Ticker

6/recent/ticker-posts

Ad Code

Responsive Advertisement

ಬಡವರಿಗೆ ಅನ್ನ ,ವಸತಿ ,ಆರೋಗ್ಯ ಮತ್ತು ಉದ್ಯೋಗ ಒದಗಿಸುವುದು ನಮ್ಮ ಸಂಕಲ್ಪ- ಸಚಿವ ವಿ.ಸೋಮಣ್ಣ


ವಿ.ಸೋಮಣ್ಣರವರು ಜನ ಮತ್ತು ದೇವರು ಮೆಚ್ಚುವ ಕೆಲಸ ಮಾಡುತ್ತಿದ್ದಾರೆ-ಬಸವರಾಜ್ ಬೊಮ್ಮಯಿ 

ಗೋವಿಂದರಾಜನಗರ ವಿಧಾನಸಭಾ ನೂತನ ಪೂಲೀಸ್ ಠಾಣೆ ಮತ್ತು ಮಾರೇನಹಳ್ಳಿ 80ಬೆಡ್ ಐ.ಸಿ.ಯು.ಆಸ್ಪತ್ರೆ ಶೀಘ್ರದಲ್ಲಿ ಉದ್ಘಾಟನೆ

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ  ಗೋವಿಂದರಾಜ ನಗರ ವಾರ್ಡ್ನನಲ್ಲಿ   ಬಡವರು ,ಬೀದಿ ಬದಿಯ ವ್ಯಾಪಾರಿಗಳು , ಆರ್ಥಿಕವಾಗಿ ಹಿಂದುಳಿದವರಿಗೆ ಮತ್ತು ವಿಕಲಚೇತನರಿಗೆ ಆಹಾರ ಕಿಟ್ ವಿತರಣೆಯನ್ನು ವಸತಿ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ  ವಿ ಸೋಮಣ್ಣರವರು ಮತ್ತು ಗೃಹ ಸಚಿವರಾದ ಬಸವರಾಜ್ ಬೊಮ್ಮಾಯಿರವರು ಹಾಗೂ ರಾಜ್ಯ ಬಿ.ಜೆ.ಪಿ.ಯುವ ಮುಖಂಡರಾದ ಡಾ||ಅರುಣ್ ಸೋಮಣ್ಣ ಮತ್ತು ನಿಕಟಪೂರ್ವ ಪಾಲಿಕೆ ಸದಸ್ಯರುಗಳಾದ ಕೆ.ಉಮೇಶ್ ಶೆಟ್ಟಿ ,ದಾಸೇಗೌಡ ,ಶ್ರೀಮತಿ ಶಂಕುತಲ ಡೊಡ್ಡಲಕ್ಕಪ್ಪ, ಜಯರತ್ನ ,ಪಲ್ಲವಿ ಚನ್ನಪ್ಪ  ಗೋವಿಂದರಾಜನಗರ ಬಿ.ಜೆ.ಪಿ.ಮಂಡಲ ಅಧ್ಯಕ್ಷರಾದ ವಿಶ್ವನಾಥಗೌಡರು ಹಾಗೂ ಕೊಳಚೆ ನಿರ್ಮೂಲನ ಮಂಡಳಿ ನಿರ್ದೇಶಕ ಕ್ರಾಂತಿರಾಜು ರವರು ಪಾಲ್ಗೊಂಡಿದ್ದರು.



ವಸತಿ ಸಚಿವರಾದ ವಿ.ಸೋಮಣ್ಣರವರು ಮಾತನಾಡಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ 9ವಾರ್ಡ್ಗಗಳಲ್ಲಿ ಆರ್ಥಿಕವಾಗಿ ಹಿಂದುಳಿದರಿಗೆ ಆಹಾರ ಕಿಟ್ ವಿತರಿಸಲಾಗುತ್ತಿದೆ. ಸೋನ ಮಸೂರಿ ಅಕ್ಕಿ ,ಎಣ್ಣೆ ಬೇಳೆ ಮತ್ತು ಸಾಂಬಾರ್ ಪದಾರ್ಥ ,ಸಕ್ಕರೆ ಗೋಧಿ ಉಪ್ಪು ಇನ್ನಿತರೆ ಆಹಾರ ಪದಾರ್ಥಗಳು ನೀಡಲಾಗುತ್ತಿದೆ.

