Ticker

6/recent/ticker-posts

Ad Code

Responsive Advertisement

ಇಪಿಎಲ್‍ನ ಸುಸ್ಥಿರ ಪರಿಹಾರಗಳಿಗೆ ಯುನಿಲಿವರ್‍ನಿಂದ ಸ್ವೀಕೃತಿ ಲಭಿಸಿದೆ

ಇಪಿಎಲ್ ಲಿಮಿಟೆಡ್ (ಈ ಹಿಂದೆ ಎಸ್ಸೆಲ್ ಪ್ರೊಪ್ಯಾಕ್ ಲಿಮಿಟೆಡ್ ಎಂಬ ಹೆಸರು ಹೊಂದಿತ್ತು.) ಜಗತ್ತಿನ ಅತ್ಯಂತ ದೊಡ್ಡದಾದ ವಿಶೇಷತೆಯ ಪ್ಯಾಕೇಜಿಂಗ್ ಕಂಪನಿ ಆಗಿದ್ದು, ಈಗ ಬಾಯಿ ಆರೈಕೆಯ ಕ್ಷೇತ್ರದಲ್ಲಿ ಶೇ.100ರಷ್ಟು ಸುಸ್ಥಿರತೆ ಸಾಧಿಸುವ ಅವರ ಪ್ರಯಾಣದಲ್ಲಿ ಯುನಿಲಿವರ್‍ನೊಂದಿಗೆ ಪಾಲುದಾರರಾಗಿ ತಾವು ಆಯ್ಕೆಯಾಗಿರುವುದನ್ನು ಪ್ರಕಟಿಸಿದೆ. ಯುನಿಲಿವರ್‍ನ ಟೂತ್‍ಪೇಸ್ಟ್ ವರ್ಗಕ್ಕೆ ಶೇ.100ರಷ್ಟು ಪುನರ್‍ಬಳಕೆ ಮಾಡಬಹುದಾದ ಮತ್ತು ಸಂಪೂರ್ಣ ಸುಸ್ಥಿರವಾದ ಹಾಗೂ ಎಪಿಆರ್ ಒಪ್ಪಿಗೆ ಪಡೆದಿರುವ ಪ್ಲಾಟಿನಾ ಟ್ಯೂಬ್‍ಗಳನ್ನು ಇಪಿಎಲ್ ಪೂರೈಸಲಿದೆ.

ಎಚ್‍ಡಿಪಿಇ ಕ್ಲೋಸರ್ ಜೊತೆಗಿನ ಇಪಿಎಲ್ ಪ್ಲಾಟಿನಾ ಟ್ಯೂಬ್ ಜಗತ್ತಿನ ಮೊದಲ ಸಂಪೂರ್ಣ ಸುಸ್ಥಿರ ಮತ್ತು ಸಂಪೂರ್ಣ ಪುನರ್ ಬಳಕೆ ಮಾಡಬಹುದಾದ ಟ್ಯೂಬ್ ಆಗಿದ್ದು, ಇದು ಎಪಿಆರ್‍ನಿಂದ ಮಾನ್ಯತೆ ಪಡೆದಿರುತ್ತದೆ. ಈ ಪಾಲುದಾರಿಕೆಯು ಯುನಿಲಿವರ್‍ನ ಬಾಯಿ ಆರೈಕೆಯ ಬ್ರಾಂಡ್‍ಗಳಾದ ಸಿಗ್ನಲ್, ಪೆಪ್ಸೊಡೆಂಟ್ ಮತ್ತು ಕ್ಲೋಸಪ್‍ಗಳು 2025ರ ಹೊತ್ತಿಗೆ ಶೇ.100ರಷ್ಟು ಪುನರ್ ಬಳಕೆಗೆ ಸಿದ್ಧವಾಗುವಂತೆ ಮಾಡಲಿದೆ.

