Ticker

6/recent/ticker-posts

Ad Code

Responsive Advertisement

ಸಂಸದೀಯ ಕಾರ್ಯವಿಧಾನ - ಮಾನ್ಯ ಲೋಕಸಭಾಧ್ಯಕ್ಷರೊಂದಿಗೆ ಸಂವಾದ

ಬೆಂಗಳೂರು, ಜೂನ್ 21 ( ಕರ್ನಾಟಕ ವಾರ್ತೆ ) ಸಂಸದೀಯ ಕಾರ್ಯವಿಧಾನ ಕುರಿತು ಮಾನ್ಯ ಲೋಕಸಭಾಧ್ಯಕ್ಷರಾದ ಶ್ರೀ ಓಂ ಬಿರ್ಲಾರವರು ದೇಶದ ಎಲ್ಲಾ ರಾಜ್ಯಗಳ ವಿಧಾನ ಮಂಡಲಗಳ ಸಭಾಪತಿಗಳು ಹಾಗೂ ಸಭಾಧ್ಯಕ್ಷರೊಂದಿಗೆ ಇದೇ ಮಂಗಳವಾರ ದಿನಾಂಕ: ೨೨-೦೬-೨೦೨೧ ರಂದು ಮಧ್ಯಾಹ್ನ ೩-೦೦ ಗಂಟೆಗೆ ವರ್ಚುವಲ್ ಸಭೆ ನಡೆಸಲಿದ್ದು, ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಸಭಾಪತಿಗಳಾದ ಶ್ರೀ ಬಸವರಾಜ ಹೊರಟ್ಟಿಯವರು ಸಂವಾದದಲ್ಲಿ ಭಾಗವಹಿಸಲಿದ್ದಾರೆ.


ಮಾನ್ಯ ಶ್ರೀ ಓಂ ಬಿರ್ಲಾ ಅವರು ಲೋಕಸಭಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಎರಡು ವರ್ಷಗಳು ಸಂದಿರುವ ಹಿನ್ನಲೆಯಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಈ ಸಭೆ ನಡೆಸಲಾಗುತ್ತಿದೆ. ಸಭೆಯಲ್ಲಿ  ಸಭಾಪತಿಗಳಾದ ಶ್ರೀ ಬಸವರಾಜ ಹೊರಟ್ಟಿಯವರು ಸಭಾಪತಿಗಳಾಗಿ ಸದನ ನಿರ್ವಹಿಸಿದ ಅನುಭವ ಹಾಗೂ  ಸಂಸದೀಯ ಕಾರ್ಯವಿಧಾನಗಳ ಕುರಿತು ಸಂವಾದದಲ್ಲಿ ವಿಚಾರ ಮಂಡಿಸಲಿದ್ದಾರೆ. ಅಲ್ಲದೇ ಕೋವಿಡ್ ಸಂದರ್ಭದಲ್ಲಿಯೂ ಸರಕಾರದ ಎಲ್ಲ ನಿಯಮಗಳನ್ನು ಪಾಲಿಸಿ ಸದನ ನಡೆಸಿದ ಕುರಿತು ಸಹ ತಮ್ಮ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ.

Post a Comment

0 Comments

Ad Code

Responsive Advertisement