Ticker

6/recent/ticker-posts

Ad Code

Responsive Advertisement

ಡೆಲ್ಟಾ ರೂಪಾಂತರಿ ಪ್ರಬಲ ವಂಶಾವಳಿಯಾಗುವ ಸಾಧ್ಯತೆ: ವಿಶ್ವ ಆರೋಗ್ಯ ಸಂಸ್ಥೆ


 ವಿಶ್ವ ಆರೋಗ್ಯ ಸಂಸ್ಥೆಯು ಜೂನ್ 22 ರಂದು ಬಿಡುಗಡೆ ಮಾಡಿದ ಕೋವಿಡ್ 19 ವರದಿ ಪ್ರಕಾರ, ಜಾಗತಿಕವಾಗಿ 170 ದೇಶಗಳಲ್ಲಿ ಆಲ್ಫಾ, 119 ದೇಶಗಳಲ್ಲಿ ಬೀಟಾ, 71 ದೇಶಗಳಲ್ಲಿ ಗಾಮಾ ಹಾಗೂ 85 ದೇಶಗಳಲ್ಲಿ ಡೆಲ್ಟಾ ರೂಪಾಂತರಿ ಪತ್ತೆಯಾಗಿದೆ. 

ಡೆಲ್ಟಾ ರೂಪಾಂತರಿ ಸೋಂಕು 89 ದೇಶಗಳಲ್ಲಿ ಪತ್ತೆಯಾಗಿದ್ದು, ಪ್ರಬಲ ವಂಶಾವಳಿಯಾಗುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಜಗತ್ತಿನಾದ್ಯಾಂತ ವಿಸ್ತರಣೆಯಾಗುತ್ತಿರುವ ಡೆಲ್ಟಾ ರೂಪಾಂತರಿ ಪ್ರಬಲ ವಂಶಾವಳಿಯಾಗುವ ಸಾಧ್ಯತೆ ಇದ್ದು, ವಿಶ್ವದ ಮತ್ತಷ್ಟು ರಾಷ್ಟ್ರಗಳಿಗೆ ಹರಡಬಹುದು ಎಂದು ಹೇಳಲಾಗಿದೆ. 

ಪ್ರಸ್ತುತ ಡೆಲ್ಟಾ ತಳಿಯು ವೇಗವಾಗಿ ಹರಡುತ್ತಿದ್ದು, ಕಳೆದ ಎರಡು ವಾರಗಳಲ್ಲಿ 11 ದೇಶಗಳಲ್ಲಿ ಹೊಸದಾಗಿ ಪತ್ತೆಯಾಗಿದೆ, ಅಲ್ಲದೆ ಇನ್ನಷ್ಟು ದೇಶಗಳಲ್ಲಿ ಅದು ವ್ಯಾಪಿಸುವ ಸಾಧ್ಯತೆ ಇದೆ. 

ಆಲ್ಫಾ, ಬೀಟಾ, ಗಾಮಾ, ಡೆಲ್ಟಾ ರೂಪಾಂತರಿ ತಳಿಗಳ ಹರಡುವಿಕೆಗೆ ಸಂಬಂಧಿಸಿದಂತೆ ನಿಕಟವಾಗಿ ಮೇಲ್ವಿಚಾರಣೆ ವಹಿಸಲಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಕೋವಿಡ್ 19 ಸೋಂಕಿನ ರೂಪಾಂತರಿ ಡೆಲ್ಟಾ ಪ್ಲಸ್ ಸೋಂಕು ತಾಗಿದ್ದ ಮಹಿಳೆ ಬುಧವಾರ ಕೊನೆಯುಸಿರೆಳೆದಿದ್ದಾರೆ. ಮಧ್ಯಪ್ರದೇಶದಲ್ಲಿ ಇದುವರೆಗೆ ಐದು ಡೆಲ್ಟಾ ಪ್ಲಸ್ ಪ್ರಕರಣಗಳು ವರದಿಯಾಗಿವೆ, ಇದರಲ್ಲಿ ಮೂರು ಪ್ರಕರಣಗಳು ಭೋಪಾಲ್‌ನಲ್ಲಿ ಪತ್ತೆಯಾಗಿದ್ದರೆ ಎರಡು ಪ್ರಕರಣಗಳು ಉಜ್ಜಯಿನಿಯಲ್ಲಿ ದೃಢಪಟ್ಟಿದೆ.

ಡೆಲ್ಟಾ ಪ್ಲಸ್ ಸೋಂಕಿನಿಂದ ಮೃತಪಟ್ಟ ಮಹಿಳೆಯ ಪತಿಗೆ ಮೊದಲು ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು, ಬಳಿಕ ಮಹಿಳೆಗೆ ಸೋಂಕು ತಾಗಿದೆ, ಮಹಿಳೆಯ ಪತಿ ಈಗಾಗಲೇ ಎರಡು ಡೋಸ್ ಲಸಿಕೆ ಪಡೆದಿದ್ದಾರೆ, ಆದರೆ ಮಹಿಳೆ ಇದುವರೆಗೂ ಲಸಿಕೆ ಪಡೆದಿಲ್ಲ.

Post a Comment

0 Comments

Ad Code

Responsive Advertisement