯ, ಪ್ರತಿಯೊಬ್ಬ ನೋಂದಾಯಿತ ಉದ್ಯೋಗದಾತನು ಏಪ್ರಿಲ್, 2021ಕ್ಕೆ ಸಂಬಂಧಿಸಿದ ತೆರಿಗೆ ವಿವರಣಾ ಪಟ್ಟಿಯನ್ನು ದಿನಾಂಕ: 20-05-2021ಕ್ಕೆ ಸಲ್ಲಿಸಬೇಕಾಗಿರುತ್ತದೆ.

ಕೋವಿಡ್-19 ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಹರಡುತ್ತಿರುವುದರಿಂದ, ಸರ್ಕಾರವು ವ್ಯಾಪಾರೋದ್ಯಮ ಸಂಸ್ಥೆಗಳ ಚಟುವಟಿಕೆಗಳಿಗೆ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಸಲ್ಲಿಸಿರುವ ಮನವಿಯನ್ನು ಪರಿಗಣಿಸಿ ಸರ್ಕಾರವು ತನ್ನ ಕಾಲಾವಕಾಶದ ಗಡುವನ್ನು ವಿಸ್ತರಿಸಿದೆ.
ಪ್ರಕರಣ 6-ಎ ಅನ್ವಯ ಉದ್ಯೋಗದಾತನು ಏಪ್ರಿಲ್ 2021ನೇ ತಿಂಗಳಿಗೆ ಸಂಬಂಧಿಸಿದ ತೆರಿಗೆ ಮತ್ತು ತೆರಿಗೆ ವಿವರಣಾ ಪಟ್ಟಿಯನ್ನು ಸಲ್ಲಿಸಲು ವಿಸ್ತರಿಸಿದ ಕೊನೆಯ ದಿನಾಂಕ 20-06-2021.
ಪ್ರಕರಣ 10ರ ಅನ್ವಯ ಎನ್‍ರೋಲ್‍ಮೆಂಟ್ ಪಡೆದ ವ್ಯಕತ್ತಿಯು 2021-22ನೆ ಸಾಲಿಗೆ ವೃತ್ತಿ ತೆರಿಗೆ ಮತ್ತು ತೆರಿಗೆ ವಿವರಣಾ ಪಟ್ಟಿ ಪಾವತಿಸಲು ವಿಸ್ತರಿಸಿದ ಕೊನೆಯ ದಿನಾಂಕ 30-05-2021 ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Post a Comment

0 Comments

Ad Code

Responsive Advertisement