Ticker

6/recent/ticker-posts

Ad Code

Responsive Advertisement

ಟಿವಿಎಸ್ ಎಕ್ಸ್‍ಎಲ್100 i-TOUCHstart ಗಾಗಿ `ನಿತ್ಯ ರೂ.49ರಲ್ಲಿ ಖರೀದಿಸಿ’

 ಟಿ.ವಿ.ಎಸ್ ಮೋಟರ್ ಕಂಪನಿಯಿಂದ ಟಿವಿಎಸ್ ಎಕ್ಸ್‍ಎಲ್100 i-TOUCHstart ಗಾಗಿ `ನಿತ್ಯ ರೂ.49ರಲ್ಲಿ ಸುಲಭವಾಗಿ ಖರೀದಿಸಿ’ ಯೋಜನೆ


ಟಿವಿಎಸ್ ಮೋಟರ್ ಕಂಪನಿ, ಹೆಸರಾಂತ ದ್ವಿಚಕ್ರ ವಾಹನ ಮತ್ತು ತ್ರಿಚಕ್ರ ವಾಹನಗಳ ಉತ್ಪಾದನಾ ಸಂಸ್ಥೆಯಾಗಿದ್ದು, ಇಂದು ತನ್ನ ಬಹುಪಯೋಗಿ ದ್ವಿಚಕ್ರ ವಾಹನ ಟಿವಿಎಸ್ ಎಕ್ಸ್‍ಎಲ್100ಗಾಗಿ ವೆಚ್ಚ ಸ್ನೇಹಿಯಾಗಿರುವ ನೂತನ ಖರೀದಿ ಯೋಜನೆಯನ್ನು ಪರಿಚಯಿಸಿತು. ಕೈಗೆಟುಕುವ ದರದಲ್ಲಿ ಸಾರಿಗೆ ಸೌಲಭ್ಯವನ್ನು ಒದಗಿಸುವ ಕಂಪನಿಯ ಉದ್ದೇಶಕ್ಕೆ ಅನುಗುಣವಾಗಿ ಯೋಜನೆ ಆರಂಭಿಸಿದ್ದು, ಗ್ರಾಹಕರು ಈಗ ಟಿವಿಎಸ್ ಎಕ್ಸ್‍ಎಲ್100 i-i-TOUCHstart* ಅನ್ನು ಮಾಸಿಕ ರೂ. 1,470ರಲ್ಲಿ ಖರೀದಿಸಬಹುದಾಗಿದೆ. ಇದರಲ್ಲಿ ದೈನಿಕವಾಗಿ ಸಂಗ್ರಹಿಸುವ ಅಥವಾ ಪಾವತಿಸುವ ಕ್ರಮ ಇಲ್ಲ. 

ಲಭ್ಯವಿರುವ ಯೋಜನೆಗಳು

ದಿನಕ್ಕೆ 49 ರೂ ಸುಲಭವಾಗಿ ಪಡೆಯಬಹುದು

ಈಗ ಖರೀದಿಸಿ, ನಂತರ ಪಾವತಿಸಿ

ಕಡಿಮೆ ಡೌನ್ ಪೇಮೆಂಟ್ ರೂ 7,999 ರಿಂದ ಪ್ರಾರಂಭ

ಕಡಿಮೆ ಬಡ್ಡಿದರ ರೂ 7.99%

ಮಾಸಿಕವಾಗಿ ಇಎಂಐ ಅನ್ನು ಮಾತ್ರ ಪಾವತಿಸಬಹುದು.

