Ticker

6/recent/ticker-posts

Ad Code

Responsive Advertisement

ಉತ್ತಮ ಗುಣಮಟ್ಟವಿಲ್ಲದ ಔಷಧಿಗಳ ಮಾರಾಟ ನಿಷೇಧ


ಬೆಂಗಳೂರು, ಜೂನ್ 16, (ಕರ್ನಾಟಕ ವಾರ್ತೆ) :ಸರ್ಕಾರಿ ವಿಶ್ಲೇಷಕರು, ಕರ್ನಾಟಕ ಔಷಧ ಪರೀಕ್ಷಾ ಪ್ರಯೋಗಾಲಯ, ಇವರು ಕೂಲ್ 24 (ಪ್ಯಾಂಟೋಪ್ರಜೋಲ್ ಗ್ಯಾಸ್ಟ್ರೋ-ರಿಸಿಸ್ಟೆಂಟ್ ಟ್ಯಾಬ್ಲೆಟ್ಸ್ ಐ.ಪಿ), ಟ್ರೋಯ್‍ಪಾಡ್ಡ್ರೈ ಸಿರಪ್ (ಸೆಪೋಡ್ಯಾಕ್ಸಿಮ್ ಪ್ರೋಕ್ಸಿಟಿಲ್‍ಓರಲ್ ಸಶ್‍ಪೆನ್‍ಶನ್ ಐ.ಪಿ) ಟ್ವೀಟ್ ಕಾಲ್-500 (ಕ್ಯಾಲ್‍ಷಿಯಂ, ಮೆಗ್ನೀಷಿಯಂ, ಜಿಂಕ್ & ವಿಟಮಿನ್ ಡಿ3 ಟ್ಯಾಬ್ಲೆಟ್ಸ್), ಟ್ರೂಎಸ್-ಸ್ಪಾಸ್ (ಅಸೆಕ್ಲೋಫೆನಕ್ & ಡ್ರೋಟವೆರಿನ್ ಹೈಡ್ರೋಕ್ಲೋರೈಡ್ ಟ್ಯಾಬ್ಲೆಟ್ಸ್), ಎಡೋಕ್ಲೋಪ್-ಪಿ (ಅಸೇಕ್ಲೋಫೆನಕ್& ಪ್ಯಾರಸೆಟಮೋಲ್ ಟ್ಯಾಬ್ಲೆಟ್ಸ್) ರ್ಯಾಬ್‍ವೆಬ್-ಡಿಎಸ್‍ಆರ್ (ರ್ಯಾಬಪ್ರಜೋಲ್ ಸೋಡಿಯಂಗ್ಯಾಸ್ಟ್ರೋ-ರಿಸಿಸ್ಟೆಂಟ್ ಅಂಡ್‍ಡೋಮ್‍ಫೆರಿಡನ್ ಪ್ರೋಲಾಂಗಡ್‍ರೀಲಿಸ್ ಕ್ಯಾಪ್ಸೂಲ್ಸ್), ಎರಿಥ್ರೋಮೈಸಿನ್ ಸ್ಟಿರೆಟ್ ಟ್ಯಾಬ್ಲೆಟ್ಸ್ ಐ.ಪಿ 500 ಎಮ್‍ಜಿ (ಎರಾಕ್ಸಿಡ್-500), ಅಮೋಕ್ಸಿಸಿಲಿನ್ ಕ್ಲವುಲಾನಿಕ್ ಆಸಿಡ್ ವಿಥ್ ಲ್ಯಾಕ್‍ಟಿಕ್ ಆಸಿಡ್ ಬ್ಯಾಸಿಲಸ್ ಟ್ಯಾಬ್ಲೆಟ್ಸ್ (ಓರಿಕ್ಲೇವ್-625 ಎಲ್‍ಬಿ), ಪ್ಯಾರಸೆಟಮೋಲ್ ಇನ್‍ಪೂಶನ್ ಐಪಿ (1.0%  w/v) ಕ್ರಿಟ್‍ಪಾರ್, ರೊಲ್ಡ್ ಬ್ಯಾಂಡೇಜ್ ಶಡ್ಯೂಲ್‍ಏಪ್ ಈ ಔಷಧಿಗಳನ್ನು ಕಾಂತಿವರ್ಧಕ, ಉತ್ತಮ ಗುಣಮಟ್ಟದಲ್ಲವೆಂದು ಔಷಧ ನಿಯಂತ್ರಕರು ಘೋಷಿಸಿದ್ದಾರೆ.

ಈ ಔಷಧಿಗಳನ್ನು ಕಾಂತಿವರ್ಧಕ ಔಷಧ ವ್ಯಾಪಾರಿಗಳು, ಸಗಟು ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್ ಹೋಂನವರು ದಾಸ್ತಾನು ಮಾಡುವುದಾಗಲೀ, ಮಾರಾಟ ಮಾಡುವುದಾಗಲೀ ಅಥವಾ ಉಪಯೋಗಿಸುವುದಾಗಲೀ ಮಾಡಬಾರದು ಅಲ್ಲದೇ, ಔಷಧಿಗಳ ದಾಸ್ತಾನನ್ನು ಹೊಂದಿದ್ದಲ್ಲಿ ಸಂಬಂಧಪಟ್ಟ ಕ್ಷೇತ್ರದ ಔಷಧ ಪರಿವೀಕ್ಷಕರು/ಸಹಾಯಕ ಔಷಧ ನಿಯಂತ್ರಕರ ಗಮನಕ್ಕೆ ತರಬಹುದೆಂದು ಔಷಧ ನಿಯಂತ್ರಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0 Comments

Ad Code

Responsive Advertisement