ಮಧುಗಿರಿ:ತಾಲೂಕಿನ ಪುರವರ ಹೋಬಳಿಯ ಪುರವರ ಪಂಚಾಯತಿಯ ಅವರಣದಲ್ಲಿ ಸಾರ್ವಜನಿಕರಿಗೆ ವ್ಯಾಕ್ಸಿನೇಷನ್ ಹಾಕಲಾಯಿತು. ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಆಶಾ, ಹೆಲ್ತ್ ಇನ್ಸ್ಪೆಕ್ಟರ್ ಮಹೇಶ್ವರಿ, ರವಿ, ರವರು 18 ವರ್ಷ ಮೇಲ್ಪಟ್ಟವರು ಹಾಗೂ 45 ವರ್ಷ ಮೇಲ್ಪಟ್ಟ ಎಲ್ಲರೂ ಭಯಪಡದೆ ವ್ಯಾಕ್ಸಿನೇಷನ್ ನನ್ನು ಪಡೆದುಕೊಳ್ಳಿ ಎಂದು ತಿಳಿಸಿದರು. ಈಗಾಗಲೇ ತಜ್ಞರು ಮೂರನೆಯ ಬಗ್ಗೆ ತಿಳಿಸಿದ್ದಾರೆ ಆದ್ದರಿಂದ ನಾವೆಲ್ಲರೂ ಎಚ್ಚೆತ್ತುಕೊಂಡು ವ್ಯಾಕ್ಸಿನೇಷನ್ ನನ್ನು ಪಡೆಯಬೇಕು ಹಾಗೆ ಮಾಸ್ಕ್ ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು ಆಗ ಮಾತ್ರ ಕೋವಿಡ್ ನಿಂದ ನಾವು ಗೆಲ್ಲಬಹುದು ಎಂದರು. ಈ ಸಮಯದಲ್ಲಿ ತೆಗ್ಗಿಹಳ್ಳಿ ಶ್ರೀರಾಮಕೃಷ್ಣ ಆಶ್ರಮದ ಶ್ರೀ ರಾಮಾನಂದ ಸ್ವಾಮೀಜಿಯವರು ಕೂಡ ವ್ಯಾಕ್ಸಿನೇಷನ್ ಅನ್ನು ಹಾಕಿಸಿ ಕೊಂಡರು.
ಈ ಸಂದರ್ಭದಲ್ಲಿ ಗ್ರಾ.ಪಂ. ಕಾರ್ಯದರ್ಶಿ ಪುಂಡಲಿಕ ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು ಪಂಚಾಯತಿಯ ಸದಸ್ಯರುಗಳು, ಗ್ರಾಪಂ ಸಿಬ್ಬಂದಿಗಳು ಮತ್ತಿತರಿದ್ದರು.



0 Comments