ಈ ಯೋಜನೆಯ ಉದ್ದೇಶವೆಂದರೆ ಗ್ರಾಹಕರು ತಮ್ಮ ನಿತ್ಯದ ಬಳಕೆಗಾಗಿ ವೈಯಕ್ತಿಕ ವಾಹನ ಪಡೆಯಲು ನೆರವಾಗುವುದೇ ಆಗಿದೆ. ಕಂಪನಿಯು ಈ ಸಂಬಂಧ ಟಿವಿಎಸ್ ಕ್ರೆಡಿಟ್ ಸರ್ವೀಸಸ್, ಶ್ರೀರಾಮ್ ಫೈನಾನ್ಸ್, ಎಲ್&ಟಿ ಮತ್ತು ಐಡಿಎಫ್‍ಸಿ ಫಸ್ರ್ಟ್ ಬ್ಯಾಂಕ್ ಜೊತೆಗೆ ಒಡಂಬಡಿಕೆ ಮಾಡಿಕೊಂಡಿದ್ದು, ನಾಲ್ಕು ಭಿನ್ನ ಅವಧಿಯ ಇಎಂಐ ನೆರವು ಪಡೆಯಬಹುದು. ಟಿವಿಎಸ್ ಎಕ್ಸ್‍ಎಲ್100ಗಾಗಿ ಇದರ ಜೊತೆಗೆ ಇನ್ನೂ ಅನೇಕ ಯೋಜನೆಗಳನ್ನು ಪರಿಚಯಿಸಲಾಗುತ್ತಿದೆ. ಇದರಲ್ಲಿ `ಬೈ ನೌ, ಪೇ ಲೇಟರ್’, `ಲೋ ಡೌನ್ ಪೇಮೆಂಟ್’ ಯೋಜನೆಯನ್ನು ಆರಂಭಿಕ ರೂ. 7,999 ಮತ್ತು ಶೇ 7.99ರ ಕಡಿಮೆ ಬಡ್ಡಿ ಪ್ರಮಾಣದರಲ್ಲಿ ಒದಗಿಸಲಿದೆ.

ಕಳೆದ ಹಲವು ವರ್ಷಗಳಲ್ಲಿ ಟಿವಿಎಸ್ ಎಕ್ಸ್‍ಎಲ್100 ತನ್ನ ದೃಢವಾದ ನಿರ್ಮಾಣ, ಹಣಕ್ಕೆ ಅನುಗುಣವಾದ ಬಹುಬಳಕೆಯ ಸಾಮಥ್ರ್ಯದೊಂದಿಗೆ ವ್ಯಾಪಾರಿಗಳು, ಕೃಷಿಕರು, ಮಾರಾಟಗಾರರಿಗೆ ಸೂಕ್ತ ಮಾಡಿಸಿದಂಥ ವಾಹನವಾಗಿದೆ. ಅಲ್ಲದೆ, ಈ ವಾಹನವು ಕಚೇರಿಗೆ ತೆರಳುವವರಿಗೂ, ಮಹಿಳೆಯರು, ಹಿರಿಯ ನಾಗರಿಕರಿಗೂ ಹೇಳಿ ಮಾಡಿಸಿದಂತಹ ವಾಹನವಾಗಿದೆ. ತನ್ನ ಗ್ರಾಹಕ ಸ್ನೇಹಿ ಸೌಲಭ್ಯದಿಂದಾಗಿ ಅಂದರೆ ಸುಲಭವಾಗಿ ಚಾಲನೆ ಮಾಡುವುದು, ಆಫ್ ಮಾಡುವುದು, ಯುಎಸ್‍ಬಿ ಚಾರ್ಜರ್ ಸೌಲಭ್ಯ, ಆರಾಮದಾಯಕ ಚಾಲನೆಯ ಅನುಭವದಿಂದಾಗಿ ಗಮನಸೆಳೆಯಲಿದೆ.

