ಮಧುಗಿರಿ : ಆರ್ಥಿಕ ಸಂಕಷ್ಟದಲ್ಲಿರುವ ಖಾಸಗಿ ಶಾಲಾ ಶಿಕ್ಷಕರಿಗೆ ನೆರವಾಗಲು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ವಿಶೇಷ ಪ್ಯಾಕೇಜ್ ನೀಡಿ ನೆರವಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ವೈ.ಎ.ನಾರಾಯಣ ಸ್ವಾಮಿ ತಿಳಿಸಿದರು.
ಪಟ್ಟಣದ ಚಿರಕ್ ಪಬ್ಲಿಕ್ ಶಾಲೆಯಲ್ಲಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ ಚಿದಾನಂದ್ ಎಂ.ಗೌಡ ಮತ್ತು ವೈ.ಎ.ಎನ್. ಅಭಿಮಾನಿ ಬಳಗದ ವತಿಯಿಂದ ಆಹಾರ ಕಿಟ್ ವಿತರಿಸಿ ಮಾತನಾಡಿದ ಅವರು, ಖಾಸಗಿ ಶಾಲಾ ಶಿಕ್ಷಕರಿಗೆ ಮುಖ್ಯಮಂತ್ರಿ ಗಳು ಬಜೆಟ್ ನಲ್ಲಿ 5 ಸಾವಿರ ರೂ. ಪ್ಯಾಕೇಜ್ ನೀಡಿದ್ದು, ಇದು ದೇಶದಲ್ಲೇ ಮೊದಲು ಎಂದ ಅವರು, 25 ಸಾವಿರ ರೂ. ನೀಡುವಂತೆ ಸಿ.ಎಂ.ರವರನ್ನು ಒತ್ತಾಯಿಸಿದ್ದೇನೆ ಎಂದರು.
ಶಿಕ್ಷಕರಿಗೆ ಪರಿಹಾರ ಕೊಡಲು ಬಿ.ಇ.ಒ ಗಳು ಕಛೇರಿಗೆ ಅಲೆದಾಡಿಸದೆ ಖಾತೆಗೆ ಜಮೆ ಮಾಡಬೇಕು ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಎಲ್ಲಾ ಶಿಕ್ಷಕರಿಗೆ ಶಿಬಿರ ಏರ್ಪಡಿಸಿ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕೆಂದು ಡಿ.ಡಿ.ಪಿ.ಐ. ಗೆ ಸೂಚಿಸಲಾಗಿದೆ. ಶಿಕ್ಷಕ ಸಮುದಾಯವನ್ನು ಕೊರೋನಾ ವಾರಿಯರ್ಸ್ ಎಂದು ಪರಿಗಣಿಸಿ ಮೃತ ಪಟ್ಟ ಶಿಕ್ಷಕರಿಗೆ 30ಲಕ್ಷ ರೂ. ಪರಿಹಾರ ನೀಡುಬೇಕು ಹಾಗೂ ರಾಜ್ಯದಲ್ಲಿ 3 ಅಲೆ ಶುರುವಾದರೆ ಅನುದಾನ ರಹಿತ ಶಾಲಾ ಶಿಕ್ಷಕರಿಗೆ ತೆಲಂಗಾಣ ಮಾದರಿಯಂತೆ ಪ್ರತಿ ತಿಂಗಳು 2 ಸಾವಿರ ರೂ ಸಹಾಯ ಧನ ಹಾಗೂ 25 ಕೆಜಿ ಅಕ್ಕಿ ವಿತರಿಸಲು ಸರಕಾರವನ್ನು ಒತ್ತಾಯಿಸಿದ್ದೇನೆ ಎಂದರು. ಸಮಾಜದಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದ್ದು ಅವರ ಜೀವದಲ್ಲಿ ಸಂಕಷ್ಟ ಎದುರಾಗಿದೆ ನಿಮ್ಮ ಸಹಾಯಕ್ಕೆ ಸದಾ ಕಾಲ ನಾವುಗಳು ಮತ್ತು ನಮ್ಮ ಸರಕಾರ ಸ್ಪಂದಿಸುತ್ತದೆ ಎಂದ ಅವರು ಎಲ್ಲಾ ಶಿಕ್ಷಕರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ. ಗೌಡ ಮಾತನಾಡಿ, ಖಾಸಗಿ ಶಾಲೆಗಳಿಗೆ ಶಿಕ್ಷಕರೆ ಮುಖ್ಯ ಅಧಾರ ಸ್ತಂಭವಾಗಿದ್ದು, ಅವರನ್ನು ಏಕಾ ಏಕಿ ಕೆಲಸದಿಂದ ತೆಗೆದು ಹಾಕಬಾರದು ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಆಡಳಿತ ಮಂಡಳಿ ಠೇವಣಿಯಾಗಿಟ್ಟಿರುವ ಹಣವನ್ನು ಬಳಸಿಕೊಳ್ಳಬೇಕು. ಕೊರೋನಾ ಅಲೆಯಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ಪೆÇೀಷಕರು ತಮ್ಮ ಮಕ್ಕಳನ್ನು ಸರಕಾರ ಶಾಲೆಗಳಿಗೆ ಸೇರಿಸಬೇಕು, ಸರಕಾರ ಎಲ್ಲಾ ಸೌಲಭ್ಯಗಳನ್ನು ಉಚಿತವಾಗಿ ನೀಡುತ್ತಿದ್ದು, ಗುಣಮಟ್ಟದ ಶಿಕ್ಷಣವೂ ದೊರೆಯುತ್ತಿದೆ ಎಂದ ಅವರು, ಮಧುಗಿರಿ ಪಟ್ಟಣದ ಸರಕಾರಿ ಅಸ್ಪತ್ರೆಗೆ ನನ್ನ ಅನುದಾನದಲ್ಲಿ 23 ಲಕ್ಷ ರೂ. ವೆಚ್ಚದ ಐ.ಸಿ.ಯು ಮೊಬೈಲ್ ಅಂಬ್ಯೂಲೆನ್ಸ್ ನೀಡುತ್ತಿರುವುದಾಗಿ ತಿಳಿಸಿದರು.
ಪತ್ರಕರ್ತರಿಗೆ ಪ್ಯಾಕೇಜ್ ನೀಡಲು ಆಗ್ರಹ -
ಲಾಕ್‍ಡೌನ್ ಹಿನ್ನಲೆಯಲ್ಲಿ ಫ್ರೆಂಟ್ ಲೈನ್ ವಾರಿಯರ್‍ಗಳಾದ ಪತ್ರಕರ್ತರು ಸಹ ಆರ್ಥಿಕ ಸಂಕಷ್ಟದಲ್ಲಿದ್ದು, ಪತ್ರಕರ್ತರಿಗೂ ಸಹ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಒತ್ತಾಯಿಸಲಾಗುವುದು. - ಡಾ.ವೈ.ಎ.ನಾರಾಯಣ್ ಸ್ವಾಮಿ, ವಿಧಾನ ಪರಿಷತ್ ಸದಸ್ಯ.
ಚಿರಕ್ ಶಾಲೆ ಸಂಸ್ಥಾಪಕ ಅಧ್ಯಕ್ಷ ಭಾಸ್ಕರ್ ರೆಡ್ಡಿ, ಬಿ.ಇ.ಒ. ನರಸಿಂಹಯ್ಯ, ಶಿಕ್ಷಣಾಧಿಕಾರಿ ಸಿದ್ದೇಶ್ವರ, ಮಂಡಲ ಬಿ.ಜೆ.ಪಿ. ಅಧ್ಯಕ್ಷ ಪಿ.ಎಲ್.ನರಸಿಂಹಮೂರ್ತಿ, ಪ್ರೌಡಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಂ.ವೆಂಕಟರಾಮು, ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ್, ಎಂ.ಶಿವಲಿಂಗಪ್ಪ, ನರೇಂದ್ರ, ಧನಂಜಯ ಪಟೇಲ್ ಇದ್ದರು.


0 Comments