ಬೆಂಗಳೂರು, ಜೂನ್ 29 ( ಕರ್ನಾಟಕ ವಾರ್ತೆ ) :ಕರ್ನಾಟಕ ಲಲಿತಾ ಕಲಾ ಅಕಾಡೆಮಿಯು 2019 ಜನವರಿಯಿಂದ 2020ರ ಡಿಸೆಂಬರ್‍ವರೆಗೆ ಪ್ರಕಟವಾದ ದೃಶ್ಯಕಲಾ ಲೇಖಕರ ಪುಸ್ತಕಗಳನ್ನು ಖರೀದಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಲಲಿತಕಲಾ ಅಕಾಡೆಮಿಯು ದೃಶ್ಯಕಲೆ, ಸಾಹಿತ್ಯ ಮತ್ತು ಲೇಖಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಒಬ್ಬ ಲೇಖಕರಿಂದ ಗರಿಷ್ಠ ರೂ.5000/- ಮೌಲ್ಯದ ಪುಸ್ತಕಗಳನ್ನು ಖರೀದಿಸಲಾಗುವುದು. ಕಲಾಬರಹಗಾರರು ಎಷ್ಟು ಪುಸ್ತಕಗಳನ್ನು ಬೇಕಿದ್ದರೂ ಆಯ್ಕೆ ಕೋರಿ ಅರ್ಜಿ ಸಲ್ಲಿಸಬಹುದು. ಅಕಾಡೆಮಿಯ ಆಯ್ಕೆ ಸಮಿತಿ ಖರೀದಿಸಬಹುದಾದ ಪುಸ್ತಕಗಳನ್ನು ಅಕಾಡೆಮಿಗೆ ಶಿಫಾರಸ್ಸು ಮಾಡುತ್ತಾರೆ. ಅಂತಿಮ ನಿರ್ಧಾರ ಅಕಾಡೆಮಿಯದ್ದಾಗಿರುತ್ತದೆ.
ಒಂದು ವೇಳೆ ಲೇಖಕರ ಹಲವು ಪುಸ್ತಕಗಳ ರಚಿಸಿದ್ದರೂ ಕನಿಷ್ಠ 2 ಪುಸ್ತಕಗಳನ್ನು ಮಾತ್ರ ಖರೀದಿಗೆ ಪರಿಗಣಿಸಲಾಗುವುದು. ಆಯ್ಕೆಯಾದ ಬರಹಗಾರರು 30 ದಿನಗಳೊಳಗಾಗಿ ಅಕಾಡೆಮಿಗೆ ರೂ.5000 ಮೌಲ್ಯದ ಪುಸ್ತಕಗಳನ್ನು ತಲುಪಿಸಬೇಕು, ಅನಂತರವಷ್ಟೇ ಅವರ ಖಾತೆಗೆ ಆರ್.ಟಿ.ಜಿ.ಎಸ್ ಮೂಲಕ ಹಣ ಪಾವತಿಸಲಾಗುವುದು.
ಪುಸ್ತಕ ಖರೀದಿಗೆ ಅರ್ಜಿ ಸಲ್ಲಿಸುವವರು ನಿಗಧಿತ ನಮೂನೆ ಅರ್ಜಿ ಭರ್ತಿ ಮಾಡಿ, ಮೂರು ಪುಸ್ತಕಗಳೊಂದಿಗೆ ಜುಲೈ 15 ರೊಳಗೆ ಕರ್ನಾಟಕ ಲಲಿತಾ ಕಲಾ ಅಕಾಡೆಮಿಗೆ ಸಲ್ಲಿಸಬೇಕು. ಅರ್ಜಿ ಸಲ್ಲಿಸುವಾಗ ಅಗತ್ಯ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು, ಹಾಗೂ ಕಲಾ ಲೇಖಕಕರು ಸ್ವಯಂ ದೃಢೀಕರಣ ಪತ್ರ ಲಗತ್ತಿಸಬೇಕು.
ಹೆಚ್ಚಿನ ಮಾಹಿತಿಗಾಗಿ ರಿಜಿಸ್ಟ್ರಾರ್, ಕರ್ನಾಟಕ ಲಲಿತಕಲಾ ಅಕಾಡೆಮಿ, ಜೆ.ಸಿ.ರಸ್ತೆ, ಬೆಂಗಳೂರು ಹಾಗೂ ದೂರವಾಣಿ ಸಂಖ್ಯೆ: 080-22480297ಗೆ ಸಂಪರ್ಕಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

0 Comments