ಟಿವಿಎಸ್ ಎಕ್ಸ್‍ಎಲ್100 ವಾಹನದಲ್ಲಿ ಎಕೊಥ್ರಸ್ಟ್ ಫ್ಯುಯೆಲ್ ಇಂಜೆಕ್ಷನ್ (ಇಟಿ-ಎಫ್‍ಐ) ತಂತ್ರಜ್ಞಾನವನ್ನು ಅಳವಡಿಸಿದ್ದು, ಇದರಿಂದಾಗಿ ಹೆಚ್ಚುವರಿಯಾಗಿ ಶೇ 15ರಷ್ಟು ಮೈಲೇಜ್ ಸಿಗಲಿದೆ. ಅಲ್ಲದೆ, ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್ (ಐಎಸ್‍ಜಿ) ಸೌಲಭ್ಯದಿಂದಾಗಿ ಸರಾಗ ಮತ್ತು ಸೌಮ್ಯಯುತವಾಗಿ ವಾಹನ ಚಾಲನೆಗೊಳಿಸುವುದು ಸಾಧ್ಯವಿದೆ. ವಾಹನದಲ್ಲಿ 99.7 ಸಿ.ಸಿ. ಸಾಮಥ್ರ್ಯದ ಫೋರ್ ಸ್ಟ್ರೋಕ್‍ನ ಎಂಜಿನ್ ಇದ್ದು, ಇದರ ಗರಿಷ್ಠ ಸಾಮಥ್ರ್ಯ 3.20KW (4.3 bhp) @ 6000 RPM ಮತ್ತು ಗರಿಷ್ಠ ಟಾರ್ಕ್ 6.5 Nm @ 3500 rpm ಸಾಮಥ್ರ್ಯವನ್ನು ಹೊಂದಿದೆ.


ಟಿವಿಎಸ್ ಎಕ್ಸ್‍ಎಲ್100  ವಾಹನವು ಐದು ವಿವಿಧ ಮಾದರಿಗಳಲ್ಲಿ ಲಭ್ಯವಿದೆ. ಟಿವಿಎಸ್ ಎಕ್ಸ್‍ಎಲ್100 ಕಿಕ್‍ಸ್ಟಾರ್ಟ್, ಟಿವಿಎಸ್ ಎಕ್ಸ್‍ಎಲ್100 ಹೆವಿ ಡ್ಯೂಟಿ i-Touchstart*, ಟಿವಿಎಸ್ ಎಕ್ಸ್‍ಎಲ್100 i-Touchstart  ವಿನ್ ಎಡಿಷನ್, ಟಿವಿಎಸ್ ಎಕ್ಸ್‍ಎಲ್100 ಕಂಫರ್ಟ್ ಕಿಕ್‍ಸ್ಟಾರ್ಟ್ ಮತ್ತು ಟಿವಿಎಸ್ ಎಕ್ಸ್‍ಎಲ್100 ಕಂಫರ್ಟ್ i-ಖಿಔUಅಊsಣಚಿಡಿಣ*.

ಇತ್ತೀಚೆಗೆ ಬಿಡುಗಡೆ ಮಾಡಿದ ಟಿವಿಎಸ್ ಎಕ್ಸ್‍ಎಲ್100 ಹೆವಿಡ್ಯೂಟಿ i-ಖಿಔUಅಊsಣಚಿಡಿಣ* ವಿನ್ ಎಡಿಷನ್‍ನಲ್ಲಿ ಡಿಲೈಟ್ ಬ್ಲೂ ಮತ್ತು ಬೀವರ್ ಬ್ರೌನ್ ವರ್ಣದಲ್ಲಿ ಲಭ್ಯವಿದೆ.

ಟಿವಿಎಸ್ ಎಕ್ಸ್‍ಎಲ್100 ಆರಂಭಿಕ ದರ ರೂ. 41,015 ಆಗಿದೆ (ಎಕ್ಸ್ ಷೋರೂಂ ದರ, ಬೆಂಗಳೂರು.)

ಹೆಚ್ಚಿನ ಮಾಹಿತಿಗಾಗಿ ಭೇಟಿ ಕೊಡಿ: https:/www.tvsxl.com/


Post a Comment

0 Comments

Ad Code

Responsive Advertisement