Ticker

6/recent/ticker-posts

Ad Code

Responsive Advertisement

ಖ್ಯಾತ ನಟಿಯ ಮಗ ಕೊರೋನಾಗೆ ಬಲಿ, ಸಾವು ಬದುಕಿನ ನಡುವೆ ಪತಿಯ ಹೋರಾಟ!


 ಕೊರೋನಾ ಮಹಾಮಾರಿಗೆ ಭಾರತದಲ್ಲಿ 3.80 ಲಕ್ಷ ಜನ  ಬಡವರು, ಶ್ರೀಮಂತರು ಎನ್ನದಂತೆ ಸೋಂಕಿಗೆ ಬಲಿಯಾಗಿದ್ದಾರೆ. ಕೊವಿಡ್‌ಗೆ  ಸ್ಯಾಂಡಲ್‌ವುಡ್, ಬಾಲಿವುಡ್, ಟಾಲಿವುಡ್, ಕಾಲಿವುಡ್ ಸೇರಿದಂತೆ ಭಾರತದ ಎಲ್ಲ ಚಿತ್ರರಂಗಗಳಲ್ಲೂ ಸೆಲೆಬ್ರಿಟಿಗಳು, ಅವರ ಕುಟುಂಬದವರು ಬಲಿಯಾಗಿದ್ದಾರೆ. ಸದ್ಯ ಈ ಮಹಾಮಾರಿಯಿಂದ ತನ್ನ ಪುತ್ರನನ್ನು ಕಳೆದುಕೊಂಡಿರುವ ದಕ್ಷಿಣ ಭಾರತದ ಖ್ಯಾತ ನಟಿಯೊಬ್ಬರು, ತಮ್ಮ ಪತಿಯನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ.

 ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಬರೋಬ್ಬರಿ 350ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಖ್ಯಾತಿ ನಟಿ ಕವಿತಾ. ಅವರೇ ಈಗ ದುಃಖದ ಮಡುವಿನಲ್ಲಿದ್ದಾರೆ. ಅದಕ್ಕೆ ಕಾರಣ ಕೊರೋನಾ ಸೋಂಕು. ಕಳೆದ ಕೆಲ ದಿನಗಳಿಂದ ಹಿರಿಯ ನಟಿ ಕವಿತಾ ಅವರ ಪುತ್ರ ಸಂಜಯ್ ರೂಪ್ ಅವರು ಕೊರೊನಾ ಸೋಂಕಿನಿಂದ ಬಳಲುತ್ತಿದ್ದರು.

ಆರೋಗ್ಯದಲ್ಲಿ ಹೆಚ್ಚು ವ್ಯತ್ಯಾಸವಿಲ್ಲದ ಕಾರಣ ಮನೆಯಲ್ಲೇ ಐಸೊಲೇಷನ್‌ನಲ್ಲಿ ಇದ್ದುಕೊಂಡೇ, ಔಷಧಿ ತೆಗೆದುಕೊಳ್ಳುತ್ತಿದ್ದರು. ಆದರೆ ಹಠಾತ್ತಾಗಿ ಮೊನ್ನೆ ಅವರ ಆರೋಗ್ಯದಲ್ಲಿ ತೀವ್ರ ಏರುಪೇರಾಗಿದೆ. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಕವಿತಾ ಅವರ ಮಗ ಸಂಜಯ್ ರೂಪ್ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ಇನ್ನು ಕವಿತಾ ಅವರ ಪತಿ ದಶರಥ ರಾಜ್ ಅವರಿಗೂ ಕೊರೊನಾ ಸೋಂಕು ತಗುಲಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

1976ರಲ್ಲಿ ತಮಿಳಿನ ಓಹ್ ಮಂಜು ಹಾಗೂ ತೆಲುಗಿನ ಸಿರಿ ಸಿರಿ ಮುವ್ವ ಚಿತ್ರಗಳ ಮೂಲಕ ತಮ್ಮ ಹನ್ನೊಂದನೇ ವಯಸ್ಸಿನಲ್ಲಿಯೇ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದವರು ನಟಿ ಕವಿತಾ. ಆ ಬಳಿಕ ಅವರು ಹಿಂದಿರುಗಿ ನೋಡಲಿಲ್ಲ. 1977ರಲ್ಲಿ ಸಹೋದರರ ಸವಾಲ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅವರು 1978ರಲ್ಲಿ ಆನಯುಮ್ ಅಂಬಾರಿಯುಮ್ ಸಿನಿಮಾ ಮೂಲಕ ಮಲಯಾಳಂ ಚಿತ್ರರಂಗಕ್ಕೂ ಪಾದಾರ್ಪಣೆ ಮಾಡಿದರು.

ಕನ್ನಡದಲ್ಲಿ ಕಿಲಾಡಿ ಕಿಟ್ಟು, ಪುಟ್ನಂಜ, ಸೂಪರ್ ಸ್ಟಾರ್, ಎಚ್​2ಓ, ಭೂತಯ್ಯನ ಮಕ್ಕಳು, ಚಂದ್ರ ಚಕೋರಿ ಸೇರಿದಂತೆ 29 ಸಿನಿಮಾಗಳಲ್ಲಿ ನಟಿಸಿದ್ದಾರೆ. 2009ರಲ್ಲಿ ತೆರೆಗೆ ಬಂದ ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿದ್ದ ಉಲ್ಲಾಸ ಉತ್ಸಾಹ ಚಿತ್ರ ಹಿರಿಯ ನಟಿ ಕವಿತಾ ನಟಿಸಿದ ಕೊನೆಯ ಸಿನಿಮಾ. ಹೀಗೆ 45 ವರ್ಷಗಳ ಸುದೀರ್ಘ ಸಿನಿಪಯಣದಲ್ಲಿ ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದ ಕವಿತಾ ಅವರು ನಂತರ ನಾಯಕಿಯಾಗಿ ಹಾಗೂ ಆ ಬಳಿಕ ಪೋಷಕ ನಟಿಯಾಗಿ ನಟಿಸುತ್ತಲೇ ಬಂದಿದ್ದಾರೆ. ಸಿನಿಮಾ ಮಾತ್ರವಲ್ಲ ಕಿರುತೆರೆಯ ಕೆಲ ಧಾರಾವಾಹಿಗಳಲ್ಲೂ ನಟಿಸಿದ್ದಾರೆ.

Post a Comment

0 Comments

Ad Code

Responsive Advertisement