Ticker

6/recent/ticker-posts

Ad Code

Responsive Advertisement

ಶಿಕ್ಷಕರಿಗೆ ರಜೆ ವಿಸ್ತರಣೆ: ನಾಳೆ ಸಂಜೆಯೊಳಗೆ ಆದೇಶ ಸಾಧ್ಯತೆ

ಜುಲೈ 1ರಿಂದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ಆದರೆ ಶಿಕ್ಷಕರು ಜೂನ್ 15ರಿಂದಲೇ ಶಾಲೆಗೆ ತೆರಳಬೇಕು ಎಂದು ಸೂಚಿಸಲಾಗಿತ್ತು. ಆದರೆ ಇದೀಗ ರಾಜ್ಯದ 11 ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರಿದಿರುವುದರಿಂದ ಮತ್ತು ಬಸ್ ಗಳು ಆರಂಭವಾಗದಿರುವುದರಿಂದ ಶಿಕ್ಷಕರು ಶಾಲೆಗೆ ಹಾಜರಾಗುವ ದಿನವನ್ನು ಮುಂದೂಡಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.ಶಾಲೆಗಳ ಪೂರ್ವ ತಯಾರಿ ಹಿನ್ನೆಲೆಯಲ್ಲಿ ಶಿಕ್ಷಕರು ಜೂನ್ 15ರಿಂದಲೇ ಶಾಲೆಗೆ ತೆರಳಬೇಕೆಂದು ಸೂಚಿಸಲಾಗಿತ್ತು. 

ಈಗ ಲಾಕ್ ಡೌನ್ ಇನ್ನೂ ತೆರವಾಗದಿರುವುದರಿಂದ ಬಸ್ ಗಳು ಆರಂಭವಾಗಿಲ್ಲ. ಹಾಗಾಗಿ ಶಿಕ್ಷಕರು ಇಂದಿನ ಪರಿಸ್ಥಿತಿಯಲ್ಲಿ ಶಾಲೆಗಳಿಗೆ ತೆರಳಲು ಸಾಧ್ಯವಿಲ್ಲ ಎನ್ನುವುದು ಶಿಕ್ಷಣ ಇಲಾಖೆಯ ಗಮನಕ್ಕೆ ಬಂದಿದೆ. ಅಲ್ಲದೆ 11 ಜಿಲ್ಲೆಗಳಲ್ಲಿ ಕೊರೋನಾ ನಿಯಂತ್ರಣಕ್ಕೆ ಬಾರದಿರುವುದರಿಂದ ಲಾಕ್ ಡೌನ್ ವಿಸ್ತರಿಸಲಾಗಿದೆ. ಅಂತಹ ಜಿಲ್ಲೆಗಳಲ್ಲಿ ಶಿಕ್ಷಕರು ಶಾಲೆಗೆ ತೆರಳುವುದು ಸಾಧ್ಯವಿಲ್ಲ. ಶಾಲೆ ಆರಂಭಕ್ಕೆ 2 -3 ದಿನ ಮೊದಲು ಶಿಕ್ಷಕರು ಶಾಲೆಗೆ ಹಾಜರಾಗುವಂತೆ ಹೊಸ ಆದೇಶ ಹೊರಡಿಸುವ ಸಾಧ್ಯತೆ ಇದೆ. ಸಚಿವ ಸುರೇಶ ಕುಮಾರ ಮುಖ್ಯಮಂತ್ರಿ  ಅವರ ಜೊತೆಗೆ ಭಾನುವಾರ ಸಂಜೆ ಇಲ್ಲವೇ ಸೋಮವಾರ ಬೆಳಗ್ಗೆ ಚರ್ಚಿಸಲಿದ್ದಾರೆ. ಶಿಕ್ಷಕರಿಗೂ ಶಾಲೆಗ ಹಾಜರಾಗುವ ದಿನಾಂಕವನ್ನು ಮುಂದೂಡುವ ಅನಿವಾರ್ಯತೆ  ತಿಳಿಸಲಿದ್ದಾರೆ.

Post a Comment

0 Comments

Ad Code

Responsive Advertisement