ಪಾಲುದಾರಿಕೆ ಕುರಿತು ಇಪಿಎಲ್ ಲಿಮಿಟೆಡ್‍ನ ಮುಖ್ಯ ಕಾರ್ಯಾಚರಣೆ ಅಧಿಕಾರಿ ರಾಮ್ ರಾಮಸ್ವಾಮಿ ಅವರು ಮಾತನಾಡಿ, ``ಬಾಯಿ ಆರೈಕೆಯ ಶ್ರೇಣಿಯಲ್ಲಿ ತಮ್ಮ ಸುಸ್ಥಿರತೆಯ ಉಪಕ್ರಮಗಳನ್ನು ಮತ್ತಷ್ಟು ಮುಂದುವರಿಸಲು ಯುನಿಲಿವರ್‍ನೊಂದಿಗೆ ಸಹಯೋಗ ಹೊಂದಲು ಇಪಿಎಲ್ ಹೆಮ್ಮೆ ಪಡುತ್ತದೆ. ಪ್ಯಾಕೇಜಿಂಗ್‍ನಲ್ಲಿ ನವೀನತೆಯ ಮೂಲಕ ಜವಾಬ್ದಾರಿಯುತ ಬಳಕೆಗೆ ಸ್ಫೂರ್ತಿ ನೀಡಲು ಮತ್ತು ಅದಕ್ಕೆ ಅವಕಾಶ ಮಾಡಿಕೊಡಲು ನಾವು ಬದ್ಧತೆ ಹೊಂದಿದ್ದೇವೆ. ಇಪಿಎಲ್‍ನ ಪ್ಲಾಟಿನಾ ಪರಿಸರ ಸ್ನೇಹಿ ಲ್ಯಾಮಿನೇಟೆಡ್ ಟ್ಯೂಬ್ ಆಗಿದ್ದು, ಶೇ.5ಕ್ಕೂ ಕಡಿಮೆ ಪ್ರಮಾಣದ ಬ್ಯಾರಿಯರ್ ರೆಸೀನ್ ಜೊತೆಗೆ ತಯಾರಿಸಲಾಗಿದೆ. ಮೂಲ ವಸ್ತುಗಳಲ್ಲಿ ಇಳಿಕೆ ಮತ್ತು ಪುನರ್ ಬಳಕೆಗೆ ಅವಕಾಶ ಮಾಡಿಕೊಡುವಂತೆ ಜೊತೆಗೆ ಯಾವುದೇ ಬ್ಯಾರಿಯರ್ ಲಕ್ಷಣಗಳ ನಷ್ಟ ಆಗದಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಬಾಯಿ ಸಂಬಂಧಿ ಮತ್ತು ಸೌಂದರ್ಯ ಹಾಗೂ ಸೌಂದರ್ಯ ವರ್ಧಕ ಉತ್ಪನ್ನಗಳ ಬ್ರಾಂಡ್‍ಗಳಿಗೆ ಪ್ಲಾಟಿನಾ ಟ್ಯೂಬ್ ವಿಶೇಷವಾಗಿ ಸೂಕ್ತವಾಗಿರುತ್ತದೆ’’ ಎಂದರು.

ಆಫ್ರಿಕಾ, ಮಧ್ಯಪೂರ್ವ ಮತ್ತು ದಕ್ಷಿಣ ಏಷ್ಯಾ ಪ್ರದೇಶಗಳ ಇಪಿಎಲ್ ಲಿಮಿಟೆಡ್‍ನ ಪ್ರಾದೇಶಿಕ ಉಪಾಧ್ಯಕ್ಷರಾದ ದೀಪಕ್ ಗಂಜೂ ಅವರು ಮಾತನಾಡಿ, ``ಪರಿಸರದ ಮೇಲೆ ಸಕಾರಾತ್ಮಕ ಪರಿಣಾಮ ಉಂಟುಮಾಡುವ ಕಾರ್ಯದಲ್ಲಿ ಜಗತ್ತಿನ ಅತ್ಯಂತ ಪ್ರತಿಷ್ಟಾತ್ಮಕ ಬ್ರಾಂಡ್‍ಗಳಲ್ಲಿ ಒಂದರೊಂದಿಗೆ ಪಾಲುದಾರಿಕೆ ಮಾಡಿಕೊಳ್ಳಲು ಇಪಿಎಲ್ ಹೆಮ್ಮೆಪಡುತ್ತದೆ. ಇಪಿಎಲ್‍ನಲ್ಲಿ ಸುಸ್ಥಿರತೆ ಕ್ಷೇತ್ರವು ಅತ್ಯಂತ ಪ್ರಮುಖವಾಗಿ ಗಮನ ನೀಡಲಾಗುವ ಕ್ಷೇತ್ರವಾಗಿದೆ. ಎಲ್ಲಾ ಜವಾಬ್ದಾರಿಯುತ ಬ್ರಾಂಡ್‍ಗಳು ಇದೇ ರೀತಿಯ ನಿಟ್ಟಿನಲ್ಲಿ ಸಾಗುತ್ತಿರುವುದನ್ನು ನಾವು ಕಂಡಿದ್ದೇವೆ. ಸುಸ್ಥಿರ ಅಭಿವೃದ್ದಿ ಕಡೆಗೆ ಕೊಡುಗೆ ನೀಡುವಲ್ಲಿ ಅಲ್ಲದೆ, ಈ ಮಾರ್ಗದಲ್ಲಿ ಬ್ರಾಂಡ್‍ಗಳಿಗೆ ನೆರವು ನೀಡುವಲ್ಲಿ ಇಪಿಎಲ್‍ನಂತಹ ಮಾರುಕಟ್ಟೆಯ ಮುಂಚೂಣಿಯ ಸಂಸ್ಥೆಗಳು ಗಮನಾರ್ಹ ಪಾತ್ರ ಹೊಂದಿವೆ’’ ಎಂದರು.

ತಮ್ಮ ಅತ್ಯಂತ ದೊಡ್ಡ ಪ್ರಮಾಣದ ಬಾಯಿ ಆರೈಕೆ ಕ್ಷೇತ್ರದ ಮಾರುಕಟ್ಟೆಗಳಾದ ಫ್ರಾನ್ಸ್ ಮತ್ತು ಭಾರತಗಳಲ್ಲಿ, ಯುನಿಲಿವರ್ ಇದೇ ವರ್ಷ ಕೆಲ ಸಮಯದ ನಂತರ ಸಂಪೂರ್ಣವಾಗಿ ಪುನರ್ ಬಳಕೆಯಾಗಬಹುದಾದ ಟ್ಯೂಬ್‍ಗಳನ್ನು ಬಿಡುಗಡೆ ಮಾಡಲಿದೆ.


Post a Comment

0 Comments

Ad Code

Responsive Advertisement