ಬಡವರಿಗೆ ಅನ್ನ ,ವಸತಿ ಮತ್ತು ಆರೋಗ್ಯ ,ಉದ್ಯೋಗವನ್ನು ಎಲ್ಲರಿಗೂ ಕಲ್ಪಿಸಬೇಕು ಎಂಬುದು ನನ್ನ ಗುರಿ .

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಇನ್ನ 15ದಿನದಲ್ಲಿ ನೂತನ ಪೂಲೀಸ್ ರಾಣೆ ಆರಂಭಿಸಲಾಗುವುದು ಮತ್ತು ಮಾರೇನಹಳ್ಳಿ ವಾರ್ಡ್ನನಲ್ಲಿ ಕೊವಿಡ್ ಸೋಂಕಿತರಿಗೆ 80ಬೆಡ್ ಆಸ್ಪತ್ರೆ ಅತಿ ಶೀಘ್ರದಲ್ಲಿ ಲೋಕರ್ಪಣೆಯಾಗಲಿದೆ.

ಕೊವಿಡ್-19 ನಿಯಂತ್ರಣದಲ್ಲಿ ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಮತ್ತು ಕೊವಿಡ್ ಲಸಿಕೆ ಹಾಕಿಸಿಕೊಳ್ಳಿ ಮಾನ್ಯ ಪ್ರಧಾನ ಮಂತ್ರಿ ನರೇಂದ್ರಮೋದಿರವರು ನವಂಬರ್ ವರಗೆ 80ಕೋಟಿ ಬಿ.ಪಿ.ಎಲ್.ಕಾರ್ಡ್ ದಾರರಿಗೆ ಉಚಿತವಾಗಿ ಅಕ್ಕಿ ನೀಡಲಿದ್ದಾರೆ ಎಂದು ಹೇಳಿದರು.

ಬಸವರಾಜ್ ಬೊಮ್ಮಾಯಿರವರು ಮಾತನಾಡಿ ರಾಜ್ಯದಲ್ಲಿ  ಸರ್ಕಾರ ದ ದಿಟ್ಟ ಕ್ರಮದಿಂದ ಕೊವಿಡ್-19ಸೋಂಕು ನಿಯಂತ್ರಣದಲ್ಲಿ ಇದೆ . ಕೊವಿಡ್ ಮೂರನೇಯ ಅಲೆ ತಡೆಗಟ್ಟಲು 24ಸಾವಿರ ಆಕ್ಸಿಜನ್ ಬೆಡ್ ವ್ಯವಸ್ಥೆ ಹಾಗೂ 5ಸಾವಿರ ವೆಂಟಿಲೇಟರ್ ಬೆಡ್ ವ್ಯವಸ್ಥೆ ಮಾಡಲಾಗಿದೆ.

ವಸತಿ ಸಚಿವರಾದ ವಿ.ಸೋಮಣ್ಣ ರವರು ಬಡಜನರಿಗೆ ನೆರವಾಗಲು ಆಹಾರ ಕಿಟ್ ವಿತರಣೆ ಮತ್ತು ಕೊವಿಡ್ ಉಸ್ತುವಾರಿಯಲ್ಲಿ ಸಾಂಕ್ರಮಿಕ ರೋಗ ನಿಯಂತ್ರಣ ಮಾಡಲು ಯಶ್ವಸಿಯಾಗಿದ್ದಾರೆ . ವಿ.ಸೋಮಣ್ಣರವರು ಜನ ಮತ್ತು ದೇವರು ಮೆಚ್ಚುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.


ಇದನ್ನೂ ಓದಿ...!

53 ಶಾಸಕರ ಅಭಿಮತ ಸಂಗ್ರಹಿಸಿದ ಅರುಣ್‌ ಸಿಂಗ್‌  

https://www.varthajala.live/2021/06/53.html

Post a Comment

0 Comments

Ad Code

Responsive Advertisement